ತೆಲುಗಿನ ಹನುಮಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಸರ್ ನೋಡಿದ ನೆಟ್ಟಿಗರು ಪ್ರಭಾಸ್ ಆದಿಪುರುಷ್ ಸಿನಿಮಾಗಿಂತ ಉತ್ತಮವಾಗಿದೆ ಎನ್ನುತ್ತಿದ್ದಾರೆ. 

ತೆಲುಗು ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಗ್ರಾಫಿಕ್ಸ್, ರಾವಣ ಪಾತ್ರ ಸೇರಿದಂತೆ ಅನೇಕ ವಿಚಾರಕ್ಕೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. 500 ಕೋಟಿ ವೆಚ್ಚದಲ್ಲಿ ಬಂದ ಆದಿಪುರುಷ್ ಕಳಪೆ ಗ್ರಾಫಿಕ್ಸ್ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ಮತ್ತೆ ಆದಿಪುರುಷ್ ಸಿನಿಮಾವನ್ನು ತಿವಿಯುತ್ತಿದ್ದಾರೆ ನೆಟ್ಟಿಗರು. ಇದಕ್ಕೆ ಕಾರಣ ಹನುಮಾನ್ ಸಿನಿಮಾ ಟೀಸರ್. ತೆಲುಗಿನ ಹನುಮಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದ ಗ್ರಾಫಿಕ್ಸ್ ನೋಡಿ ನೆಟ್ಟಿಗರು ಆದಿಪುರುಷ್ ಸಿನಿಮಾಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಬಂದ ಹನುಮಾನ್ ಸಿನಿಮಾದ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಟೀಸರ್ ನೋಡಿ ಚಿತ್ರವು ಹನುಮನ ಮತ್ತೊಂದು ಅವತಾರ ಎಂದು ಹೇಳುತ್ತಿದ್ದಾರೆ. 

ಅಂದಹಾಗೆ ಹನುಮಾನ್ ಸಿನಿಮಾ 30 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದೆ ಎನ್ನಲಾಗಿದೆ. ಕಡಿಮೆ ಬಜೆಟ್ ನಲ್ಲಿ ತಯಾರಾದರೂ ಗ್ರಾಫಿಕ್ಸ್ ಅಭಿಮಾನಿಗಳ ಹೃದಯ ಗೆದ್ದಿದೆ. ಟೀಸರ್ ನೋಡಿದ ಬಹುತೇಕರು ಆದಿಪುರುಷ್ ಸಿನಿಮಾಗಿಂತ ಉತ್ತಮವಾಗಿದೆ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಹನುಮಾನ್ ಆಗಿ ತೇಜ ಸಜ್ಜು ನಟಿಸಿದ್ದಾರೆ. ಪುಟ್ಟ ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟೀಸರ್ ನಲ್ಲಿ ಬರುವ ದೈತ್ಯ ಹನುಮಾನ್ ಪ್ರತಿಮೆ ನೋಡಿ ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ಮತ್ತು ಅಮೃತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. 

'ಆದಿಪುರುಷ್' ಟ್ರೋಲ್‌ಗೆ ಕೊನೆಗೂ ಮೌನ ಮುರಿದ ಕೃತಿ; ನಿರ್ದೇಶಕರ ಬಗ್ಗೆ ಹೆಮ್ಮೆ ಇದೆ ಎಂದ ನಟಿ

ಅನೇಕರು ಕಾಮೆಂಟ್ ಮಾಡಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ಯಾನ್ ಇಂಡಿಯಾ ಟೀಸರ್ ಎನ್ನುತ್ತಿದ್ದಾರೆ. ಆದಿಪುರುಷ್ ಟೀಸರ್ ಗಿಂತ ಉತ್ತಮವಾಗಿದೆ ಎಂದು ಇನಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಹನುಮಾನ್ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಹನುಮಾನ್ ಯಾವಾಗ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಇನ್ನು ರಿವೀಲ್ ಮಾಡಿಲ್ಲ ಸಿನಿಮಾತಂಡ. 

ಹಿಗ್ಗಾಮುಗ್ಗಾ ಟ್ರೋಲ್; ರಾವಣನ ಗಡ್ಡ ತೆಗೆಯಲು ನಿರ್ಧರಿಸಿದ 'ಆದಿಪುರುಷ್' ತಂಡ

ಆದರೆ ಆದಿಪುರುಷ್ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಜೂನ್ ತಿಂಗಳಿಗೆ ಪೋಸ್ಟ್‌ಪೋನ್ ಆಗಿದೆ. ಸಿನಿಮಾದ ಕೆಲವು ದೃಶ್ಯಗಳನ್ನು ರೀ ಶೂಟ್ ಮಾಡಲಾಗುತ್ತಿದೆ ಹಾಗೂ ಗ್ರಾಫಿಕ್ಸ್ ಗುಣಮಟ್ಟ ಹೆಚ್ಚಿಸಲಾಗುತ್ತಿದೆ. ಟ್ರೋಲ್‌ಗೆ ಭಯಬಿದ್ದ ಆದಿಪುರುಷ್ ತಂಡ ರಿಲೀಸ್ ಡೇಟ್ ಮುಂದಕ್ಕೆ ಹಾಕಿದೆ. ಈ ನಡುವೆ ಹನುಮಾನ್ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಆದಿಪುರುಷ್ ತಂಡಕ್ಕೆ ಮತ್ತಷ್ಟು ತಲೆನೋವಾಗಿದೆ.