Asianet Suvarna News Asianet Suvarna News

ಅನಿಮಲ್​ ಟ್ರೇಲರ್​ ಬಿಡುಗಡೆ: ಲಿಪ್​ಲಾಕ್​ ರಶ್ಮಿಕಾಳ ಸೆಕ್ಸಿಸಂ ಕುರಿತು ಪ್ರಶ್ನೆ ಮಾಡ್ತಿದ್ದಾರೆ ನೆಟ್ಟಿಗರು!

ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​  ಅನಿಮಲ್​ ಟ್ರೇಲರ್​ ಬಿಡುಗಡೆಯಾಗಿದೆ. ಟ್ರೇಲರ್​ ನೋಡಿ ಸೆಕ್ಸಿಸಮ್ ಕುರಿತು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.  
 

Netizens questioning about sexism in Rashmika and Ranbir stared Animal trailer suc
Author
First Published Nov 25, 2023, 11:33 AM IST

ಬಾಲಿವುಡ್​ನ ಬಹು ನಿರೀಕ್ಷಿತ ಅನಿಮಲ್​ ಚಿತ್ರ ಬಿಡುಗಡೆಗೆ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಬರುವ ಡಿಸೆಂಬರ್​ 1ರಂದು ಚಿತ್ರ ಬಿಡುಗಡೆಯಾಗಲಿದೆ. ಇದರ ಟ್ರೇಲರ್​ ಬಿಡುಗಡೆಯಾಗಿದ್ದು ಸಕತ್​ ಸದ್ದು ಮಾಡುತ್ತಿದೆ. ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಸಕತ್​ ಸದ್ದು ಮಾಡುತ್ತಿರುವ ಚಿತ್ರಗಳೆಂದರೆ ಶಾರುಖ್​ ಖಾನ್​ ಅವರ ಜವಾನ್​. ಈ ಚಿತ್ರವು 1100 ಕೋಟಿಗೂ ಅಧಿಕ ಗಳಿಕೆ ಮಾಡಿ ಮಕಾಡೆ ಮಲಗಿದ್ದ ಬಾಲಿವುಡ್​​ಗೆ ಜೀವ ತುಂಬಿಸಿದೆ. ಇದಕ್ಕೂ ಮೊದಲು ಪಠಾಣ್​ ಕೂಡ ಇದೇ ರೀತಿ ಭರ್ಜರಿ ಯಶಸ್ಸು ಗಳಿಸಿದ್ದರೆ, ಕಳೆದ ವರ್ಷ ಬಿಡುಗಡೆಯಾಗಿದ್ದ ಬ್ರಹ್ಮಾಸ್ತ್ರ ಚಿತ್ರವೂ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿತ್ತು. ಜಗತ್ತಿನಾದ್ಯಂತ ಬ್ರಹ್ಮಾಸ್ತ್ರ ಚಿತ್ರವು 418 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಈ ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದೆ ಅನಿಮಲ್​ ಚಿತ್ರ. ರಣಬೀರ್​ ಕಪೂರ್​ (Ranbir Kapoor)  ಜೊತೆ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್​ (Animal) ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್​ ಮತ್ತು ಬ್ರಹ್ಮಾಸ್ತ್ರದ ದಾಖಲೆಗಳನ್ನು ಮುರಿದು ಹಾಕಿದೆ. ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದ್ದು, ಇಲ್ಲಿಯ ಸ್ಕ್ರೀನಿಂಗ್​ಗೆ ಸಂಬಂಧಿಸಿದಂತೆ ಅನಿಮಲ್​ ದಾಖಲೆ ಬರೆದಿದೆ. 

ಇದೀಗ ಟ್ರೇಲರ್​ ಬಗ್ಗೆಯೂ ಸಾಕಷ್ಟು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.  ಗ್ಯಾಂಗ್​ಸ್ಟರ್​ - ಆ್ಯಕ್ಷನ್- ಥ್ರಿಲ್ಲರ್ ಜೊತೆಗೆ ಇದು ತಂದೆ ಮಗನ ಬಾಂಧವ್ಯದ ಕಥೆಯನ್ನು ಹೊಂದಿರುವ ಸಿನಿಮಾ ಎಂದು ಟ್ರೇಲರ್​ನಲ್ಲಿ ಕಂಡುಬರುತ್ತಿದೆ.  ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ನಟಿಸಿದ್ದಾರೆ. ಮೂರು ನಿಮಿಷಗಳ ಈ ಟ್ರೇಲರ್​ನಲ್ಲಿ ನಾಯಕ ರಣಬೀರ್​  ಆವೇಶಭರಿತರಾಗಿ ಕಂಡಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳುವ ಗ್ಯಾಂಗ್​ಸ್ಟರ್​ನಂತೆ ಕಾಣಿಸುತ್ತಿದ್ದಾರೆ. ರಕ್ತಸಿಕ್ತ ದೃಶ್ಯಗಳೊಂದಿಗೆ ಚಾಕು, ಕೊಡಲಿ, ಮಷಿನ್, ಗನ್ ಹಿಡಿದುಕೊಂಡಿರುವುದನ್ನು ನೋಡಬಹುದು.  ಈ ಟ್ರೇಲರ್​ಗೆ ಬಿಡುಗಡೆಯಾಗುತ್ತಿದ್ದಂತೆಯೇ ಲಿಪ್​ಲಾಪ್​ ಅಕ್ಕ ಎಂದೇ ಫೇಮಸ್​ ಆಗಿರೋ ರಶ್ಮಿಕಾ ಮಂದಣ್ಣನವರ ಸೆಕ್ಸಿಸಂ ಕುರಿತು ಹಲವರು ಪ್ರತಿಕ್ರಿಯೆ ತೋರಿದ್ದಾರೆ. 

ಬಿಡುಗಡೆಗೂ ಮುನ್ನವೇ ಜವಾನ್​, ಬ್ರಹ್ಮಾಸ್ತ್ರದ ದಾಖಲೆ ಮುರಿದ ಅನಿಮಲ್​ ಚಿತ್ರ!

ಅಷ್ಟಕ್ಕೂ ಅನಿಮಲ್​ ಚಿತ್ರದ ಹಾಡೊಂದು ಬಿಡುಗಡೆಯಾದ ದಿನ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಲಿಪ್​ಲಾಕ್​ ಸೀನ್​ ಸಾಕಷ್ಟು ಹಲ್​ಚಲ್​ ಸೃಷ್ಟಿಸಿರುವುದು ಗೊತ್ತೇ ಇದೆ.  ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​  ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈಗಲೂ ಅದು ಸಾಕಷ್ಟು ವೈರಲ್​ ಆಗುತ್ತಲೇ ಇದೆ.  ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ. ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ನಟಿ ರಶ್ಮಿಕಾ, ಬೋಲ್ಡ್​ ಪಾತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಪರಿಯ ರೊಮ್ಯಾನ್ಸ್​ ದೃಶ್ಯ.  ಚಿತ್ರದ ಹಾಡು ಹುವಾ ಮೈನ...  ರಿಲೀಸ್​ ಆಗಿತ್ತು. ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ರೊಮ್ಯಾನ್ಸ್​ ಹೇರಳವಾಗಿ ನೋಡಬಹುದು. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್​ ದೇವರಕೊಂಡ ನಡುವೆ ಕುಚ್​ ಕುಚ್​ ನಡೆಯುತ್ತಿದೆ, ಇಬ್ಬರೂ ಸೇರಿ ಟರ್ಕಿಯಲ್ಲಿ ಎಂಜಾಯ್​ ಮಾಡಿದ್ದಾರೆ ಎಂಬೆಲ್ಲಾ ಫೋಟೋಗಳು, ಗಾಸಿಪ್​ಗಳು ಹರಿದಾಡುತ್ತಿರುವ ನಡುವೆಯೇ ಇದು ಇಂದಿಗೂ ಸಾಕಷ್ಟು ಸದ್ದು ಮಾಡುತ್ತಿದೆ.

ಇದೀಗ ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ರಣಬೀರ್​ ಕಪೂರ್​ ರಶ್ಮಿಕಾ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ನೋಡಬಹುದು. ಆಕೆಯ ಕುತ್ತಿಗೆಯನ್ನು ಹಿಡಿದಿದ್ದಾರೆ. ಈ ರೀತಿಯ ಲಿಂಗಭೇದಭಾವ (sexism) ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಹೆಣ್ಣುಮಕ್ಕಳ ಮೇಲಿನ ಹಿಂಸೆ, ದೌರ್ಜನ್ಯಗಳನ್ನು ಏಕಿಷ್ಟು ವಿಜೃಂಭಿಸಲಾಗುತ್ತದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಸೆಕ್ಸಿಸಂ ಯಾಕೆ ಯಾವಾಗಲೂ ಟ್ರೆಂಡ್​​ ಆಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಇದು ತಲೆತಲಾಂತರಗಳಿಂದ ನಡೆದು ಬಂದಿರುವ ಘಟನೆಯಾಗಿದೆ ಎಂದು ಕೆಲವರು ಹೇಳಿದರೆ, ಹೇಳಿ-ಕೇಳಿ ಇದು ಸಿನಿಮಾ. ಬೇಕಿದ್ದರೆ, ನೋಡಿ, ಬೇಡದಿದ್ದರೆ ಬಿಡಿ ಎನ್ನುತ್ತಿದ್ದಾರೆ. ಇದು ನಿಜ ಜೀವನದ ಕಥೆ ಎಂದು ಚಿತ್ರದಲ್ಲಿ ಹೇಳಲಾಗಿದೆ. ಆದ್ದರಿಂದ ನಿಜ ಜೀವನದಲ್ಲಿ ಹಾಗೆಯೇ ಇದ್ದರೆ, ಒಟ್ಟಿನಲ್ಲಿ, ಅನಿಮಲ್​ ಚಿತ್ರ ಭಾರಿ ಸದ್ದು ಮಾಡುತ್ತಿದೆ. 

ANIMAL: ಸುದೀರ್ಘ ಲಿಪ್​ಲಾಕ್​ ನಂತ್ರ ರಣವೀರ್-ರಶ್ಮಿಕಾ ಮಂದಣ್ಣ ಬ್ರೇಕಪ್​! ವಿಡಿಯೋ ವೈರಲ್​
 

Follow Us:
Download App:
  • android
  • ios