ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ನಟನೆ ಅನಿಮಲ್​ ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್​, ಬ್ರಹ್ಮಾಸ್ತ್ರದ ದಾಖಲೆ ಮುರಿದಿದೆ. ಏನಿದು ವಿಷ್ಯ? 

ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಸಕತ್​ ಸದ್ದು ಮಾಡುತ್ತಿರುವ ಚಿತ್ರಗಳೆಂದರೆ ಶಾರುಖ್​ ಖಾನ್​ ಅವರ ಜವಾನ್​. ಈ ಚಿತ್ರವು 1100 ಕೋಟಿಗೂ ಅಧಿಕ ಗಳಿಕೆ ಮಾಡಿ ಮಕಾಡೆ ಮಲಗಿದ್ದ ಬಾಲಿವುಡ್​​ಗೆ ಜೀವ ತುಂಬಿಸಿದೆ. ಇದಕ್ಕೂ ಮೊದಲು ಪಠಾಣ್​ ಕೂಡ ಇದೇ ರೀತಿ ಭರ್ಜರಿ ಯಶಸ್ಸು ಗಳಿಸಿದ್ದರೆ, ಕಳೆದ ವರ್ಷ ಬಿಡುಗಡೆಯಾಗಿದ್ದ ಬ್ರಹ್ಮಾಸ್ತ್ರ ಚಿತ್ರವೂ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿತ್ತು. ಜಗತ್ತಿನಾದ್ಯಂತ ಬ್ರಹ್ಮಾಸ್ತ್ರ ಚಿತ್ರವು 418 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಈ ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದೆ ಅನಿಮಲ್​ ಚಿತ್ರ. ರಣಬೀರ್​ ಕಪೂರ್​ (Ranbir Kapoor) ಜೊತೆ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್​ (Animal) ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್​ ಮತ್ತು ಬ್ರಹ್ಮಾಸ್ತ್ರದ ದಾಖಲೆಗಳನ್ನು ಮುರಿದು ಹಾಕಿದೆ. ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದ್ದು, ಇಲ್ಲಿಯ ಸ್ಕ್ರೀನಿಂಗ್​ಗೆ ಸಂಬಂಧಿಸಿದಂತೆ ಅನಿಮಲ್​ ದಾಖಲೆ ಬರೆದಿದೆ. 

ಡಿಸೆಂಬರ್​ 1ರಂದು ತೆರೆಗೆ ಬರಲು ಸಿದ್ಧವಾಗಿರುವ ಅನಿಮಲ್​ ಚಿತ್ರ ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದ್ದು ಸಿನಿ ಪ್ರಿಯರಿಗೆ ತಿಳಿದಿರುವ ವಿಷಯವೇ. ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈಗಲೂ ಅದು ಸಾಕಷ್ಟು ವೈರಲ್​ ಆಗುತ್ತಲೇ ಇದೆ. ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ. ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ನಟಿ ರಶ್ಮಿಕಾ, ಬೋಲ್ಡ್​ ಪಾತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಪರಿಯ ರೊಮ್ಯಾನ್ಸ್​ ದೃಶ್ಯ. ಚಿತ್ರದ ಹಾಡು ಹುವಾ ಮೈನ... ರಿಲೀಸ್​ ಆಗಿತ್ತು. ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ರೊಮ್ಯಾನ್ಸ್​ ಹೇರಳವಾಗಿ ನೋಡಬಹುದು. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್​ ದೇವರಕೊಂಡ ನಡುವೆ ಕುಚ್​ ಕುಚ್​ ನಡೆಯುತ್ತಿದೆ, ಇಬ್ಬರೂ ಸೇರಿ ಟರ್ಕಿಯಲ್ಲಿ ಎಂಜಾಯ್​ ಮಾಡಿದ್ದಾರೆ ಎಂಬೆಲ್ಲಾ ಫೋಟೋಗಳು, ಗಾಸಿಪ್​ಗಳು ಹರಿದಾಡುತ್ತಿರುವ ನಡುವೆಯೇ ಇದು ಇಂದಿಗೂ ಸಾಕಷ್ಟು ಸದ್ದು ಮಾಡುತ್ತಿದೆ.

ANIMAL: ಸುದೀರ್ಘ ಲಿಪ್​ಲಾಕ್​ ನಂತ್ರ ರಣವೀರ್-ರಶ್ಮಿಕಾ ಮಂದಣ್ಣ ಬ್ರೇಕಪ್​! ವಿಡಿಯೋ ವೈರಲ್​

 ಈಗ ‘ಅನಿಮಲ್’ ಚಿತ್ರಕ್ಕೆ ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ಸಿಗುತ್ತಿದೆ. ಇದರಿಂದಾಗಿ ಇದರ ಗಳಿಕೆಯಲ್ಲಿ ಏರುಗತಿಯಾಗಿದೆ. ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಅರ್ಜುನ್ ರೆಡ್ಡಿ ಹಾಗೂ ಇದರ ಹಿಂದಿ ರಿಮೇಕ್ ಕಬೀರ್ ಸಿಂಗ್​ನಂಥ ಬ್ಲಾಕ್​ಬಸ್ಟರ್​ ಚಿತ್ರ ಕೊಟ್ಟ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ‘ಅನಿಮಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದೆ. ಜವಾನ್​ ಚಿತ್ರ ಈ ಭಾಗದಲ್ಲಿ 850 ಪರದೆಗಳ ಮೇಲೆ ರಿಲೀಸ್​ ಆಗಿದ್ದವು, ಇನ್ನು ‘ಬ್ರಹ್ಮಾಸ್ತ್ರ’ ಕ್ಕೆ 810 ಪರದೆಗಳು ದೊರೆತಿದ್ದವು. ಈ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮುರಿದು ಹಾಕಿದೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಹಿಂದಿ ಸಿನಿಮಾ ಎನ್ನುವ ಜನಪ್ರಿಯತೆ ಈ ಚಿತ್ರಕ್ಕೆ ಸಿಕ್ಕಿದೆ.


ಟಿ -ಸೀರಿಸ್ ಮೂಲಕ ಭೂಷಣ್​ ಕುಮಾರ್, ಕ್ರಿಶನ್ ಕುಮಾರ್ ಮೊದಲಾದವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಣಬೀರ್, ರಶ್ಮಿಕಾ ಜೊತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಪಾತ್ರಗಳು ತುಂಬ ಬೋಲ್ಡ್​ ಆಗಿ ಮೂಡಿಬಂದಿವೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ಕನ್ನಡದ ನಂತರ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಬಾಲಿವುಡ್‌ನಲ್ಲಿ ಕೂಡಾ ಬೇಡಿಕೆ ನಟಿಯಾಗಿ ಹೆಸರು ಮಾಡಿದ್ದಾರೆ. 'ಅನಿಮಲ್‌' ಚಿತ್ರತಂಡ ಇತ್ತೀಚೆಗೆ ರಶ್ಮಿಕಾ ಫಸ್ಟ್‌ಲುಕ್‌ ಬಿಡುಗಡೆ ಮಾಡಿತ್ತು. ಸೀರೆ, ಮಾಂಗಲ್ಯ, ಕುಂಕುಮ ಹಾಕಿ ಗೃಹಿಣಿ ಲುಕ್‌ನಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದರು. ನಂತರ ಹಾಡಿನ ವಿಡಿಯೋದಿಂದ ಫ್ಯಾನ್ಸ್​ ಹುಬ್ಬೇರಿಸಿದ್ದು, ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. 

ಹಳೆಯ ಲವ್​ ಬರ್ಡ್ಸ್​ ಮತ್ತೆ ಒಂದಾದ್ರಾ? ಸಲ್ಮಾನ್​- ಐಶ್ವರ್ಯಾ ತಬ್ಬಿಕೊಂಡ ವಿಡಿಯೋ ರಹಸ್ಯವೇನು?