ವಿಮಾನದಲ್ಲಿ ಲಿಪ್​ಲಾಕ್​ ಮಾಡಿ ಹಲ್​ಚಲ್​ ಸೃಷ್ಟಿಸಿದ್ದ ರಶ್ಮಿಕಾ ಮತ್ತು ರಣವೀರ್​ ಜೋಡಿ ಈಗ ಬ್ರೇಕಪ್​ ಆಗಿದೆ. ಏನಿದು ವಿಷ್ಯ?  

ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ. ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ನಟಿ ರಶ್ಮಿಕಾ, ಬೋಲ್ಡ್​ ಪಾತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಪರಿಯ ರೊಮ್ಯಾನ್ಸ್​ ದೃಶ್ಯ. ಅಂದಹಾಗೆ, ಈ ಪರಿಯ ಲಿಪ್​ಲಾಕ್​ ಮಾಡಿರುವುದು ಅನಿಮಲ್​ ಚಿತ್ರಕ್ಕಾಗಿ. ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ರಣಬೀರ್​ ಕಪೂರ್​ (Ranbir Kapoor) ಜೋಡಿಯಾಗಿ ನಟಿಸಿದ್ದು, ಅದರ ಮೊದಲ ಹಾಡು ಹುವಾ ಮೈನ... ರಿಲೀಸ್​ ಆಗಿತ್ತು. ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ರೊಮ್ಯಾನ್ಸ್​ ಹೇರಳವಾಗಿ ನೋಡಬಹುದು. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್​ ದೇವರಕೊಂಡ ನಡುವೆ ಕುಚ್​ ಕುಚ್​ ನಡೆಯುತ್ತಿದೆ, ಇಬ್ಬರೂ ಸೇರಿ ಟರ್ಕಿಯಲ್ಲಿ ಎಂಜಾಯ್​ ಮಾಡಿದ್ದಾರೆ ಎಂಬೆಲ್ಲಾ ಫೋಟೋಗಳು, ಗಾಸಿಪ್​ಗಳು ಹರಿದಾಡುತ್ತಿರುವ ನಡುವೆಯೇ ಇದು ಇಂದಿಗೂ ಸಾಕಷ್ಟು ಸದ್ದು ಮಾಡುತ್ತಿದೆ.

‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಪಾತ್ರಗಳು ತುಂಬ ಬೋಲ್ಡ್​ ಆಗಿ ಮೂಡಿಬಂದಿವೆ ಎಂಬುದಕ್ಕೆ ಈ ಹಾಡು ಸಾಕ್ಷಿ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆಗ ಬೋಲ್ಡ್​ ಆಗಿ ನಟಿಸಿದ್ದ ಜೋಡಿ ಈಗ ಬ್ರೇಕಪ್​ ಆದಂತಿದೆ. ಹೌದು. ಈ ಚಿತ್ರದ ಸತರಂಗ್​ ಎನ್ನುವ ಇನ್ನೊಂದು ಹಾಡು ರಿಲೀಸ್​ ಆಗಿದೆ. ಅದರಲ್ಲಿ ಇಬ್ಬರ ಬ್ರೇಕಪ್​ ಸ್ಟೋರಿ ಇದೆ. ಚರ್ವಾಚೌತ್​ನಲ್ಲಿ ಪತಿಯ ಮುಖವನ್ನು ಜರಡಿಯಲ್ಲಿ ನೋಡುವಂತೆ ರಶ್ಮಿಕಾ ಕೂಡ ನೋಡಿದ್ದಾರೆ. ನಂತರ ಇಬ್ಬರು ಬ್ರೇಕಪ್​ ಆದಂತಿದ್ದು, ಮತ್ತೆ ಲಿಪ್​ಲಾಕ್​ ಮಾಡುತ್ತಿದ್ದಾರೆ. ಇವರ ಬ್ರೇಕಪ್​ ನೋಡಿ ಫ್ಯಾನ್ಸ್​ ಅಯ್ಯೋ ಅನ್ನುತ್ತಿದ್ದಾರೆ.

ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್​ ಕಪೂರ್​ ಈ ಪರಿ ರೊಮ್ಯಾನ್ಸ್! ಉಫ್​ ಎಂದ ಫ್ಯಾನ್ಸ್​...

ಇದಕ್ಕೂ ಮುನ್ನ ರಿಲೀಸ್ ಆಗಿದ್ದ ಹಾಡಿನಲ್ಲಿ ರಣಬೀರ್​ ಮತ್ತು ರಶ್ಮಿಕಾ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತಪಡಿಸುತ್ತಾರೆ. ನಟಿ ಬಾಯ್​ ಫ್ರೆಂಡ್​ನನ್ನು ಮನೆಯವರ ಮುಂದೆ ಕೂರಿಸಿದ್ದಾಳೆ. ಮನೆಯವರೆಲ್ಲಾ ಪ್ರಶ್ನೆಗಳ ಸುರಿಮಳೆಗೈದ ವೇಳೆ ಇಬ್ಬರು ಇಡೀ ಕುಟುಂಬದ ಮುಂದೆ ಲಿಪ್ ಲಾಕ್ ಮಾಡುವುದನ್ನು ಇದರಲ್ಲಿ ನೋಡಬಹುದು. ಬಳಿಕ ಮನೆಬಿಟ್ಟು ಬಂದು ಪ್ರೈವೆಟ್ ಜೆಟ್​ ಏರುತ್ತಾರೆ. ಜೆಟ್​ ನಲ್ಲಿ ರೊಮ್ಯಾನ್ಸ್ ಮಾಡುತ್ತಾರೆ, ಕೊನೆಗೆ ದೇವಸ್ಥಾನವೊಂದರಲ್ಲಿ ಮದುವೆಯನ್ನೂ ಆಗುವುದನ್ನು ನೋಡಬಹುದು. 

ಅಂದಹಾಗೆ, 'ಅನಿಮಲ್‌' ಚಿತ್ರವನ್ನು ಟಿ ಸೀರೀಸ್ ಫಿಲ್ಮ್ಸ್‌, ಭದ್ರಕಾಳಿ ಪಿಕ್ಚರ್ಸ್‌, ಸಿನಿ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌, ಮುರ್ದ್‌ ಖೇತಾನಿ, ಪ್ರಣಯ್‌ ರೆಡ್ಡಿ ವಂಗಾ ಜೊತೆ ಸೇರಿ ನಿರ್ಮಿಸಿದ್ದಾರೆ. ಇದರ ನಿರ್ದೇಶಕರು ಸಂದೀಪ್‌ ರೆಡ್ಡಿ ವಂಗಾ. ಚಿತ್ರದ ಹಾಡುಗಳಿಗೆ ಪ್ರೀತಮ್‌, ವಿಶಾಲ್‌ ಮಿಶ್ರಾ, ಜಾನಿ ಹಾಗೂ ಇನ್ನಿತರರು ಸಂಗೀತ ನೀಡಿದ್ದಾರೆ. ಡಿಸೆಂಬರ್‌ 1 ರಂದು 'ಅನಿಮಲ್‌' ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಅನಿಲ್‌ ಕಪೂರ್‌, ಶಕ್ತಿ ಕಪೂರ್‌, ಸುರೇಶ್‌ ಒಬೆರಾಯ್‌ ಕೂಡ ನಟಿಸಿದ್ದಾರೆ.

ಕುಡುಕನಿಂದ ನಟಿಗೆ ವಿಮಾನದಲ್ಲಿ ರಾತ್ರಿಯೆಲ್ಲ ಕಿರುಕುಳ! ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದಿವ್ಯಪ್ರಭಾ

View post on Instagram