ಜಾನ್ವಿ ಕಪೂರ್‌ ನಟಿಸಿರುವ "ಗುಂಜನ್‌ ಸಕ್ಸೇನಾ- ಕಾರ್ಗಿಲ್‌ ಗರ್ಲ್'' ಸಿನಿಮಾ ಆಗಸ್ಟ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗ್ತಿದೆ. ಇದು ಗುಂಜನ್‌ ಸಕ್ಸೇನಾ ಎಂಬ, ಭಾರತೀಯ ಮಿಲಿಟರಿಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ದೇಶದ ಮೊದಲ ಫೈಟರ್‌ ಜೆಟ್‌ ಪೈಲಟ್‌ ಅವರ ಜೀವನ ಹಾಗೂ ಸಾಧನೆಯನ್ನು ಆಧರಿಸಿದ ಸಿನಿಮಾ. ಈಕೆ ಕಾರ್ಗಿಲ್‌ ಯುದ್ಧ ನಡೆದಾಗ ಅಲ್ಲಿ ಯುದ್ಧವಿಮಾನವನ್ನು ಹಾರಾಡಿಸಿದ್ದಳು. ಸಿನಿಮಾದಲ್ಲಿ ಈಕೆಯ ರೋಲ್‌ ಅನ್ನು ಜಾನ್ವಿ ಕಪೂರ್‌ ಮಾಡಿದ್ದಾರೆ. ಸಿನಿಮಾದ ಒಂದು ಭಾಗ ನೋಡಿರುವ ಗುಂಜನ್‌ ಸಕ್ಸೇನಾ, ನನ್ನ ಪಾತ್ರವನ್ನು ಜಾನ್ವಿ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದೂ ಹೇಳಿದ್ದು ಸುದ್ದಿಯಾಗಿತ್ತು.

ಈಗ ಅದೇ ಫಿಲಂಗೆ ಸಂಬಂಧಿಸಿದ ಜಾನ್ವಿ ಕಪೂರಳನ್ನು ನೆಪೊಟಿಸಂ (ಸ್ವಜನಪಕ್ಷಪಾತ) ವಿವಾದ ಸುತ್ತಿಕೊಂಡಿದೆ. ನೆಪೊಟಿಸಂ ವಿಚಾರ, ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆಯ ದಿನಗಳಿಂದಲೂ ಚರ್ಚೆಯಾಗುತ್ತಿದೆ. ಸ್ವಜನಪಕ್ಷಪಾತದಿಂದಾಗಿಯೇ ಸುಶಾಂತ್‌ ಅನೇಕ ರೋಲ್‌ಗಳನ್ನು ಕಳೆದುಕೊಳ್ಳುವ ಹಾಗಾಯಿತು; ಅದರಿಂದಲೇ ಆತ ಡಿಪ್ರೆಶನ್‌ಗೆ ಬಿದ್ದ ಹಾಗೂ ಆತ್ಮಹತ್ಯೆ ಮಾಡಿಕೊಂಡ ಎಂಬುದು ಈ ವಿವಾದದ ತಿರುಳು. ಕಂಗನಾ ರಣೌತ್ ಮುಂತಾದವರು ಈ ಬಗ್ಗೆ ಓಪನ್‌ ಆಗಿ ಮಾತಾಡುವ ಮೂಲಕ ದೊಡ್ಡ ಚರ್ಚೆಯೇ ಆಗಿತ್ತು. ಈಗ ಅದು ಜಾನ್ವಿ ಕೊರಳಿಗೂ ಸುತ್ತಿಕೊಂಡಿದೆ.

ವಿಷಯ ಏನಪ್ಪಾ ಅಂದರೆ, ಜಾನ್ವಿ ನಟಿಸಿದ ಕಾರ್ಗಿಲ್‌ ಗರ್ಲ್ ಚಿತ್ರವನ್ನು ಒಟಿಟಿ ಫ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ 70 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ. ಆದರೆ ಇದೇ ಸಂದರ್ಭದಲ್ಲಿ ನಟ ವಿದ್ಯುತ್‌ ಜಾಮ್‌ವಾಲ್‌ ನಟಿಸಿದ ಖುದಾ ಹಾಫಿಜ್‌ ಎಂಬ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ ತಿರಸ್ಕರಿಸಿತ್ತು. ನಂತರ ಡಿಸ್ನಿ ಹಾಟ್‌ಸ್ಟಾರ್‌ ಅದನ್ನು ಕೇವಲ 10 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ವಿದ್ಯುತ್‌ ಜಾಮ್‌ವಾಲ್‌ ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ನಟ. ಜಾನ್ವಿ ಕಪೂರ್‌ ಕೂಡ ಇನ್ನೂ ಬೆಳೆಯಬೇಕಾದ ನಟಿ. ಆದರೆ ಜಾನ್ವಿಗೆ ಅಪ್ಪ ಬೋನಿ ಕಪೂರ್‌ನ ಪ್ರಭಾವ ಇದೆ. ತಾಯಿ ಶ್ರೀದೇವಿಯ ಖ್ಯಾತಿ ಜನಪ್ರಿಯತೆ ಬೆಂಬಲಕ್ಕಿದೆ. ಬಾಲಿವುಡ್‌ ಇಡೀ ಆಕೆಯ ಬೆನ್ನಿಗೆ ನಿಂತಿದೆ. ಹೀಗಾಗಿ ಆಕೆಗೆ ನಟಿಸುವ ಪ್ರತಿಭೆಯೇ ಇಲ್ಲದಿದ್ದರೂ ಸಿನಿಮಾಗಳು ಸಿಗುತ್ತವೆ. ಕಾಸೂ ಸಿಗುತ್ತದೆ. ಇದು ನೆಪೋಟಿಸಂ ಅಲ್ಲವೇ?

ಅಲ್ಲವೇ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಟ್ವಟ್ಟರ್‌ನಲ್ಲೂ ಇನ್‌ಸ್ಟಗ್ರಾಮ್‌ನಲ್ಲೂ ಜಾನ್ವಿಯನ್ನು ಬೆಂಡತ್ತಿದ್ದಾರೆ. ಆದರೆ ಜಾನ್ವಿ ಉತ್ತರಿಸಿಲ್ಲ. ಆಕೆ ಯಾಕೆ ಉತ್ತರಿಸಬೇಕು? ಕಾರ್ಗಿಲ್‌ ಗರ್ಲ್‌ ಚಿತ್ರದಲ್ಲಿ ನಟಿಸುವುದಷ್ಟೇ ಆಕೆಯ ಕೆಲಸ. ಅದರ ಮಾರಾಟ ಇತ್ಯಾದಿಗಳು ಅವಳ ಕೆಲಸ ಅಲ್ಲವೇ ಅಲ್ಲ. ಆಕೆ ಯಾಕೆ ಈ ಬಗ್ಗೆ ಚಿಂತಿಸಬೇಕು ಅಂತ ಕೇಳುವವರೂ ಇದ್ದಾರೆ. 

ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ರಂತೆ ಶ್ರೀದೇವಿ! 
ಇದೇ ಸಿಟ್ಟಿನಿಂದಾಗಿಯೇ, ಕಾರ್ಗಿಲ್‌ ಗರ್ಲ್‌ ಫಿಲಮ್ಮನ್ನು ನೋಡುವುದಿಲ್ಲ ಎಂದು ಶಪಥ ಮಾಡಿದವರೂ ಇದ್ದಾರೆ. ಆದರೆ ಕಾರ್ಗಿಲ್‌ ಗರ್ಲ್‌ ನೋಡಲೇಬೇಕಾದ ಚಿತ್ರ. ಜಾನ್ವಿ ಅದರಲ್ಲಿ ಹೇಗೆ ನಟಿಸಿದ್ದಾಳೋ ಗೊತ್ತಿಲ್ಲ. ಆದರೆ ಗುಂಜನ್‌ ಸಕ್ಸೇನಾ ಎಂಬ ಸ್ಫೂರ್ತಿಯುವ ವ್ಯಕ್ತಿತ್ವದ ಕಾರಣದಿಂದಾಗಿಯಾದರೂ ಅದನ್ನು ನೋಡಬೇಕು ಅನಿಸುತ್ತದೆ. ಚೀನಾದ ಆಕ್ರಮಣ, ರಫೇಲ್‌ ವಿಮಾನ ಆಗಮನ ಮುಂತಾದ ಕಾರಣಗಳಿಂದಾಗಿ ದೇಶಭಕ್ತಿ ಉಕ್ಕಿ ಹರಿಯುತ್ತಿರುವ ಈ ದಿನಗಳಲ್ಲಿ ಈ ಫಿಲಂ ಸಾಕಷ್ಟು ಹಿಟ್‌ ಆದರೂ ಆಶ್ಚರ್ಯವಿಲ್ಲ. 

 ಅಪ್ಪನ ಬೆಂಬಲವಿದ್ದರೂ, ಇಲ್ಲದ ಅವಕಾಶ, ಟಾಲಿವುಡ್‌ನತ್ತ ಜಾನ್ವಿ 
ಜಾನ್ವಿಗೆ ತಾಯಿ ಶ್ರೀದೇವಿಯ ಎತ್ತರ ಹಾಗೂ ದೇಹ ಬಳುವಳಿಯಾಗಿ ಬಂದಿವೆ. ಡ್ರೆಸ್‌ ಸೆನ್ಸ್ ಕೂಡ ಆಕೆಯದೇ. ಒಂದು ಆಂಗಲ್‌ನಿಂದ ನೋಡಿದರೆ ಶ್ರೀದೇವಿಯಂತೆಯೇ ಕಾಣಿಸುತ್ತಾಳೆ. ತಂದೆಯ ಪ್ರಭಾವವೂ ಬಾಲಿವುಡ್‌ನಲ್ಲಿ ಸಾಕಷ್ಟು ಇದೆ. ಹೀಗಾಗಿ ಆಕೆ ಬೆಳೆಯುವುದರಲ್ಲಿ ಸಂಶಯವಿಲ್ಲ. 

ಸೌತ್ ಇಂಡಿಯನ್ ಚಿತ್ರಕ್ಕೆ ಜಾಹ್ನವಿ ಕಪೂರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!