ಬಾಲಿವುಡ್‌ ಎವರ್ ಗ್ರೀನ್ ನಟಿ  ಶ್ರೀ ದೇವಿಯ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಸೌತ್ ಇಂಡಿಯನ್ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಹರಿದಾಡುತಿದ್ದು ಚಿತ್ರತಂಡ ಉತ್ತರಿಸುವ ಮೂಲಕ ಅಭಿಮಾನಿಗಳಲ್ಲಿದ್ದ ಗೊಂದಲಕ್ಕೆ ಬ್ರೇಕ್ ಹಾಕಿದ್ದಾರೆ. 

ಅಯ್ಯೋ! ರಶ್ಮಿಕಾನ ಬಿಡ್ರಿ, ಈಗ ಲಿಸ್ಟ್‌ಗೆ ಜಾಹ್ನವಿ ಕಪೂರ್ ಸೇರಿಕೊಂಡಿದ್ದಾರೆ!

'ಧಡಕ್' ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾಹ್ನವಿ ಕಪೂರ್ ಯಶಸ್ಸಿನ  ಹಾದಿಯಲ್ಲಿದ್ದಾರೆ.  'ಕಾರ್ಗಿಲ್ ಗರ್ಲ್‌' ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ ಹಾಗೂ ದೋಸ್ತಾನ-2 ಚಿತ್ರದಲ್ಲಿ ಬಿ-ಟೌನ್ ಸ್ನೇಹಿತರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು 'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ವಿಜಯ್ ದೇವರಕೊಂಡ ಸಣ್ಣ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ ನಟ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ 'ಫೈಟರ್‌'ಗೆ ಜಾಹ್ನವಿ ಕೇಳಿರುವ ಸಂಭಾವನೆ ಗಗನ ಮುಟ್ಟಿದೆ.  

ಅಯ್ಯಯ್ಯೋ... ಇದನ್ನು ತೆಗೆಯಲು ಮರೆತೇ ಬಿಟ್ರಾ ಜಾನ್ವಿ ಕಪೂರ್?

ಬಾಲಿವುಡ್‌ ಚಿತ್ರದಲ್ಲಿ ಎಷ್ಟು ತೊಗೋಳ್ತಾರೋ  ಏನೋ ಆದ್ರೆ ಸೌತ್ ಇಂಡಿಯನ್ ಫಿಲ್ಮ್‌ನಲ್ಲಿ ಮಾಡೊಕೆ ಬರೋಬರಿ 3.5 ಕೋಟಿ ಕೇಳಿದ್ದಾರಂತೆ. ಈ ಚಿತ್ರಕ್ಕೆ ಕರಣ್‌ ಜೋಹಾರ್‌ ಹಾಗೂ ಪುರಿ ಜಗನ್ನಾಥ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ತೆರೆ ಕಾಣಲಿದೆ.  ಜಾಹ್ನವಿ ಕಪೂರ್ ಕಾಲ್ ಶೀಟ್ ಫ್ರೀ ಇಲ್ಲದ ಕಾರಣ ಚಿತ್ರವನ್ನು ಜನವರಿ 2020 ಆರಂಭಿಸಲಾಗುತ್ತದೆ.