ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ರಂತೆ ಶ್ರೀದೇವಿ!

First Published Jun 3, 2020, 8:12 PM IST

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್‌ ಸಹ ಅಮ್ಮನಂತೆ ಆ್ಯಕ್ಟಿಂಗ್‌ ವೃತ್ತಿಯನ್ನು ಆರಿಸಿಕೊಂಡಿದ್ದಾರೆ ಹಾಗೂ ಮೊದಲ ಸಿನಿಮಾದಲ್ಲೇ ಸಾಕಷ್ಟು ಫೇಮಸ್‌ ಕೂಡ ಆಗಿದ್ದಾರೆ. ಆದರೆ ತಾಯಿ ಶ್ರೀದೇವಿ ಮಾತ್ರ ನಮ್ಮೊಂದಿಗೆ ಇಲ್ಲ ಈಗ. ಆದರೂ ಅವರ ಸುದ್ದಿಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ತಾಯಿ ಮತ್ತು ಮಗಳ ಸಂಬಂಧದ ಬಗ್ಗೆ ಯಾವಾಗಲೂ ಸುದ್ದಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಲೇ ಇರುತ್ತವೆ. ನಟಿ ಶ್ರೀದೇವಿ ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ದರು ಎನ್ನುವ ವಿಷಯ ಈಗ ಸುದ್ದಿಯಲ್ಲಿದೆ.