ದಕ್ಷಿಣದಿಂದ ಹೋಗಿ ಬಾಲಿವುಡ್ ಆಳಿದ ನಟಿ ಶ್ರೀದೇವಿ ಮಗಳಿಗೆ ಬಾಲಿವುಡ್‌ನಲ್ಲಿ ಸಿನಿಮಾ ಅವಕಾಶಗಳಿಲ್ವಾ..? ಹೀಗೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಹೋದಲ್ಲೆಲ್ಲಾ ಸುದ್ದಿ ಮಾಡುವ 'ದಢಕ್' ಚೆಲುವೆ ಟಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಅನ್ನೋ ಸುದ್ದಿ ಇದೆ.

ಅಷ್ಟಾಗಿ ಹೊರಗೆ ಕಾಣಿಸಿಕೊಳ್ಳದ ಜಾಹ್ನವಿ ಕಪೂರ್ ಧಡಕ್ ಸಿನಿಮಾದ ನಂತರವೇ ಒಂದಿಷ್ಟು ಮೀಡಿಯಾ ಮುಂದೆ ಬಂದಿದ್ದು. ಸ್ಟಾರ್ ಶ್ರೀದೇವಿ ಮಗಳ ಸಿನಿಮಾ ಎಂಟ್ರಿ ಗ್ರ್ಯಾಂಡ್ ಆಗಿರುತ್ತೆ ಎಂದು ನಿರೀಕ್ಷಿಸಿದವರಿಗೆ ದಢಾಕ್ ತೃಪ್ತಿಕರವಾಗಿರಲಿಲ್ಲ.

ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ರಂತೆ ಶ್ರೀದೇವಿ!

ಭಾರೀ ಬ್ಲಾಕ್‌ಬಸ್ಟರ್ ಮೂಲಕ ಎಂಟ್ರಿ ಆಗುತ್ಥಾರೆ ಎಂದು ಕೊಂಡ ನಟಿಯನ್ನು ನಿರ್ದೇಶಕ ಕರಣ್ ಜೋಹಾರ್ ಸೈರಾಟ್ ಸಿನಿಮಾದ ರೀಮೇಕ್ ದಢಾಕ್ ಮೂಲಕ ಬೆಳ್ಳಿತೆರೆಗೆ ಪರಿಚಯಿಸಿದ್ದರು. ಆದರೆ ಇದೀಗ ನಟಿ ಒಟಿಟಿ ಫ್ಲಾಟ್‌ಫಾರ್ಮ್‌ಗಳಿಗೆ ಸೀಮಿತರಾಗಿಬಿಟ್ಟಿದ್ದಾರೆ.

ಜಾಹ್ನವಿ ಅವರ ಮುಂದಿನ ಗುಂಜನ್ ಸಕ್ಸೇನಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿಯೇ ರಿಲೀಸ್ ಆಗುತ್ತಿದೆ. ಹಾಗೆಯೇ ನಟಿಯ ಇನ್ನೊಂದು ಸಿನಿಮಾ ರೂಫಿ ಅಫ್ಜಾನಾಗೂ ಥಿಯೇಟರ್ ರಲೀಸ್ ಭಾಗ್ಯವಿಲ್ಲ.

ಅಯ್ಯೋ! ರಶ್ಮಿಕಾನ ಬಿಡ್ರಿ, ಈಗ ಲಿಸ್ಟ್‌ಗೆ ಜಾಹ್ನವಿ ಕಪೂರ್ ಸೇರಿಕೊಂಡಿದ್ದಾರೆ!

ಜಾಹ್ನವಿಯ ಸಿನಿ ಜರ್ನಿ ಸಾಗುತ್ತಿರುವ ಬಗ್ಗೆ ಸ್ವತಃ ನಟಿ ಹಾಗೂ ಬೋನಿ ಕಪೂರ್ ಅವರಿಗೂ ತೃಪ್ತಿ ಇಲ್ಲ. ಹಾಗಾಗಿ 80ರ ದಶಕದಲ್ಲಿ ಶ್ರೀದೇವಿಯೇ ಟಾಪ್‌ನಲ್ಲಿ ಮೆರೆದ ತೆಲುಗು ಸಿನಿಮಾ ಲೋಕಕ್ಕೆ ಜಾಹ್ನವಿ ಎಂಟ್ರಿ ಕೊಡೋ ಸಿದ್ಧತೆಯಲ್ಲಿದ್ದಾರೆ.

ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಇದ್ದಿದ್ದರಿಂದಲೇ ನಟಿ ಈ ಹಿಂದೆ ಬಂದಿದ್ದ ತೆಲುಗು ಸಿನಿಮಾಗಳನ್ನು ತಳ್ಳಿಹಾಕಿದ್ದರು. ಆದರೆ ಈಗ ಬಿಗ್ ಬಜೆಟ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ ಜಾಹ್ನವಿ. ಸ್ವಜನಪಕ್ಷಪಾತ ಚರ್ಚೆ ಬಾಲಿವುಡ್‌ನಲ್ಲಿ ನಡೆಯುತ್ತಿರುವಾಗಲೇ, ಜಾನ್ವಿ ಈ ನಡೆ ಮತ್ತಷ್ಟು ಚರ್ಚೆಗಳಿಗೆ ದಾರಿ ಮಾಡಿಕೊಡಬಹುದು.