Asianet Suvarna News Asianet Suvarna News

20 ವರ್ಷ ಹಿರಿಯ ನಟಿ ಜತೆ ಮದ್ವೆಯಾಗ ಹೊರಟಿದ್ದ ಅಭಿಷೇಕ್​ ಬಚ್ಚನ್​: ನಿಮ್ಮ ಜೊತೆ ಮಲಗಲೇ ಎಂದು ಕೇಳಿದ್ರಂತೆ!

20 ವರ್ಷ ಹಿರಿಯ ನಟಿಗೆ ಹೃದಯ ಕೊಟ್ಟಿದ್ದರಂತೆ ಅಭಿಷೇಕ್​ ಬಚ್ಚನ್​. ನಿಮ್ಮ ಜೊತೆ ಮಲಗಲೇ ಎಂದು ಕೇಳಿದ್ರಂತೆ. ಆ ನಟಿ ಯಾರು? 
 

Neither Aishwarya nor Karisma Abhishek wanted to marry an actress 20 years older Zeenat Aman suc
Author
First Published Nov 27, 2023, 12:56 PM IST

 ನಟ ಅಭಿಷೇಕ್​ ಬಚ್ಚನ್​ ಹಾಗೂ ನಟಿ ಐಶ್ವರ್ಯ ರೈ ಇದೀಗ ಸುಖಿ ಜೀವನ ನಡೆಸುತ್ತಿದ್ದಾರೆ. ಮಗಳು ಆರಾಧ್ಯ ಜೊತೆ ಇವರದ್ದು ಸುಂದರ ದಾಂಪತ್ಯ ಜೀವನ. ಆದರೆ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯ ರೈ ಅವರು ಮದುವೆಯಾಗುವುದಕ್ಕೂ ಮುನ್ನ, ಇವರಿಬ್ಬರಿಗೂ ಬೇರೆ ಬೇರೆಯವರ ಜೊತೆ ಸಂಬಂಧ ಇದ್ದುದು ಸಿನಿ ಪ್ರಿಯರಿಗೆ ತಿಳಿದಿರುವ ವಿಷಯವೇ. ಅಷ್ಟಕ್ಕೂ ಖುದ್ದು ಅಮಿತಾಭ್​ ಬಚ್ಚನ್​ ಅವರ ಮಗಳು ಶ್ವೇತಾ ಅವರಿಗೂ ಈ ಸಂಬಂಧ ಇಷ್ಟವಿರಲಿಲ್ಲ.   ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲ. ಅಭಿಷೇಕ್ ಅವರು ತಮ್ಮ  ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ  ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್​ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ,  ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನುವ ಮಾತಿದೆ. 

ಅದೇ ಇನ್ನೊಂದೆಡೆ ಅಭಿಷೇಕ್​  ಬಚ್ಚನ್​ ಕೂಡ ಐಶ್ವರ್ಯಾ ರೈಗೂ ಮೊದಲು  ಕರಿಷ್ಮಾ ಕಪೂರ್ ಅವರನ್ನು ಇಷ್ಟಪಟ್ಟಿದ್ದರು. ಆದರೆ ಈ ಸಂಬಂಧ ಯಾವುದೋ ಕಾರಣಕ್ಕೆ ಮುರಿದು ಬಿದ್ದಿತ್ತು. ಅದೇ ಇನ್ನೊಂದೆಡೆ, ಐಶ್ವರ್ಯ ರೈ ಅವರ ಹೆಸರು ಸಲ್ಮಾನ್​ ಖಾನ್​ ಮತ್ತು ವಿವೇಕ್​ ಒಬೆರಾಯ್​ ಜೊತೆ ಸಾಕಷ್ಟು ಕೇಳಿಬಂದಿತ್ತು. ಇವರ ಜೊತೆ  ಮದುವೆಯಾಗುವುದಾಗಿಯೂ ಸುದ್ದಿ ಹರಡಿತ್ತು. ಅದೇನೇ ಇದ್ದರೂ ಈಗ ಈ ದಂಪತಿ ಸಂತೋಷದಿಂದ ಬಾಳುತ್ತಿದ್ದಾರೆ.

Aishwarya Rai@50: ಅಭಿಷೇಕ್​ಗೆ ಮದ್ವೆಯಾದ್ರೆ ನಟಿಗಿತ್ತು ಅಪಾಯ! ಜಾತಕ ದೋಷದ ಪರಿಹಾರ ಮಾಡಿದ್ದು ಹೇಗೆ?

ಆದರೆ ಇದೇ ವೇಳೆ, ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಕರಿಷ್ಮಾ ಕಪೂರ್​ ಅವರಿಗಿಂತಲೂ ಮುನ್ನ ಅಭಿಷೇಕ್​ ಅವರಿಗೆ ಇನ್ನೋರ್ವ ನಟಿಗೆ ಹೃದಯ ಕೊಟ್ಟಿದ್ದರಂತೆ! ಅದನ್ನು ಖುದ್ದು ನಟ ಈಗ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ, ಒಂದು ಕಾಲದಲ್ಲಿ ಬಾಲಿವುಡ್​ ಆಳಿದ ಮಾದಕ ನಟಿ ಜೀನತ್​ ಅಮನ್​.  ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಈ ಬ್ಯೂಟಿ ಅಭಿಷೇಕ್ ಬಚ್ಚನ್ ಅವರಿಗಿಂತ 20 ವರ್ಷ ದೊಡ್ಡವರು. ಅಭಿಷೇಕ್ ಬಚ್ಚನ್ ಜೀನತ್​ ಅವರ ಸೌಂದರ್ಯದಿಂದ ಎಷ್ಟು ಆಕರ್ಷಿತರಾಗಿದ್ದರು ಎಂದರೆ ಅವರು ಸ್ಪಷ್ಟವಾದ ಮಾತುಗಳಲ್ಲಿ ಮದುವೆಗೆ ಪ್ರಸ್ತಾಪಿಸಿದ್ದರಂತೆ! 

ಈ ಕುರಿತು ಈಗಲೂ ಅಭಿಷೇಕ್​ ಹೇಳುತ್ತಾರೆ. ನಾನು ಮದುವೆಯಾಗಿದ್ದರೂ  ಈ ಸೂಪರ್ ಸ್ಟಾರ್ ಅನ್ನು ಇನ್ನೂ ಪ್ರೀತಿಸುತ್ತೇನೆ ಎಂದಿದ್ದಾರೆ.  70-80ರ ದಶಕದ ಟಾಪ್ ನಟಿಯ ಮೇಲೆ ತನಗೆ ಕ್ರಶ್ ಇತ್ತು ಎಂದು ಹೇಳಿಕೊಂಡಿರುವ ಅವರು,  ಜೀನತ್ ಅವರಿಗೆ ಈಗ 72 ವರ್ಷ, ಆದರೂ ಅವರ ಚೆಲುವು ಇನ್ನೂ ಕಡಿಮೆಯಾಗಿಲ್ಲ. ನಾನು ಇಂದಿಗೂ ಅವರನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ತಮಗೆ ಈಕೆಯ ಮೇಲೆ ಕ್ರಷ್​ ಶುರುವಾಗಿದ್ದು ಐದನೇ ವರ್ಷದಿಂದಲೇ ಎಂದಿದ್ದಾರೆ.  ಅಭಿಷೇಕ್ ತಮ್ಮ ತಂದೆ ಅಮಿತಾಭ್​ ಬಚ್ಚನ್ ಅವರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಶೆಡ್ಯೂಲ್‌ನಲ್ಲಿದ್ದರು. ಈ ಚಿತ್ರದಲ್ಲಿ ಜೀನತ್ ಅಮನ್ ನಟಿಸಿದ್ದರು. ಆಗ ಅವರಿಗೆ 25 ವರ್ಷ ವಯಸ್ಸು. ಜೀನತ್  ಚಿತ್ರ ಸೆಟ್‌ಗಳಲ್ಲಿ ಅಭಿಷೇಕ್ ಬಚ್ಚನ್ ಜೊತೆ ಆಡುತ್ತಿದ್ದರು.  ಆಗಲೇ ಅಭಿಷೇಕ್ ಆಕೆಯನ್ನು ಮದುವೆಗೆ ಪ್ರಸ್ತಾಪಿಸಿದ್ದರಂತೆ. ಇದನ್ನು ಕೇಳಿ ಅಲ್ಲಿದ್ದ ಚಿತ್ರತಂಡ ಮತ್ತು ಚಿತ್ರತಂಡ ನಕ್ಕಿತು. ಅಭಿಷೇಕ್ ಗೆ ದೊಡ್ಡವಳಾಗು, ಆಮೇಲೆ ಮದುವೆಯಾಗು ಎಂದು ಹೇಳಿದ್ದರಂತೆ ಜೀನತ್​.

ಅಷ್ಟೇ ಅಲ್ಲದೇ, ಆಗ ಜೀನತ್​ ಅವರನ್ನು ಉದ್ದೇಶಿಸಿ ನಿಮ್ಮ ಜೊತೆ ಯಾರು ಮಲಗುತ್ತಾರೆ ಎಂದು ಕೇಳಿದ್ದರಂತೆ. ಆಗ ಆಕೆ ತಾನೊಬ್ಬಳೇ ಎಂದಾಗ ಅಭಿಷೇಕ್​ಗೆ ಅಚ್ಚರಿ ಆಗಿತ್ತಂತೆ. ಒಬ್ಬರೇ ಮಲಗುವುದು ಅವರು ಇನ್ನೂ ಕೇಳಿರಲಿಲ್ಲವಂತೆ. ಅದಕ್ಕೆ ಅವರು ನಾನು ಮಲಗಲೇ ಎಂದಾಗ ಜೀನತ್​ ಸ್ವಲ್ಪ ದೊಡ್ಡವನಾಗು, ಆಮೇಲೆ ಮಲಗಬಹುದು ಎಂದಿದ್ದರಂತೆ! ಈ ಕುರಿತು ಆಗಿನ ಮಾಧ್ಯಮಗಳು ರಸವತ್ತಾಗಿ ಇದನ್ನು ಪ್ರಕಟಿಸಿದ್ದವು. 

ಅಮಿತಾಭ್​ ಪುತ್ರಿ ಶ್ವೇತಾಗೆ ಅತ್ತಿಗೆ ಐಶ್ವರ್ಯ ರೈ ಕಂಡ್ರೆ ಸಿಟ್ಟೇಕೆ? ವೈರಲ್​ ವಿಡಿಯೋದಿಂದ ಕಾರಣ ಬಹಿರಂಗ

Follow Us:
Download App:
  • android
  • ios