Asianet Suvarna News Asianet Suvarna News

ಆಲಿಯಾ- ರಣವೀರ್​ ಫ್ಯಾಮಿಲಿ ನಡುವೆ ಭಾರಿ ಜಗಳ: ಸೊಸೆ ಬಗ್ಗೆ ಅತ್ತೆ ನೀತು ಕಪೂರ್​ ಹೇಳಿದ್ದೇನು?

ಕಾಫಿ ವಿತ್​ ಕರಣ್​ನಲ್ಲಿ ಬಾಲಿವುಡ್​ ನಟಿ, ಆಲಿಯಾ ಭಟ್​ ಅತ್ತೆ ನೀತು ಕಪೂರ್​   ಸೊಸೆ ಕುರಿತು ಕೆಲವೊಂದು ವಿಷಯ ರಿವೀಲ್​ ಮಾಡಿದ್ದಾರೆ. ಅವರು ಹೇಳಿದ್ದೇನು? 
 

Neetu Kapoor revealed some things about Alia Bhatt In Koffee With Karan suc
Author
First Published Jan 11, 2024, 6:02 PM IST

ಕಾಫಿ ವಿತ್ ಕರಣ್ ಸೀಸನ್ 8 ಚರ್ಚೆಯಲ್ಲಿದೆ. ಈ ಷೋನಲ್ಲಿ ಇದಾಗಲೇ ಅನೇಕ ಮಂದಿ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಸದಾ ಕಾಂಟ್ರವರ್ಸಿಗಳಿಂದಲೇ ಈ ಷೋ ಫೇಮಸ್​. ಇಲ್ಲಿ ಬಂದಿರುವ ನಟ-ನಟಿಯರು ತೀರಾ ವೈಯಕ್ತಿಯ ಎನಿಸುವಂಥ ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದು ಇದೆ. ಇನ್ನು ಕೆಲವರಿಗೆ ಕರಣ್​ ಉಲ್ಟಾ ಪಲ್ಟಾ ಪ್ರಶ್ನೆ ಕೇಳಿ ಬಾಯಿ ಬಿಡಿಸಿದ್ದೂ ಆಗಿದೆ. ಹೆಚ್ಚಾಗಿ ಸೆಕ್ಸ್​, ಅಶ್ಲೀಲ ವಿಷಯಗಳನ್ನೇ ಕರಣ್​ ಜೋಹರ್​ ಕೇಳುತ್ತಾರೆ ಎನ್ನುವ ಆರೋಪಗಳೂ ಸಾಕಷ್ಟು ಇವೆ. ಇವೆಲ್ಲವುಗಳ ನಡುವೆಯೇ ಈಗ ಇನ್ನೊಂದು ಪ್ರೊಮೋ ರಿಲೀಸ್​ ಆಗಿದೆ. ಇಂದು ಸಂಜೆ ಅಂದರೆ ಜನವರಿ 11 ರಂದು ಸ್ಟ್ರೀಮ್ ಆಗಲಿರುವ ಸಂಚಿಕೆ ಇದಾಗಿದೆ. ಈ ಬಾರಿ ಲೆಜೆಂಡ್ ನಟಿಯರಾದ ಜೀನತ್ ಅಮನ್ ಮತ್ತು ನೀತು ಕಪೂರ್ ಅವರು ಕರಣ್ ಜೋಹರ್ ಅವರ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಕಾರ್ಯಕ್ರಮದ ಹೊಸ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಪ್ರೋಮೋ ಸಾಕಷ್ಟು ತಮಾಷೆಯಾಗಿದೆ. ಪ್ರೋಮೋದಲ್ಲಿ ಜೀನತ್ ಮತ್ತು ನೀತು ಅವರ ವಿಶೇಷ ಬಾಂಧವ್ಯವೂ ಕಂಡುಬರುತ್ತದೆ. ಈ ಕಾರ್ಯಕ್ರಮದಲ್ಲಿ ನಟಿಯರು ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಬಹಿರಂಗಪಡಿಸಲಿದ್ದಾರೆ.

ಇದೇ ವೇಳೆ, ಸೊಸೆ ಆಲಿಯಾ ಭಟ್​ ಬಗ್ಗೆ ಕರಣ್​ ಅವರು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಮನೆಯಲ್ಲಿ ಮಾಮೂಲಿ ಮನೆಯಂತೆ ಅತ್ತೆ-ಸೊಸೆ ಜಗಳ ಇದ್ಯಾ ಎಂದು ಕರಣ್​ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನೀತು ಕಪೂರ್​, ಹೌದು. ಆಗಾಗ್ಗೆ ಜಗಳ ನಡೆಯುತ್ತಿರುತ್ತದೆ ಎಂದಿದ್ದಾರೆ. ಹಾಗಂತ ಈ ಜಗಳ ತಮಾಷೆಯ ಜಗಳವಷ್ಟೇ. ಈ ಜಗಳವಾಗ್ತಿರೋದು ಆಲಿಯಾ ಮತ್ತು ರಣವೀರ್​ ಪುತ್ರಿ ರಾಹಾಗಾಗಿ ಎಂದಿದ್ದಾರೆ.  ಹಾಗಂತ ಇದು ನೇರವಾಗಿ ಅತ್ತೆ-ಸೊಸೆಯ ಜಗಳವೂ ಅಲ್ಲ. ಬದಲಿಗೆ. ಆಲಿಯಾ ಭಟ್​ ಅತ್ತೆ ನೀತು ಕಪೂರ್ ಹಾಗೂ  ಆಲಿಯಾ ಭಟ್ ತಾಯಿಯ ನಡುವಿನ ಜಗಳ. ಅಂದ ಹಾಗೆ, ಆಲಿಯಾ ಭಟ್​ ಅವರ ತಾಯಿ  ನಿರ್ದೇಶಕ ಮಹೇಶ್ ಭಟ್ ಪತ್ನಿ ಸೋನಿ ರಾಜ್ದಾನ್.

ಕ್ರಷ್​ ಇದ್ದದ್ದು ಅಂಕಲ್​ ಜೊತೆ, ಮದ್ವೆಯಾಗಿದ್ದು ಇನ್ನೊಬ್ರ ಜೊತೆ: ಇಂಟರೆಸ್ಟಿಂಗ್​ ವಿಷ್ಯ ರಿವೀಲ್​ ಮಾಡ್ರು ರಣವೀರ್​ ಅಮ್ಮ!

ಇವರ ನಡುವಿನ ಜಗಳವನ್ನು ತಮಾಷೆಯ ರೂಪದಲ್ಲಿ ವಿವರಿಸಿರುವ ನೀತು ಕಪೂರ್​ ಅವರು,   ರಾಹಾ  ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದಾಳೆ.  ನಾನು ಮಗುವನ್ನು ನೋಡಿಕೊಳ್ಳುವ ಆಯಾಗೆ ಮಗುವಿಗೆ ಪಪ್ಪಾ ಎಂದು ಕರೆಯಲು ಕಲಿಸು ಎನ್ನುತ್ತೇನೆ. ಆದರೆ ಸೋನಿ ರಾಜ್ದಾನ್ ಅವರು ಮೊದಲು ಮಮ್ಮ ಎಂದು ಹೇಳಲು ಕಲಿಸಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಮಮ್ಮಾ-ಪಪ್ಪಾ ವಿಷಯದಲ್ಲಿ ಜಗಳವಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ. ಹಾಗಿದ್ದರೆ ರಾಹಾ ಕೊನೆಗೆ ಏನು ಹೇಳಿದಳು ಎಂದು ಪ್ರಶ್ನಿಸಿದಾಗ, ಅವರು, ಮಮ್ಮಾ ಅನ್ನಲಿಲ್ಲ ಬದಲಿಗೆ  ಮ್ ಮ್ ಎಂದಳಷ್ಟೇ. ಆಗ ಆಲಿಯಾ ನನ್ನ ಕಡೆ ತಾನೇ ಗೆದ್ದೆ ಎನ್ನೋ ರೀತಿ ನೋಟ ಬೀರಿದಳು. ಆಗ ನಾನು ಅವಳಿಗೆ ಹೀಗೆ ಹೇಳಲು ನಾನೇ ಕಲಿಸಿದ್ದೆ, ಜಂಭ ಪಡಬೇಡ ಎಂದು ಹೇಳಿದೆ. ಹೀಗೆ ರಾಹಾ ವಿಷಯದಲ್ಲಿ ಪಾಸಿಟಿವ್ ಜಗಳ ಆಗುತ್ತಿರುತ್ತದೆ ಎಂದಿದ್ದಾರೆ.  ನಾನಾ ಎನ್ನುವ ಬದಲು ರಾಹಾ ದಾದಾ ಎನ್ನುತ್ತಾಳೆ. ಹಾಗಾಗಿ ನನಗೆ ಖುಷಿ ಇದೆ ಎಂದ ನೀತು ಕಪೂರ್, ಅಂತೂ ಕಪೂರ್ ಮನೆಗೆ ಪುಟ್ಟ ರಾಜಕುಮಾರಿ ರಾಹಾ ಎಂಟ್ರಿಯಾದ ನಂತರ ರಣಬೀರ್ ಹಾಗೂ ಅಲಿಯಾ ಕೂಡಾ ಮಗುವಿನ ಜೊತೆ ಸಮಯ ಕಳೆಯಲು ಜಗಳ ಮಾಡುತ್ತಾರೆ ಎಂದಿದ್ದಾರೆ. ಇಬ್ಬರೂ ಶೂಟಿಂಗ್​​ನಲ್ಲಿ ಬ್ಯುಸಿ ಇರುವ ಕಾರಣ ಮನೆಗೆ ಬಂದ ಹೊತ್ತಲ್ಲಿ ಮಗುವನ್ನು ಎತ್ತಲು ಇಬ್ಬರೂ ಸಣ್ಣ ಪುಟ್ಟ ಜಗಳ ಮಾಡುತ್ತಾರೆ. ಒಟ್ಟಿನಲ್ಲಿ ರಾಹಾಗಾಗಿ ಮನೆಯಲ್ಲಿ ತಮಾಷೆಯ ಜಗಳ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ. ಇಬ್ಬರ ಫ್ಯಾಮಿಲಿ  ಜಗಳ ಮಾಡಿಕೊಂಡೇ ಮಗುವಿಗೆ ಸಿಕ್ಕಾಪಟ್ಟೆ ಪ್ರೀತಿ ಸುರಿಸುತ್ತಿದೆ ಎಂದಿದ್ದಾರೆ.  

ಇದೇ ಎಪಿಸೋಡ್​ನಲ್ಲಿ ನೀತು ಕಪೂರ್​ ಅವರು,  ತಮ್ಮ ಕ್ರಷ್​ ಕುರಿತು ನೀತು ಕಪೂರ್​ ಮಾತನಾಡಿದ್ದಾರೆ. ಇವರು ಮತ್ತು ರಿಷಿ ಕಪೂರ್​ ಪ್ರೀತಿಸಿ ವಿವಾಹವಾಗಿದ್ದರೂ, ನೀತು ಅವರ ಕ್ರಷ್​ ಇದ್ದುದು ಆಗಿನ ಕಾಲದ ಇನ್ನೋರ್ವ ಸೂಪರ್​ ಸ್ಟಾರ್​ ಶಶಿ ಕಪೂರ್​ ಅವರಾಗಿದ್ದರಂತೆ. ಅವರನ್ನು ತಾವು ತುಂಬಾ ಪ್ರೀತಿಸುತ್ತಿದ್ದುದಾಗಿ ನೀತು ಹೇಳಿಕೊಂಡಿದ್ದಾರೆ. ನಿಮಗೆ ಬೇರೆ ಯಾರ ಮೇಲಾದರೂ ಕ್ರಷ್​ ಇತ್ತೇ ಎನ್ನುವ ಪ್ರಶ್ನೆಗೆ ನೀತು ಅವರು ಶಶಿ ಕಪೂರ್​ ಹೆಸರು ಹೇಳಿದರು. ಇದನ್ನು ಕೇಳಿ ಶಾಕ್​ ಆದ  ಕರಣ್ ಜೋಹರ್ ಅಂದರೆ ಅಂಕಲ್​ ಮೇಲಾ ಎಂದು ಕೇಳಿದರು. ಅದಕ್ಕೆ ನಟಿ ಹೌದು ಎಂದು ಹೇಳಿದರು.  ಕರಣ್​ ಅವರು ಶಾಕ್​ ಆಗಲು ಒಂದು ಕಾರಣವೂ ಇದೆ. ಅದೇನೆಂದರೆ, ನೀತು ಕಪೂರ್ ಸಂಬಂಧದಲ್ಲಿ ಶಶಿ ಕಪೂರ್ ಚಿಕ್ಕಪ್ಪ ಮತ್ತು ಮಾವ ಇದ್ದಂತೆ.  ರಾಜ್ ಕಪೂರ್ ಮತ್ತು ಶಶಿ ಕಪೂರ್ ಸಹೋದರರು.

ಸಂದರ್ಶನದ ನಡುವೆಯೇ ದೀಪಿಕಾಗೆ ಲಿಪ್​ಲಾಕ್​ ಮಾಡಿದ ರಣವೀರ್​ ಸಿಂಗ್​! ಡಿವೋರ್ಸ್​ ಸುದ್ದಿ ಮತ್ತೆ ಮುನ್ನೆಲೆಗೆ

Follow Us:
Download App:
  • android
  • ios