Asianet Suvarna News Asianet Suvarna News

ಸಂದರ್ಶನದ ನಡುವೆಯೇ ದೀಪಿಕಾಗೆ ಲಿಪ್​ಲಾಕ್​ ಮಾಡಿದ ರಣವೀರ್​ ಸಿಂಗ್​! ಡಿವೋರ್ಸ್​ ಸುದ್ದಿ ಮತ್ತೆ ಮುನ್ನೆಲೆಗೆ

ದೀಪಿಕಾ ಪಡುಕೋಣೆಯವರ ಸಂದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ರಣವೀರ್​ ​ ಸಿಂಗ್​ ಎಂಟ್ರಿ ಕೊಟ್ಟು ಆಕೆಯ ಲಿಪ್​ಲಾಕ್​ ಮಾಡಿದ್ದು, ಫ್ಯಾನ್ಸ್​ ಟ್ರೋಲ್​ ಮಾಡುತ್ತಿದ್ದಾರೆ. 
 

Ranveer Singh Surprises Deepika Padukone in International Interview Locks Lips suc
Author
First Published Jan 8, 2024, 4:39 PM IST

ಕೆಲ ದಿನಗಳ ಹಿಂದೆ ಬಾಲಿವುಡ್​ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಬಹಳ ಸುದ್ದಿಯಲ್ಲಿತ್ತು.  ಇದಕ್ಕೆ ಕಾರಣ ಈ ಜೋಡಿ ಕಾಫಿ ವಿತ್​ ಕರಣ್​ ಷೋನಲ್ಲಿ ಕಾಣಿಸಿಕೊಂಡಿದ್ದು. ಈ ಸಮಯದಲ್ಲಿ ದೀಪಿಕಾ  ತೀರಾ ವೈಯಕ್ತಿಕ ವಿಷಯ ಮಾತನಾಡಿದ್ದು, ಅದು ರಣವೀರ್​ ಅವರಿಗೆ ಸಿಟ್ಟು ತರಿಸಿದ ಬಳಿಕ ಈ ಜೋಡಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು.  ಈ ಸಮಯದಲ್ಲಿ ಈ ಜೋಡಿ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ ಮಾಡಿಕೊಂಡಿತ್ತು. ಪತಿ ರಣವೀರ್​ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್​ ಕುರಿತು ಪ್ರಿಯಾಂಕಾ ಮಾತನಾಡಿದ್ದು, ಇದು ಸಕತ್​ ಟ್ರೋಲ್​ಗೂ ಕಾರಣವಾಯಿತು ಮಾತ್ರವಲ್ಲದೇ ಹಲವರು ಹಲವು ವಿಧದಲ್ಲಿ ದೀಪಿಕಾ ಮಾತನ್ನು ಅರ್ಥೈಸಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರೂ ಡಿವೋರ್ಸ್​ ಕೊಡುತ್ತಿದ್ದಾರೆ ಎನ್ನುವ ವಿಷಯವೂ ಸಕತ್​ ಚರ್ಚೆಗೆ ಒಳಗಾಗಿತ್ತು. 

ಇದಕ್ಕೂ ಮೊದಲು ಈ ಜೋಡಿಯ ವಿಚ್ಛೇದನ ಸುದ್ದಿ ಸಕತ್ ಸದ್ದು ಮಾಡಿತ್ತು. ಜುಲೈ 6ರಂದು ರಣವೀರ್​ ಸಿಂಗ್​ ಅವರ ಜನ್ಮದಿನ. ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆದರೆ ದೀಪಿಕಾ ಪಡುಕೋಣೆ ಅವರ ಕಡೆಯಿಂದ ಯಾವುದೇ ವಿಶ್​ ಬಂದಿರಲಿಲ್ಲ. ಇದರಿಂದ ಡಿವೋರ್ಸ್​ ಸುದ್ದಿ ಮತ್ತಷ್ಟು ವೇಗ ಪಡೆದುಕೊಂಡಿತ್ತು. ಇದಾದ ಬಳಿಕ ಮರುದಿನ ದೀಪಿಕಾ ವಿಷ್​ ಮಾಡುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಅದಾದ ಬಳಿಕ ಕಾಫಿ ವಿತ್​ ಕರಣ್​ನಲ್ಲಿ ದೀಪಿಕಾ ಬೇರೆಯವರ ಜೊತೆ ಡೇಟಿಂಗ್​ ಮಾಡುತ್ತಿದ್ದ ವಿಷಯ ಶೇರ್​  ಮಾಡಿಕೊಂಡಾಗ ಡಿವೋರ್ಸ್​ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿತ್ತು.

ಶ್ರೀರಾಮನ ಅವಹೇಳನ, ಲವ್​ ಜಿಹಾದ್​ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್​ಐಆರ್ ದಾಖಲು 

ಇದರ ನಡುವೆಯೇ   ಮತ್ತೊಂದು ವಿಡಿಯೋ ವೈರಲ್​ ಆಗಿತ್ತು.  ಜಿಯೋ ವರ್ಲ್ಡ್‌ ಪ್ಲಾಜಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಣವೀರ್​ ಅವರು ತಾವು ಯಾವ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎನ್ನುವುದನ್ನೂ ಮರೆತು ಎಲ್ಲರ ಎದುರೇ ಪತ್ನಿ ದೀಪಿಕಾಗೆ ಮುತ್ತು ಕೊಟ್ಟಿದ್ದು, ಸಕತ್​ ಟ್ರೋಲ್​ಗೆ ಒಳಗಾಗಿದ್ದರು. ಇದನ್ನೆಲ್ಲಾ ಮನೆಯಲ್ಲಿ ಇಟ್ಟುಕೊಳ್ಳಿ, ಈ ಪರಿ ನಿಮ್ಮ ಪ್ರೀತಿಯನ್ನು ಸಾರ್ವಜನಿಕಗೊಳಿಸಬೇಡಿ ಎಂದು ಹಲವರು ಹೇಳಿದ್ದರು.  ನೀವು ಪತ್ನಿಯನ್ನು ಪ್ರೀತಿಸುತ್ತೀರಿ ಎಂದು ಪಬ್ಲಿಸಿಟಿಗೋಸ್ಕರ ಇದೆಲ್ಲಾ ಮಾಡುವುದು ಬೇಕಿಲ್ಲ ಎಂದರು.  

ಇದೀಗ ಮತ್ತೆ ರಣವೀರ್ ಸಿಂಗ್ ಅವರ ಟೈಮ್ ಮ್ಯಾಗಜೀನ್ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಅವರ ತುಟಿಗಳಿಗೆ  ಮುತ್ತು ನೀಡಿ ಮತ್ತೆ ಟ್ರೋಲ್​ಗೆ ಒಳಗಾಗಿದ್ದಾರೆ. ದೀಪಿಕಾ ಪಡುಕೋಣೆ ಸಂದರ್ಶನದಲ್ಲಿ ರಣವೀರ್​ ​ ಥಟ್​ ಎಂದು ಕಾಣಿಸಿಕೊಂಡರು. ಪತಿಯನ್ನು ನೋಡಿ ದೀಪಿಕಾ ಅಚ್ಚರಿಪಟ್ಟುಕೊಂಡರು. ತಡ ಮಾಡದ ರಣವೀರ್​ ​ ಅವರು, ಮಧ್ಯೆ ಪ್ರವೇಶ ಮಾಡಿ ದೀಪಿಕಾ ಪಡುಕೋಣೆ ಅವರ ತುಟಿಗಳಿಗೆ  ಮುತ್ತು ನೀಡಿದರು. ಸಂದರ್ಶಕರು ಮದುವೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಣವೀರ್​ ​ ಸಿಂಗ್​, 10-11 ವರ್ಷಗಳಿಂದ ಒಟ್ಟಿಗೆ ಇದ್ದೇವೆ ಎಂದರು. 2018ರಲ್ಲಿ ಇವರಿಬ್ಬರ ಮದುವೆಯಾಗಿದೆ. ಆದರೆ ಅದಕ್ಕೂ ಮೊದಲು ಇಬ್ಬರೂ ಡೇಟಿಂಗ್​ ಮಾಡುತ್ತಿದ್ದರು. ಇಂಥ ಪತಿಯನ್ನು ಪಡೆಯಲು ತಾವು ಪುಣ್ಯ ಮಾಡಿರುವುದಾಗಿ ದೀಪಿಕಾ ಹೇಳಿದರು. ನಾನು ನನ್ನ ಬೆಸ್ಟ್​ ಫ್ರೆಂಡನ್ನು ಮದ್ವೆಯಾಗಿರುವುದಾಗಿ ಹೇಳಿದರು.  

ಲಕ್ಷದ್ವೀಪಕ್ಕೆ ಸ್ವಾಗತ: ಇರುವೆ ಬಿಟ್ಕೊಂಡ ಮಾಲ್ಡೀವ್ಸ್​ಗೆ ಮುಟ್ಟುನೋಡಿಕೊಳ್ಳೋ ಪಾಠ ಕಲಿಸಿದ ಬಾಲಿವುಡ್​!

Follow Us:
Download App:
  • android
  • ios