ಬಾಲಿವುಡ್‌ ಹ್ಯಾಂಡ್ಸಮ್ ಹೀರೋ ರಣಬೀರ್ ಕಪೂರ್ ಆರೋಗ್ಯದಲ್ಲಿ ಏರುಪೇರಾದ ಕಾರಣ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಎಲ್ಲೆಡೆ ಕೊರೋನಾ ಸೋಂಕು ಇನ್ನೂ ಇರುವುದರಿಂದ ಭಯಭೀತರಾದ ಕಪೂರ್ ಕುಟುಂಬ ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ರಣಬೀರ್ ಆರೋಗ್ಯದ ಬಗ್ಗೆ ತಾಯಿ ನೀತೂ ಹಾಗೂ ದೊಡ್ಡಪ್ಪ ರಣಧೀರ್ ಕಪೂರ್ ಮಾಹಿತಿ ಹಂಚಿಕೊಂಡಿದ್ದಾರೆ. 

ಅಲಿಯಾ ಜೊತೆ ಮದುವೆ: ಬಿಗ್ ಹಿಂಟ್ ಕೊಟ್ಟ ರಣಬೀರ್ ಕಪೂರ್

'ನಿಮ್ಮೆಲ್ಲರ ಪ್ರೀತಿ ಹಾಗೂ ಕಾಳಜಿಗೆ ನಾನು ಚಿರಋಣಿ. ರಣಬೀರ್‌ ಕಪೂರ್‌ಗೆ ಕೋವಿಡ್‌19 ಪಾಸಿಟಿವ್ ಎಂದು ತಿಳಿದು ಬಂದಿದೆ. ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್‌ ಆಗಿದ್ದಾನೆ. ಎಲ್ಲಾ ರೀತಿಯ ಮುನ್ಸೂಚನೆಗಳ ಬಗ್ಗೆ ಗಮನ ಹರಿಸಲಾಗಿದೆ,' ಎಂದು ನೀತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಖಾಸಗಿ ವಾಹಿನಿ ಜೊತೆ ಮಾತನಾಡಿದ ರಣಧೀರ್ 'ರಣಬೀರ್‌ಗೆ ಆರೋಗ್ಯ ಸರಿ ಇಲ್ಲ. ನಮಗೆ ಸರಿಯಾಗಿ ಏನೆಂದು ತಿಳಿದಿಲ್ಲ. ವೈದ್ಯರು ಮಾಹಿತಿ ಕೊಟ್ಟ ನಂತರ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡುತ್ತೇವೆ. ಕಳೆದ ವರ್ಷ ನೀತೂಗೆ ಕೋವಿಡ್19  ಸೋಂಕು ತಾಗಿತ್ತು,. ಅದರಿಂದ ವರುಣ್ ಧವನ್‌ಗೂ ಪಾಸಿಟಿವ್ ಬಂದಿತ್ತು. ಈಗ ರಣಬೀರ್ ವಿಚಾರದಲ್ಲೂ ಅಷ್ಟೇ ಗಮನ ಹರಿಸಲಾಗುತ್ತದೆ,' ಎಂದಿದ್ದಾರೆ.

ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌! 

ಸದ್ಯ ರಣಬೀರ್ ಕಪೂರ್ ಕೈಯಲ್ಲಿ ಎರಡು ಸಿನಿಮಾಗಳಿವೆ. ಸಂಶೀರಾ ಹಾಗೂ ಬ್ರಹ್ಮಾಸ್ತ್ರ ಬಿಡುಗಡೆಗೆ ಸಿದ್ಧವಾಗಿದ್ದು  ಶೀಘ್ರದಲ್ಲಿಯೇ ದಿನಾಂಕ ರಿವೀಲ್ ಮಾಡಲಾಗುತ್ತದೆ, ಎಂದಿದೆ ಚಿತ್ರ ತಂಡ.