ಆಲಿಯಾ ಭಟ್ ಮತ್ತು ರಣಬೀರ್ ಮದುವೆಯಾಗೋದು ಯಾವಾಗ..? ಮದುವೆ ಬಗ್ಗೆ ದೊಡ್ಡ ಹಿಂಟ್ ಕೊಟ್ಟಿದ್ದಾರೆ ನಟ ರಣಬೀರ್

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಈ ವರ್ಷದ ಕೊನೆಗೆ ಮದುವೆಯಾಗಬೇಕಿತ್ತು. ಆದರೆ ಅಂದುಕೊಂಡಂತೆ ಈ ಜೋಡಿ ಮದುವೆಯಾಗಲೇ ಇಲ್ಲ, ಬದಲಾಗಿ ರಣಬೀರ್ ಮನೆ ಹತ್ರಾನೇ ಮನೆ ಮಾಡಿದ್ರು ಆಲಿಯಾ ಭಟ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಕೊರೋನಾ ಎಲ್ಲವನ್ನೂ ಬದಲಾಯಿಸಿದೆ. ಕೊರೋನಾ ಬಂದಿರದಿದ್ದರೆ ನಾವು ಇಷ್ಟೊತ್ತಿಗೆ ಮದ್ವೆಯಾಗಿರ್ತಿದ್ವಿ ಎಂದಿದ್ದಾರೆ ರಣಬೀರ್ ಕಪೂರ್. ಕೊರೋನಾ ಜನಜೀವನವನ್ನು ಬಾಧಿಸಿರದಿದ್ದರೆ ಅವರ ವಿವಾಹ ನಡೆದಿರುತ್ತಿತ್ತು ಎಂದು ರಣಬೀರ್ ಹೇಳಿದ್ದಾರೆ.

ನನಗೆ ಇನ್ನೂ 25 ವರ್ಷ, ಈಗಲೇ ಮಾದುವೆಯಾಗುವ ಮೂಡಿಲ್ಲ: ಆಲಿಯಾ ಭಟ್‌

ಶೀಘ್ರವೇ ಮದುವೆಯ ಗುರುತನ್ನು ಮಾಡಲಿದ್ದೇನೆ ಎಂದು ನಟ ಹೇಳಿದ್ದಾರೆ. ರಣಬೀರ್ ತಮ್ಮ ಲೇಡಿಲವ್ ಆಲಿಯಾ ಬಗ್ಗೆ ತುಂಬಾ ಮಾತನಾಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಅವರು ಏನು ಮಾಡಿದರು ಎಂಬುದರ ಕುರಿತು ಮಾತನಾಡಿದ್ದಾರೆ.

ಆಲಿಯಾ ಸ್ವಲ್ಪ ಹೆಚ್ಚು ಸಾಧನೆ ಮಾಡಬೇಕೆಂದು ಬಯಸಿದ್ದಾರೆ. ಅವಳು ಬಹುಶಃ ಅಲ್ಲಿರುವ ಪ್ರತಿಯೊಂದು ತರಗತಿಯನ್ನು ತೆಗೆದುಕೊಂಡಳು. ಗಿಟಾರ್‌ನಿಂದ ಚಿತ್ರಕಥೆವರೆಗೆ ಕಲಿತಿದ್ದಾಳೆಎಂದಿದ್ದಾರೆ.

ಮದ್ವೆ ಮೊದಲೇ ಹನಿಮೂನ್ ಮಡ್ತಾರಾ ಆಲಿಯಾ-ರಣಬೀರ್: ಗೋವಾಕ್ಕೆ ಹಾರಿದ ಜೋಡಿ

ಈ ಜೋಡಿ ಲಾಕ್‌ಡೌನ್‌ನಲ್ಲಿ ಓದುವಲ್ಲಿ ನಿರತರಾಗಿದ್ದು, ಕುಟುಂಬದೊಂದಿಗೆ ಸಮಯ ಕಳೆದರು ಮತ್ತು ಪ್ರತಿದಿನ ಎರಡು-ಮೂರು ಸಿನಿಮಾ ವೀಕ್ಷಿಸಿದ್ದಾರೆ ಎಂದಿದ್ದಾರೆ ರಣಬೀರ್.