Asianet Suvarna News Asianet Suvarna News

ಅತೀ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಸೌತ್ ನಟಿ ನಯನತಾರಾ; ದೀಪಿಕಾ, ಅಲಿಯಾ ಲಿಸ್ಟ್‌‌ಗೆ ಸೇರಿದ ಲೇಡಿ ಸೂಪರ್‌ಸ್ಟಾರ್

ತಮಿಳು ಸಿನಿಮಾರಂಗದ ಲೇಡಿ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳುವ ಖ್ಯಾತ ನಟಿ ನಯನತಾರಾ ಸಖತ್ ಬ್ಯುಸಿ. ಇತ್ತೀಚಿಗಷ್ಟೆ ಹಸೆಮಣೆ ಏರಿರುವ ನಟಿ ನಯನತಾರಾ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ನಯನತಾರಾ ಸಂಭಾವನೆ ಯಾವಾಗಲೂ ಅಚ್ಚರಿ ಮೂಡಿಸುತ್ತೆ. ಕಳೆದ ಕೆಲವು ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿರುವ ನಯನತಾರಾ ಮತ್ತೆ ಸಂಭಾವನೆ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. 

Nayanthara taking home a whopping rs 10 crores for next film sgk
Author
Bengaluru, First Published Aug 8, 2022, 11:02 AM IST

ತಮಿಳು ಸಿನಿಮಾರಂಗದ ಲೇಡಿ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳುವ ಖ್ಯಾತ ನಟಿ ನಯನತಾರಾ ಸಖತ್ ಬ್ಯುಸಿ. ಇತ್ತೀಚಿಗಷ್ಟೆ ಹಸೆಮಣೆ ಏರಿರುವ ನಟಿ ನಯನತಾರಾ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ನಯನತಾರಾ ಸಂಭಾವನೆ ಯಾವಾಗಲೂ ಅಚ್ಚರಿ ಮೂಡಿಸುತ್ತೆ. ಕಳೆದ ಕೆಲವು ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿರುವ ನಯನತಾರಾ ಮತ್ತೆ ಸಂಭಾವನೆ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಹೌದು ಲೇಡಿ ಸೂಪರ್ ಸ್ಟಾರ್ ಮುಂದಿನ ಸಿನಿಮಾಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಮೂಲಕ ನಟಿಮಣಿಯರ ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಮೂಲಕ ಸೌತ್ ಸುಂದರಿ ಬಲಿವುಡ್ ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಅಲಿಯಾ ಭಟ್ ಅವರ ಸಾಲಿಗೆ ಸೇರಿದ್ದಾರೆ. 

ಸಂಭಾವನೆ ವಿಚಾರದಲ್ಲಿ ನಟಿಮಣಿಯರಿಗೆ ಯಾವಾಗಲು ಅನ್ಯಾಯವಾಗುತ್ತಿದೆ ಎನ್ನುವ ಮಾತುಕೇಳಿಬರುತ್ತಲೇ ಇದೆ. ನಟರಿಗೆ ಸರಿಸಮವಾದ ಸಂಭಾವನೆ ನಟಿಯರಿಗೆ ಸಿಗುತ್ತಿಲ್ಲ. ಆದರೆ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿಗೆ ಈಗ ನಯನತಾರಾ ಸೇರಿದ್ದಾರೆ. ನಟಿ ನಯನತಾರಾ ಖ್ಯಾತ ನಿರ್ಮಾಣ ಸಂಸ್ಥೆ ಜಿ ಸ್ಟೂಡಿಯೋಸ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಿನಿಮಾ ಮಾತುಕತೆ ನಡೆದಿದ್ದು ನಯನತಾರಾ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಸಿನಿಮಾಗೆ ಹೊಸ ನಿರ್ದೇಶಕ ನೀಲೇಶ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ನಯನತಾರಾ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಯನತಾರಾ ಈ ಸಿನಿಮಾಗೆ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ನಯನತಾರಾ ಸೌತ್ ಸಿನಿಮಾರಂಗದಲ್ಲಿ ದೀಪಿಕಾ ಮತ್ತು ಆಲಿಯ್ ಭಟ್  ಸಾಲಿಗೆ ಸೇರಿದ್ದಾರೆ ಎನ್ನಲಾಗಿದೆ. ಅಂದಹಾಗೆ ದೀಪಿಕಾ ಮತ್ತು ಅಲಿಯಾ ತಮ್ಮ ಸಿನಿಮಾಗಳಿಗೆ 8ರಿಂದ 10 ಕೋಟಿ ರೂಪಾಯಿ ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೀಗ ದಕ್ಷಿಣ ಭಾರತದ ನಟಿ ನಯನತಾರಾ ಕೂಡ ಅದೇ ಸ್ಥಾನಕ್ಕೆ ಏರಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.  

ನಯನತಾರಾ-ವಿಘ್ನೇಶ್ 25 ಕೋಟಿ ರೂ. ಮದುವೆ ಡೀಲ್; ದಂಪತಿಗೆ ನೆಟ್‌ಫ್ಲಿಕ್ಸ್ ನೋಟಿಸ್

ಅಂದಹಾಗೆ ನಯನತಾರಾ ಈ ಮೊದಲು ಸಿನಿಮಾವೊಂದಕ್ಕೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಚಿರಂಜೀವಿ ನಟನೆಯ ಗಾಡ್ ಫಾದರ್, ಗೋಲ್ಡ್ ಸಿನಿಮಾಗಳಿಗೆ ನಯನತಾರಾ 4 ರಿಂದ 5 ಕೋಟಿ ಸಂಭಾವನೆ ಪಡೆದಿದ್ದಾರೆ. ಅಲ್ಲದೇ ಮಹಿಳಾ ಪ್ರಧಾನ ಸಿನಿಮಾಗಳಿಗೆ ಇನ್ನು ಹೆಚ್ಚಿನ ಸಂಭಾವನೆ ಬೇಡಿಕೆ ಇಡುತ್ತಿದ್ದರಂತೆ. ಇದೀಗ ಏಕಾಏಕಿ 10 ಕೋಟಿ ರೂಪಾಯಿಗೆ ಜಿಗಿದಿದ್ದಾರೆ. 

ಮದುವೆಯ ಎಕ್ಸ್‌ಕ್ಲೂಸಿವ್‌ ಫೋಟೋ ಶೇರ್‌ ಮಾಡಿದ ವಿಘ್ನೇಶ್‌, 25 ಕೋಟಿ ಡೀಲ್‌ಗೆ ನೆಟ್‌ಫ್ಲಿಕ್ಸ್ ಗುಡ್‌ಬೈ!

ನಯನತಾರಾ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತದೆ. ಹಾಗಾಗಿ ನಯನತಾರಾ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ನಯನತಾರಾ ಕೊನೆಯದಾಗಿ ನಯನತಾರಾ ಕಾತುವಾಕುಲ ರೆಂಡು ಕಾದಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಓ2, ಗೋಲ್ಡ್, ಇರೈವನ್, ಜವಾನ್ ಗಾಡ್‌ಫಾದರ್, ಕನೆಕ್ಟ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸೌತ್ ಸಿನಿರಂಗದಲ್ಲಿ 10 ಕೋಟಿ ರೂಪಾಯಿ  ಸಂಭಾವನೆ ಏರಿಸಿಕೊಂಡ ಮೊದಲ ನಟಿಯಾಗಿದ್ದಾರೆ. 

Follow Us:
Download App:
  • android
  • ios