Asianet Suvarna News Asianet Suvarna News

ಮದುವೆಯ ಎಕ್ಸ್‌ಕ್ಲೂಸಿವ್‌ ಫೋಟೋ ಶೇರ್‌ ಮಾಡಿದ ವಿಘ್ನೇಶ್‌, 25 ಕೋಟಿ ಡೀಲ್‌ಗೆ ನೆಟ್‌ಫ್ಲಿಕ್ಸ್ ಗುಡ್‌ಬೈ!

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿತ್ತು. ಅಭಿಮಾನಿಗಳು ಕೂಡ ಇವರ ಮದುವೆಯ ಕ್ಷಣಗಳನ್ನುಒಟಿಟಿಯಲ್ಲಿ ನೋಡಲು ಕಾತುರರಾಗಿದ್ದರು. ಆದರೆ, ವರದಿಯ ಪ್ರಕಾರ ಮದುವೆಯ ವಿಡಿಯೋ ನೆಟ್‌ ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವುದಿಲ್ಲ. ಒಪ್ಪಂದದಿಂದ ನೆಟ್‌ಫ್ಲಿಕ್ಸ್ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
 

couple Shares exclusive Images of marriage Netflix backs out of the deal of Nayantara vignesh shivan wedding san
Author
Bengaluru, First Published Jul 15, 2022, 11:07 PM IST

ಚೆನ್ನೈ (ಜುಲೈ 14): ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ಸೆಲಿಬ್ರಿಟಿ ಜೋಡಿಯಾಗಿದ್ದ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ ಕಳೆದ ತಿಂಗಳು ಅದ್ದೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆಯ ವಿಡಿಯೋವನ್ನು ಪ್ರಸಾರ ಮಾಡುವ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿತ್ತು. ಖ್ಯಾತ ನಿರ್ದೇಶಕ ಗೌತಮ್‌ ಮೆನನ್‌ ಕೂಡ ಅದ್ದೂರಿ ಮದುವೆಯನ್ನು ಅದ್ಭುತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ದಂಪತಿಗಳಿಗೆ ಶಾಕಿಂಗ್‌ ನ್ಯೂಸ್‌ ನೀಡಿರುವ ನೆಟ್‌ಫ್ಲಿಕ್ಸ್‌ ಕಂಪನಿ ಡೀಲ್‌ನಿಂದ ಹಿಂದೆ ಸರಿದಿರುವುದಾಗಿ ಹೇಳಿದೆ. ಅದಕ್ಕೆ ಕಾರಣ, ವಿಘ್ನೇಶ್‌ ಶಿವನ್‌ ಹಂಚಿಕೊಂಡಿರುವ ಮದುವೆಯ ಎಕ್ಸ್‌ಕ್ಲೂಸಿವ್‌ ಚಿತ್ರಗಳು. ನಿರ್ದೇಶಕ ವಿಘ್ನೇಶ್‌, ಒಂದು ತಿಂಗಳ ವಿವಾಹ ವಾರ್ಷಿಕೋತ್ಸವದಂದು ಅವರ ಮದುವೆಯ ಕೆಲವು ಕುತೂಹಲಕಾರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಫೋಟೋಗಳನ್ನು ಹೆಚ್ಚು ವಿಳಂಬ ಮಾಡುವುದು ಸರಿಯಲ್ಲ ಎಂದು ವಿಘ್ನೇಶ್ ಹೇಳಿದ್ದರು. ಫೋಟೋಗಳನ್ನು ತುಂಬಾ ತಡ ಮಾಡಿದರೆ ಅವರ ಮದುವೆಯಲ್ಲಿ ಪ್ರೇಕ್ಷಕರ ಆಸಕ್ತಿ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದು ಅವರಿಗೆ ಭಾರಿಯಾಗಿ ಪರಿಣಮಿಸಿದ್ದು, 25 ಕೋಟಿ ರೂಪಾಯಿಯ ಡೀಲ್‌ ಕ್ಯಾನ್ಸಲ್‌ ಆಗಿದೆ.

ಮದುವೆ ಸ್ಟ್ರೀಮ್ ಆಗಿಲ್ಲ ಎಂಬ ಸುದ್ದಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಈ ಜೋಡಿಯ ವಿವಾಹದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ 25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

ಪೂರ್ತಿ ಖರ್ಚು ನೋಡಿಕೊಂಡಿದ್ದ ನೆಟ್‌ಫ್ಲಿಕ್ಸ್: ಮಾಧ್ಯಮ ವರದಿಗಳ ಪ್ರಕಾರ, ದಂಪತಿಗಳು ತಮ್ಮ ಮದುವೆಗೆ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ, ಏಕೆಂದರೆ ನೆಟ್‌ಫ್ಲಿಕ್ಸ್ (NetFlix) ಅವರ ಅಗತ್ಯಗಳಿಗೆ ಅನುಗುಣವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು. ಈ ವೆಚ್ಚವು ಪಂಚತಾರಾ ಹೋಟೆಲ್ ಬುಕ್ಕಿಂಗ್ (Five Star Hotel Booking) ಮತ್ತು ಗಾಜಿನ ಅರಮನೆಯನ್ನು ನಿರ್ಮಿಸುವುದರಿಂದ ಹಿಡಿದು ಆಹಾರದವರೆಗೆ ಎಲ್ಲವನ್ನೂ ಒಳಗೊಂಡಿದೆ. ಮದುವೆ ಕಾರ್ಯಕ್ರಮಕ್ಕೆ ಮುಂಬೈನಿಂದ ಮೇಕಪ್ ಕಲಾವಿದರು ಮತ್ತು ಭದ್ರತಾ ಸಿಬ್ಬಂದಿಯನ್ನು ಕರೆಸಲಾಗಿತ್ತು. ಮದುವೆಗೆ ಆಗಮಿಸಿದ ಪ್ರತಿಯೊಬ್ಬ ಅತಿಥಿಗೂ 3500 ರೂಪಾಯಿ ಮೌಲ್ಯದ ಊಟವನ್ನು ನೀಡಲಾಗಿತ್ತು.

ಇದನ್ನೂ ಓದಿ: ಪತಿಗೆ ಮಾತ್ರವಲ್ಲ ಅವರ ಫ್ಯಾಮಿಲಿಗೂ ಬಾರೀ ಗಿಫ್ಟ್‌ ನೀಡಿದ Nayanthara!

ಇತ್ತೀಚೆಗೆ ಈ ಜೋಡಿ ತಮ್ಮ ಮದುವೆಗೆ ಆಗಮಿಸಿದ್ದ ರಜನಿಕಾಂತ್‌, ವಿಜಯ್‌ ಸೇತುಪಥಿ, ಶಾರುಖ್‌ ಖಾನ್‌, ನಿರ್ದೇಶಕ ಅಟ್ಲೀ, ಖ್ಯಾತ ಸಂಗೀತ ನಿರ್ದೇಶಕರಾದ ಎಆರ್‌ ರೆಹಮಾನ್‌ ಹಾಗೂ ಅನಿರುದ್ಧ್ ಅವರ ಚಿತ್ರಗಳನ್ನು ಪ್ರಕಟಿಸಿದ್ದವು. ಮದುವೆಗೆ ಸಂಪೂರ್ಣ ಸಿದ್ಧತೆ ಮಾಡಿದ್ದ ನೆಟ್‌ಫ್ಲಿಕ್ಸ್ ಬರುವ ಅತಿಥಿಗಳು ಯಾವುದೇ ಕಾರಣಕ್ಕೂ ಮದುವೆಯ ಚಿತ್ರಗಳನ್ನು ತೆಗೆಯಬಾರದು ಎನ್ನುವ ಕಟ್ಟಪ್ಪಣೆ ಹಾಕಿತ್ತು. ವಿಘ್ನೇಶ್‌ ಶಿವನ್‌ ಹಾಗೂ ನಯನತಾರಾ ಹೊರತುಪಡಿಸಿ ಯಾರೊಬ್ಬರೂ ಮದುವೆಯ ಚಿತ್ರ ತೆಗೆದಿರಲಿಲ್ಲ.

ಇದನ್ನೂ ಓದಿ: ನಯನತಾರಾ-ವಿಘ್ನೇಶ್ ಮದುವೆಗೆ 1 ತಿಂಗಳು; ಶಾರುಖ್-ರಜನಿಕಾಂತ್ ಫೋಟೋ ಹಂಚಿಕೊಂಡ ನಿರ್ದೇಶಕ

ಜೂನ್‌ 9 ರಂದು ವಿವಾಹ: ನಯನತಾರಾ ಮತ್ತು ವಿಘ್ನೇಶ್ ಅವರು 2022ರ ಜೂನ್ 9 ರಂದು ಮಹಾಬಲಿಪುರಂನಲ್ಲಿ ಸ್ನೇಹಿತರು ಮತ್ತು ಕುಟುಂಬದ ಆಪ್ತರ ನಡುವೆ ವಿವಾಹವಾದರು. ಅವರು ದಕ್ಷಿಣದ ಪ್ರಬಲ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ದಂಪತಿಗಳ ಮುಂಬರುವ ಯೋಜನೆಗಳ ಬಗ್ಗೆ ಹೇಳುವುದಾದರೆ, ಅಜಿತ್ ಕುಮಾರ್ (Ajith Kumar) ಅವರ 'ಎಕೆ 62' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ವಿಘ್ನೇಶ್ ಶಿವನ್ (Vignesh Shivan), ಅಜಿತ್ ಅವರ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ನಯನತಾರಾ (Nayanthara) ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇನ್ನೂ ಯಾವುದೂ ದೃಢಪಟ್ಟಿಲ್ಲ. ಇದಲ್ಲದೇ ಶಾರುಖ್ ಖಾನ್ ಜೊತೆ ಅಟ್ಲೀ ಕಿ ಜವಾನ್, ಚಿರಂಜೀವಿ ಜೊತೆ ಗಾಡ್ ಫಾದರ್ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆ ಗೋಲ್ಡ್ ನಂತಹ ದೊಡ್ಡ ಚಿತ್ರಗಳಲ್ಲಿ ನಟಿಸಲು ನಯನತಾರಾ ಸಹಿ ಮಾಡಿದ್ದಾರೆ.

Follow Us:
Download App:
  • android
  • ios