Asianet Suvarna News Asianet Suvarna News

ನಯನತಾರಾ-ವಿಘ್ನೇಶ್ 25 ಕೋಟಿ ರೂ. ಮದುವೆ ಡೀಲ್; ದಂಪತಿಗೆ ನೆಟ್‌ಫ್ಲಿಕ್ಸ್ ನೋಟಿಸ್

ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್‌ಗೆ 25 ಕೋಟಿ ರೂಪಾಯಿ ಹಣವನ್ನು ಹಿಂದಿರುಗಿಸುವಂತೆ ನೆಟ್‌ಫ್ಲಿಕ್ಸ್ ನೋಟಿಸ್ ನೀಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಯನತಾರಾ ಮದುವೆ ವಿಡಿಯೋ ಸ್ಟ್ರೀಮಿಂಗ್ ಮಾಡುವಂತೆ ನೆಟ್ ಫ್ಲಿಕ್ಸ್  ಒಪ್ಪಂದ ಮಾಡಿಕೊಂಡಿತ್ತು. 

 

Netflix Sends Notices To Nayanthara And Vignesh For Rs 25 Crore sgk
Author
Bengaluru, First Published Jul 20, 2022, 2:02 PM IST

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಸ್ಟಾರ್ ಜೋಡಿ ತಮ್ಮ ಮದುವೆಯ ವಿಡಿಯೋ ಹಕ್ಕನ್ನು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ಗೆ ಮಾರಾಟ ಮಾಡಿತ್ತು. ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ನಯನತಾರಾ ಮದುವೆ ವಿಡಿಯೋ ಹಕ್ಕನ್ನು ಬರೋಬ್ಬರಿ 25 ಕೋಟಿ ರೂಪಾಯಿಗೆ ಖರೀದಿ ಮಾಡಿದೆಯಂತೆ. ಇದರ ಸಂಪೂರ್ಣ ಜವಾಬ್ದಾರಿ ನಿರ್ದೇಶಕ ಗೌತಮ್ ಮೆನನ್ ವಹಿಸಿಕೊಂಡಿದ್ದರು. ಆದರೆ ಕಳೆದ ಕೆಲವುದಿನಗಳಿಂದ ನೆಟ್‌ಫ್ಸಿಕ್ಸ್ ಲೇಡಿ ಸೂಪರ್ ಸ್ಟಾರ್ ಮದುವೆ  ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದಿದೆ ಎನ್ನುವ ಸುದ್ದಿ ಕೇಳಿಬರುತ್ತಿರುತ್ತಿದೆ. ಇದರ ಬೆನ್ನಲ್ಲೇ ಈಗ ನೆಟ್‌ಫ್ಲಿಕ್ಸ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮತ್ತೊಂದು ಶಾಕ್ ನೀಡಿದೆ ಎನ್ನಲಾಗಿದೆ.

25 ಕೋಟಿ ರೂಪಾಯಿ ಹಣವನ್ನು ಹಿಂದಿರುಗಿಸುವಂತೆ ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ ನೆಟ್‌ಫ್ಲಿಕ್ಸ್ ನೋಟಿಸ್ ನೀಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಯನತಾರಾ ಮತ್ತು ವಿಘ್ನೇಶ್ ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ಸಪ್ತಪದಿ ತುಳಿದಿದ್ದರು. ಮದುವೆ ಡೆಕೊರೇಶನ್, ಊಟದ ಖರ್ಚು, ಸೆಲೆಬ್ರಿಟಿಗಳಿಗೆ ಐವ್ ಸ್ಟಾರ್ ಹೋಟೆಲ್ ಬುಕ್ಕಿಂಗ್,  ಮೇಕಪ್, ಸೆಕ್ಯೂರಿಟಿ ಸೇರಿದಂತೆ ಸಂಪೂರ್ಣ ಖರ್ಚನ್ನು ನೆಟ್ ಫ್ಲಿಕ್ಸ್ ನೋಡಿಕೊಂಡಿದೆಯಂತೆ. ಆದರೀಗ ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದ ಕಾರಣ ಹಣವನ್ನು ವಾಪಾಸ್ ಮಾಡುವಂತೆ ನೋಟಿಸ್ ನೀಡಿದೆ ಎನ್ನಲಾಗಿದೆ.

ನಯನತಾರಾ-ವಿಘ್ನೇಶ್ ಮದುವೆ ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದ ನೆಟ್‌ಫ್ಲಿಕ್ಸ್; ಕಾರಣವೇನು?

ಮದುವೆಯಾಗಿ ಒಂದು ತಿಂಗಳ ಮೇಲಾದರೂ ನೆಟ್‌ಫ್ಲಿಕ್ಸ್ ಮದುವೆ ವಿಡಿಯೋ ಸ್ಟ್ರೀಮಿಂಗ್ ಮಾಡಿಲ್ಲ. ಹಾಗಾಗಿ ನಯನತಾರಾ ಜೋಡಿ ಒಪ್ಪಂದ ರದ್ದು ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ನಿಂದ ಹಿಂದೆ ಸರಿಯಲು ಕಾರಣ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಕೆಲವು ನಿರ್ಧಾರಗಳು ಒಟಿಟಿಗೆ ಇಷ್ಟವಾಗಿಲ್ಲವಂತೆ. ನಯನತಾರಾ ದಂಪತಿ ಜೊತೆ ನೆಟ್ ಫ್ಲಿಕ್ಸ್ ಒಂದಿಷ್ಟು ಒಪ್ಪಂದ  ಮಾಡಿಕೊಳ್ಳುವಂತೆ ಹೇಳಿತ್ತು. ಇದರ ಪ್ರಕಾರ ಮದುವೆಯ ಯಾವುದೇ ಫೋಟೋವನ್ನು ರಿವೀಲ್ ಮಾಡುವ ಹಾಗಿರಲಿಲ್ಲ. ಆದರೆ ಮದುವೆ ಫೋಟೋಗಳು ಸಿಕ್ಕಾಪಟ್ಟೆ  ವೈರಲ್ ಆಗಿತ್ತು. ತಃ ನಯನತಾರಾ ಮತ್ತು ವಿಘ್ನೇಶ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇದು ನೆಟ್ ಫ್ಲಿಕ್ಸ್ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

ನಯನತಾರಾ-ವಿಘ್ನೇಶ್ ಮದುವೆಗೆ 1 ತಿಂಗಳು; ಶಾರುಖ್-ರಜನಿಕಾಂತ್ ಫೋಟೋ ಹಂಚಿಕೊಂಡ ನಿರ್ದೇಶಕ

ಇತ್ತೀಚಿಗಷ್ಟೆ ತಾರಾಜೋಡಿ ಮದುವೆಯಾಗಿ ಒಂದು ತಿಂಗಳ ಸಂಭ್ರವನ್ನು ಆಚರಿಸಿದ್ದರು. ಒಂದು ತಿಂಗಳ ಖುಷಿಯನ್ನು ಮತ್ತೊಂದಿಷ್ಟು ಫೋಟೋವನ್ನು ಶೇರ್ ಮಾಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಾರುಖ್ ಖಾನ್ ಭೇಟಿಯ ಫೋಟೋವನ್ನು ಹಂಚಿಕೊಂಡಿದ್ದರು. ಹೌದು, ನಯನಾತಾರಾ ಮದುವೆಗೆ ಶಾರುಖ್ ಮತ್ತು ರಜನಿಕಾಂತ್ ಭೇಟಿ ನೀಡಿದ್ದರು. ಶಾರುಖ್ ಖಾನ್ ಮದುಮಗಳು ನಯನತಾರಾ ಅವರನ್ನು ಹಗ್ ಮಾಡಿ ಶುಭಾಶಯ ತಿಳಿಸಿದ್ದರು. ಶಾರುಖ್ ಖಾನ್ ಜೊತೆಗಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಾರುಖ್ ಖಾನ್ ಗೆ ನಿರ್ದೇಶಕ ಅಟ್ಲೀ ಕುಮಾರ್ ಸಾಥ್ ನೀಡಿದ್ದರು. ಅಂದಹಾಗೆ ಶಾರುಖ್ ಮತ್ತು ನಯನತಾರಾ ಇಬ್ಬರೂ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿಸಿದೆ. 

Follow Us:
Download App:
  • android
  • ios