Asianet Suvarna News Asianet Suvarna News

'ಜವಾನ್‌'ನಲ್ಲಿ ದೀಪಿಕಾ ಮುಂದೆ ಸೈಡ್‌ಲೈನ್ ಆದ್ರಾ ನಯನತಾರಾ, ಮತ್ತೆ ಬಾಲಿವುಡ್‌ಗೆ ಬರಲ್ವಂತೆ ಲೇಡಿ ಸೂಪರ್‌ಸ್ಟಾರ್‌!

ದಕ್ಷಿಣದಲ್ಲಿ ವರ್ಷಗಳ ಯಶಸ್ಸಿನ ನಂತರ ನಯನತಾರಾ 'ಜವಾನ್' ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದರೆ, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಹೊಸ ವರದಿಯ ಪ್ರಕಾರ, ನಯನತಾರಾ ತಮ್ಮ ಪಾತ್ರದ ಕುರಿತಾಗಿ ನಿರ್ದೇಶಕ ಅರ್ಟಿ ಜೊತೆ ಅಸಮಾಧಾನ ಹೊಂದಿದ್ದಾರೆ. ಇನ್ಮುಂದೆ ಬಾಲಿವುಡ್‌ಗೆ ಬರಲ್ಲ ಎಂದಿದ್ದಾರೆ ಎನ್ನಲಾಗ್ತಿದೆ.

Nayanthara angry at Atlee for making Jawan a Shah Rukh Khan-Deepika Padukone film Vin
Author
First Published Sep 21, 2023, 11:09 AM IST

ಜವಾನ್ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಚಿತ್ರವು ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭರ್ಜರಿ ಗಳಿಕೆ ಮಾಡ್ತಿದೆ.  ಶಾರೂಕ್‌ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಅಭಿನಯದ ಆಕ್ಷನ್ ಥ್ರಿಲ್ಲರ್ ಜವಾನ್ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡ್ತಿದೆ. ಚಿತ್ರದ ಮೂಲಕ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಬಾಲಿವುಡ್‌ಗೂ ಎಂಟ್ರಿ ಕೊಟ್ಟು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರೋಮ್ಯಾಂಟಿಕ್‌, ಆಕ್ಷನ್‌ತಾನು ಎಲ್ಲಾ ಆಂಗಲ್‌ಗಳಲ್ಲೂ ಪರ್ಫೆಕ್ಟ್ ಆಗಿ ಅಭಿನಯಿಸಿ ಸೂಪರ್‌ಸ್ಟಾರ್ ಫಾರ್ ದಿ ರೀಸನ್‌ ಎಂದು ಸಾಬೀತುಪಡಿಸಿದ್ದಾರೆ. 

ದಕ್ಷಿಣದಲ್ಲಿ ವರ್ಷಗಳ ಯಶಸ್ಸಿನ ನಂತರ ನಯನತಾರಾ 'ಜವಾನ್' ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದರೆ, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಹೊಸ ವರದಿಯ ಪ್ರಕಾರ, ನಯನತಾರಾ ತಮ್ಮ ಪಾತ್ರದ ಕುರಿತಾಗಿ ನಿರ್ದೇಶಕ ಅರ್ಟಿ ಜೊತೆ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಬರೋಬ್ಬರಿ 700 ಕೋಟಿ ಗಳಿಸಿದ ಜವಾನ್‌; ಅತಿ ಹೆಚ್ಚು ಪಡೆದಿದ್ದು ಶಾರೂಕ್‌, ನಯನತಾರಾ, ವಿಜಯ್ ಸೇತುಪತಿ ಅಲ್ಲ!

ಜವಾನ್‌ 'ಶಾರುಖ್ ಖಾನ್-ದೀಪಿಕಾ ಪಡುಕೋಣೆ' ಚಿತ್ರ ಎಂದ ನಯನತಾರಾ
ಜವಾನ್‌ನನ್ನು 'ಶಾರುಖ್ ಖಾನ್-ದೀಪಿಕಾ ಪಡುಕೋಣೆ ಚಿತ್ರ' ಮಾಡಿದ್ದಕ್ಕಾಗಿ ಅಟ್ಲೀ ವಿರುದ್ಧ ನಯನತಾರಾ ಕೋಪಗೊಂಡಿದ್ದಾರೆ. ಜವಾನ್ ಚಿತ್ರದಲ್ಲಿ ಹೀರೋಯಿನ್‌ ನಯನತಾರಾ ಆಗಿದ್ದರೂ, ದೀಪಿಕಾ ಪಡುಕೋಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು (Importance) ನೀಡಲಾಗಿದೆ. ಈ ಬಗ್ಗೆ ನಯನತಾರಾ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗಿದೆ. 

ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಯನತಾರಾ ಪೋಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ದೀಪಿಕಾ ಫ್ಲ್ಯಾಶ್‌ಬ್ಯಾಕ್ ಸೀಕ್ವೆನ್ಸ್‌ನಲ್ಲಿ ತಂದೆಯಾಗಿರುವ ಶಾರೂಕ್‌ನ ಪತ್ನಿ (Wife)ಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ದೀಪಿಕಾ ಪಡುಕೋಣೆ ಪಾತ್ರವನ್ನು ಹೈಲೈಟ್ ಮಾಡಿ, ತನ್ನ ಪಾತ್ರವನ್ನು ಸೈಡ್‌ಲೈನ್ ಮಾಡಿದ್ದಕ್ಕಾಗಿ ದೀಪಿಕಾ ಅಸಮಾಧಾನ ಹೊಂದಿದ್ದಾರೆ. ಇನ್ನು ಮುಂದೆ ಬಾಲಿವುಡ್‌ಗೆ ಬರುವುದಿಲ್ಲ, ಹಿಂದಿ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಶಾರೂಕ್‌, ರಜನೀಕಾಂತ್‌, ಕಮಲ್‌ಹಾಸನ್‌ಗೆ ಲಕ್ಕಿ ಚಾರ್ಮ್‌ ಈ ನಟ; ಎಂಟ್ರಿ ಕೊಟ್ಟ ಸಿನ್ಮಾವೆಲ್ಲಾ ಬ್ಲಾಕ್‌ಬಸ್ಟರ್‌!

ಸಕ್ಸಸ್‌ ಮೀಟ್‌ಗೆ ಹಾಜರಾಗದ ಲೇಡಿ ಸೂಪರ್‌ಸ್ಟಾರ್‌
ಆರಂಭದಲ್ಲಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಗೆಸ್ಟ್ ಅಪಿಯರೆನ್ಸ್ ಇದೆ ಎಂದೇ ಹೇಳಲಾಗಿತ್ತು. ಆದ್ರೆ ಇದು ಅತಿಥಿ ಪಾತ್ರವಾಗಿಲ್ಲ . ಜವಾನ್‌ನ್ನು ಬಹುತೇಕ ಎಸ್‌ಆರ್‌ಕೆ-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ. ಆದ್ದರಿಂದ ಅವರು ಜವಾನ್ ಚಿತ್ರದ ಪಾತ್ರದಿಂದ (Role) ಖುಷಿಯಾಗಿಲ್ಲ ಎನ್ನಲಾಗಿದೆ. ನಯನತಾರಾ  ಚೆನ್ನೈನಲ್ಲಿ ಕೂಡಾ 'ಜವಾನ್' ಚಿತ್ರದ ಯಾವುದೇ ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗದಿರಲು ಇದೇ ಕಾರಣವೇ ಎಂಬ ಊಹಾಪೋಹಗಳು ಇದ್ದವು. ದೀಪಿಕಾ ಇದ್ದಾಗ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನಯನತಾರಾ ಹಾಜರಿರಲಿಲ್ಲ. 

ಶಾರೂಕ್‌ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರವು 75 ಕೋಟಿ ರೂಪಾಯಿಗಳ ದಾಖಲೆಯ ಓಪನಿಂಗ್ ಪಡೆದುಕೊಂಡಿತ್ತು. ಸದ್ಯ ಚಿತ್ರವು ದಿನದಿಂದ ದಿನಕ್ಕೆ ಹೊಸ ದಾಖಲೆ (New Record)ಗಳನ್ನು ನಿರ್ಮಿಸುತ್ತಿದೆ. ಚಿತ್ರವು ಮೊದಲ ವಾರದಲ್ಲಿ 388.08 ಕೋಟಿ ಗಳಿಸಿದೆ ಮತ್ತು ಇದುವರೆಗೆ ವಿಶ್ವದಾದ್ಯಂತ 900 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಭರ್ತಿ 500 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ತಿಳಿದುಬಂದಿದೆ. 

ವರ್ಷದಲ್ಲಿ ಎರಡು ಬಾರಿ 1000 ಕೋಟಿ ಗಳಿಸಿದ ಏಕೈಕ ಭಾರತೀಯ ನಟ; ಶಾರೂಕ್‌, ಸಲ್ಮಾನ್‌, ರಜನಿಕಾಂತ್ ಅಲ್ವೇ ಅಲ್ಲ..

ಶಾರೂಕ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಜವಾನ್ ಜೊತೆಗೆ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿಧಿ ಡೋಗ್ರಾ, ಸಂಚಿತಾ ಬ್ಯಾನರ್ಜಿ, ಸಂಜಯ್ ದತ್ ಸೇರಿದಂತೆ ಅನೇಕ ದೊಡ್ಡ ಮತ್ತು ಪ್ರತಿಭಾವಂತ ನಟರು ಈ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Follow Us:
Download App:
  • android
  • ios