MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶಾರೂಕ್‌, ರಜನೀಕಾಂತ್‌, ಕಮಲ್‌ಹಾಸನ್‌ಗೆ ಲಕ್ಕಿ ಚಾರ್ಮ್‌ ಈ ನಟ; ಎಂಟ್ರಿ ಕೊಟ್ಟ ಸಿನ್ಮಾವೆಲ್ಲಾ ಬ್ಲಾಕ್‌ಬಸ್ಟರ್‌!

ಶಾರೂಕ್‌, ರಜನೀಕಾಂತ್‌, ಕಮಲ್‌ಹಾಸನ್‌ಗೆ ಲಕ್ಕಿ ಚಾರ್ಮ್‌ ಈ ನಟ; ಎಂಟ್ರಿ ಕೊಟ್ಟ ಸಿನ್ಮಾವೆಲ್ಲಾ ಬ್ಲಾಕ್‌ಬಸ್ಟರ್‌!

ವಯಸ್ಸು ಜಸ್ಟ್‌ 27 ಅಷ್ಟೆ. ಆದ್ರೆ ಇವ್ರು ಇಂಡಿಯನ್ ಸಿನಿಮಾದ ಲಕ್ಕಿ ಚಾರ್ಮ್‌. ಶಾರೂಕ್‌, ರಜನೀಕಾಂತ್‌, ಕಮಲ್‌ಹಾಸನ್‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೂಪರ್ ಸ್ಟಾರ್‌ ನಟರ ಹೈಯೆಸ್ಟ್ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಇವರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 1800 ಕೋಟಿ ರೂಪಾಯಿ ಗಳಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಯಾರವರು?

2 Min read
Author : Vinutha Perla
| Updated : Sep 20 2023, 09:36 AM IST
Share this Photo Gallery
  • FB
  • TW
  • Linkdin
  • Whatsapp
18

ಶಾರೂಕ್‌ ಖಾನ್ 'ಜವಾನ್‌' ಚಿತ್ರದ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗೋಲ್ಡನ್ ರನ್ ಗಳಿಸಿದ್ದಾರೆ. ಪಠಾಣ್‌ ಹಾಗೂ ಜವಾನ್‌ ಚಿತ್ರದ ಮೂಲಕ ಈ ನಟ ಒಂದೇ ವರ್ಷದಲ್ಲಿ ಎರಡು ಬ್ಯಾಕ್‌ಟು ಬ್ಯಾಕ್‌ ಸಾರ್ವಕಾಲಿಕ ಬ್ಲಾಕ್‌ಬಸ್ಟರ್‌ ಗಳನ್ನು ನೀಡಿದ್ದಾರೆ. ಇದು ಯಾವುದೇ ಇತರ ನಟರು ನಿರ್ವಹಿಸದ ಸಾಧನೆಯಾಗಿದೆ. 
 

28

ಆದರೂ, ಅವರು ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ನಟರಲ್ಲ. ಆ, ಗೌರವವು ಯಾವುದೇ ಟಾಪ್ ಸ್ಟಾರ್‌ಗೆ ಹೋಗುವುದಿಲ್ಲ. 27 ವರ್ಷದ ಯುವ ನಟ ತಮ್ಮ ಸಣ್ಣಪುಟ್ಟ ಪಾತ್ರದಿಂದ ಇವರೆಲ್ಲರನ್ನೂ ಮೀರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅವರು ಹೆಚ್ಚಿನ ಪ್ರಮುಖ ಬ್ಲಾಕ್‌ಬಸ್ಟರ್‌ಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

38

ವಯಸ್ಸು ಜಸ್ಟ್‌ 27 ಅಷ್ಟೆ. ಆದ್ರೆ ಇವ್ರು ಇಂಡಿಯನ್ ಸಿನಿಮಾದ ಲಕ್ಕಿ ಚಾರ್ಮ್‌. ಶಾರೂಕ್‌, ರಜನೀಕಾಂತ್‌, ಕಮಲ್‌ಹಾಸನ್‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೂಪರ್ ಸ್ಟಾರ್‌ ನಟರ ಹೈಯೆಸ್ಟ್ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಇವರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 1800 ಕೋಟಿ ರೂಪಾಯಿ ಗಳಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಯಾರವರು?

48

ಜವಾನ್, ಆರ್‌ಆರ್‌ಆರ್, ಕೆಜಿಎಫ್ 2 ಸಂಗ್ರಹಗಳನ್ನು ಹಿಂದಿಕ್ಕಿದ ನಟ ಜಾಫರ್‌ ಸಾದಿಕ್‌. ತಮಿಳುನಾಡಿನ 27 ವರ್ಷದ ಯುವ ನಟ ಜಾಫರ್ ಸಾದಿಕ್, ಕೋವಿಡ್‌ ವರ್ಷದ ನಂತರ ಕೆಲವು ದೊಡ್ಡ ಭಾರತೀಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅವೆಲ್ಲವೂ ಸೂಪರ್‌ ಹಿಟ್ ಆಗಿದೆ. ನಟನ ಕೊನೆಯ ಮೂರು ಚಿತ್ರಗಳು ವಿಕ್ರಮ್, ಜೈಲರ್ ಮತ್ತು ಜವಾನ್, ಈ ಮೂರೂ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 

58

ಮಾತ್ರವಲ್ಲ ಇತರ ಚಿತ್ರಗಳಾದ 'ವೆಂದು ತನಿಂಧತು ಕಾಡು' ಜೊತೆಗೆ, ಅವರ ಚಲನಚಿತ್ರಗಳು 1900 ಕೋಟಿ ರೂ.ಗಳನ್ನುಗಳಿಸಿವೆ, ಇದು ಇತರ ಯಾವುದೇ ನಟರಿಗಿಂತ ಹೆಚ್ಚಿನದು. ಶಾರುಖ್ ಖಾನ್ ನಂತರದ ಸ್ಥಾನದಲ್ಲಿದ್ದಾರೆ. ಜೂನಿಯರ್ NTR, ರಾಮ್ ಚರಣ್ (ಇಬ್ಬರೂ RRR), ಯಶ್ (KGF ಅಧ್ಯಾಯ 2), ಮತ್ತು ರಜನಿಕಾಂತ್ (ಜೈಲರ್) ಆ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

68

ಜಾಫರ್ ಸಾದಿಕ್ ಯಾರು?
1995 ರಲ್ಲಿ ಜನಿಸಿದ ಜಾಫರ್ ಸಾದಿಕ್ ಡ್ಯಾನ್ಸರ್ ಮತ್ತು ನೃತ್ಯ ಸಂಯೋಜಕ ಮತ್ತು ನಟ. ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. 4 ಅಡಿಯಷ್ಟು ಮಾತ್ರ ಎತ್ತರವಿರುವ ನಟ, 2020ರಲ್ಲಿ ತಮಿಳು ಸರಣಿ ಪಾವ ಕಡೈಗಲ್‌ನಲ್ಲಿ ನಿರ್ವಹಿಸಿದ  ಪಾತ್ರಕ್ಕಾಗಿ ಮೊದಲು ಗಮನ ಸೆಳೆದರು. 2022ರಲ್ಲಿ, ಕಮಲ್ ಹಾಸನ್ ನಟಿಸಿದ ವಿಕ್ರಮ್‌ ಚಿತ್ರದೊಂದಿಗೆ ತಮ್ಮ ಆಕ್ಟಿಂಗ್‌ ಅದ್ಭುತ ಪ್ರತಿಭೆಯನ್ನು ನಿರೂಪಿಸಿದರು. ಅಲ್ಲಿ ಅವರು ವಿಜಯ್ ಸೇತುಪತಿಯ ಪಾತ್ರದ ಸಹಾಯಕನಾಗಿ ನಟಿಸಿದರು. 

78

ಆ ನಂತರ 'ತನಿಂಧತು ಕಾಡು' ವೆಬ್ ಸರಣಿ ಶೈತಾನ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. 2023 ರಲ್ಲಿ, ಅವರು ರಜನಿಕಾಂತ್ ಅವರ ಜೈಲರ್ ಮತ್ತು ಶಾರುಖ್ ಖಾನ್ ಅವರ ಜವಾನ್ ನಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

88

ಜಾಫರ್ ಸಾದಿಕ್ ಅವರ upcoming projectಗಳನ್ನು ನೋಡಿದಾಗ ಅವರ ಪ್ರಭಾವ ಈ ವರ್ಷ ರಿಲೀಸ್ ಆಗಲಿರುವ ಉಳಿದ ಸಿನಿಮಾಗಳಲ್ಲಿಯೂ ಮುಂದುವರಿಯುವ ಸಾಧ್ಯತೆಯಿದೆ, ಏಕೆಂದರೆ ಅವರು ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಮೋಸ್ಟ್ ಎಕ್ಸ್‌ಪೆಕ್ಟೆಡ್‌ ವಿಜಯ್ ಅಭಿನಯದ ಲಿಯೋ, ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 2024ರಲ್ಲಿ, ನಟ ಸೂರ್ಯ ಅವರ ಹೆಸರಿಡದ ಯೋಜನೆಯ ಭಾಗವಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

VP
Vinutha Perla

Latest Videos
Recommended Stories
Recommended image1
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image2
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
Recommended image3
ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved