Asianet Suvarna News Asianet Suvarna News

ಅತಿಯಾದ ದೇಶಪ್ರೇಮವಿರೋ ಸಿನಿಮಾ ಮಾರಕ ಎಂದ ನಸೀರುದ್ದೀನ್​ ಶಾ! ಜನ ಹೇಳ್ತಿರೋದೇನು?

 ಅತಿಯಾದ ದೇಶಪ್ರೇಮವಿರೋ ಸಿನಿಮಾಗಳು ಮಾರಕ ಎಂದು ಬಾಲಿವುಡ್​ ನಟ ನಸೀರುದ್ದೀನ್​ ಶಾ ಹೇಳಿದ್ದು, ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 

Naseeruddin Shah Criticises Gadar 2, Says Such Films Are 'Regressive' And 'Harmful'
Author
First Published Sep 12, 2023, 6:08 PM IST

ಇತ್ತೀಚಿನ ದಿನಗಳಲ್ಲಿ ದೇಶಪ್ರೇಮವನ್ನು ಮೆರೆಯುವ, ಇತಿಹಾಸದಲ್ಲಿ ಹೂತು ಹೋಗಿರುವ ಕರಾಳ ಇತಿಹಾಸವನ್ನು ಮುನ್ನೆಲೆಗೆ ತರುವ ಇಲ್ಲವೇ ಸಮಾಜದಲ್ಲಿ ಆಗುತ್ತಿರುವ ಅನಿಷ್ಠವನ್ನು ಎತ್ತಿ ತೋರಿಸುವ ಚಿತ್ರಗಳನ್ನು ತಯಾರು ಮಾಡಲಾಗುತ್ತಿವೆ. ಇವು ಸಾಕಷ್ಟು ಸಕ್ಸಸ್​ ಆಗುವ ಬೆನ್ನಲ್ಲೇ ಒಂದಷ್ಟು ಮಂದಿಗೆ ಉರಿ ಹೊತ್ತಿಕೊಳ್ಳುವುದೂ ಇದೆ. ಸತ್ಯವೆಂದು ತೋರಿಸುವ ಚಿತ್ರಗಳನ್ನು ಕಾಲ್ಪನಿಕ ಎಂದು ಬಿಂಬಿಸಲು ಶತ ಪ್ರಯತ್ನ ಮಾಡುವುದು ನಡೆದೇ ಇದೆ. ಇತಿಹಾಸವನ್ನು ಕೆದಕಿದರೆ ಅವೆಲ್ಲವೂ ಊಹಾಪೋಹ ಎನ್ನುವ ದೊಡ್ಡ ವರ್ಗವೇ ಇದೆ. ಅಂಥ ಕೆಲವು ಚಿತ್ರಗಳ ಪೈಕಿ ಇತ್ತೀಚೆಗೆ ಹಲ್​ಚಲ್​ ಸೃಷ್ಟಿಸಿದ್ದ ಕಾಶ್ಮೀರ ಫೈಲ್ಸ್​, ಕೇರಳ ಸ್ಟೋರಿ (The Kerala Story) ಹಾಗೂ ಇತ್ತೀಚಿಗೆ ಹಲವು ಚಿತ್ರಗಳ ದಾಖಲೆಯನ್ನು ಉಡೀಸ್​ ಮಾಡಿರೊ ಗದರ್​-2 ಏಕ್​ ಪ್ರೇಮ್​ ಕಥಾ ಕೂಡ ಒಂದು. ಗದರ್​ ಚಿತ್ರವು ದೇಶಪ್ರೇಮವನ್ನು ಬಿಂಬಿಸೋ ಚಿತ್ರವಾಗಿದ್ದ ಇದಕ್ಕೆ ಸಕತ್​ ರೆಸ್​ಪಾನ್ಸ್​ ಬರುತ್ತಿದೆ.

ಇದಾಗಲೇ ಈ ಮೇಲಿನ ಚಿತ್ರಗಳನ್ನು ವಿರೋಧಿಸಿದ್ದಾರೆ ಒಂದು ವರ್ಗ. ಆ ಸಾಲಿಗೆ ಈಗ ಸೇರಿಕೊಂಡಿರುವವರು ಬಾಲಿವುಡ್​ನ ಹಿರಿಯ ನಟ ನಾಸಿರುದ್ದೀನ್​ ಶಾ. ಇವರ ‘ಗದರ್ 2’  (Gadar 2) ಚಿತ್ರವನ್ನು ಟೀಕಿಸಿದ್ದಾರೆ. ಇದರಲ್ಲಿರುವ ದೇಶಪ್ರೇಮವು ಅತಿಯಾಗಿದ್ದು ಎಂದು ಹೇಳಿರೋ ನಟ,  ಈ ರೀತಿಯ ಸಿನಿಮಾಗಳು ಹಾನಿಕರ ಎಂದು ಹೇಳಿದ್ದಾರೆ. ಇದರ ಜೊತೆಗೆ ಮತಾಂತರದಿಂದ ಹೆಣ್ಣು ಮಕ್ಕಳ ಬದುಕನ್ನು ನರಕ ಮಾಡುತ್ತಿರುವ ದಿ ಕೇರಳ ಸ್ಟೋರಿ ಚಿತ್ರವನ್ನೂ ನಟ ಟೀಕಿಸಿದ್ದಾರೆ. ಕೇರಳ ಸ್ಟೋರಿ ಚಿತ್ರವು  ಡಿಸ್ಟರ್ಬಿಂಗ್ ಸಿನಿಮಾ ಎಂದು ಕರೆದಿದ್ದಾರೆ. 

ಕೆಜಿಎಫ್​-2 ದಾಖಲೆಯನ್ನೂ ಪುಡಿ ಮಾಡ್ತು ಪಾಕ್​ ಕಹಾನಿ ಗದರ್-2: ಕಲೆಕ್ಷನ್​ ಎಷ್ಟು ಗೊತ್ತಾ?

ಫ್ರೀ ಪ್ರೆಸ್ ಜರ್ನಲ್​ಗೆ ನೀಡಿದ ಸಂದರ್ಶನದಲ್ಲಿ ನಸೀರುದ್ದೀನ್ ಶಾ ಮಾತನಾಡಿದ್ದಾರೆ. ‘ಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಅನ್ನೋದು ಇದರಿಂದಲೇ ಪ್ರೇರಿತಗೊಂಡಿದೆ. ಇಂದು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ದಿ ಕೇರಳ ಸ್ಟೋರಿ, ‘ಗದರ್ 2’ ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಅನ್ನೋದು ಗೊತ್ತಿದೆ’ ಎಂದಿದ್ದಾರೆ ಅವರು.

‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ   ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ.  ಕೇರಳದ ಯುವತಿಯರನ್ನು ಮತಾಂತರ ಮಾಡಿ ಉಗ್ರ ಸಂಘಟನೆಗೆ ಅವರನ್ನು ಸೇರಿಸುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದು ನೈಜ ಘಟನೆ ಆಧಾರಿತ ಎಂದು ತಂಡ ಹೇಳಿಕೊಂಡಿದೆ. ಅದೇ ಇನ್ನೊಂದೆಡೆ, ‘ಗದರ್ 2’ ಚಿತ್ರದ ಕಥೆ ದೇಶಪ್ರೇಮವನ್ನು ಬಿಂಬಿಸುತ್ತದೆ.    ಮಗನ ರಕ್ಷಣೆಗೆ ಪಾಕಿಸ್ತಾನಕ್ಕೆ ತೆರಳುವ ತಂದೆಯಾಗಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ.  ಇದಾಗಲೇ ಈ ಚಿತ್ರ  500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆದರೆ ದೇಶಪ್ರೇಮ ಹಾನಿಕರ ಎಂದಿದ್ದಾರೆ ನಟ ನಾಸಿರುದ್ದೀನ್​ ಶಾ. 

ಗದರ್​-2 ಅಬ್ಬರಕ್ಕೆ ಪಠಾಣ್​, ಬಾಹುಬಲಿ ದಾಖಲೆ ಉಡೀಸ್! ನಂ.1 ಪಟ್ಟಕ್ಕೇರಿದ ಸನ್ನಿ ಡಿಯೋಲ್​

 ಇದು ಜನರನ್ನು ಕೆರಳಿಸುತ್ತಿದೆ. ನಿಮ್ಮ ಅರ್ಥದಲ್ಲಿ ದೇಶಪ್ರೇಮ ಎಂದರೆ ಯಾವುದು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ದೇಶಪ್ರೇಮವೆನ್ನುವುದು ರಕ್ತದಲ್ಲಿ ಬರಬೇಕು. ಕೆಲವರಿಗೆ ಅದು ಏನು ಮಾಡಿದರೂ ಬರಲು ಸಾಧ್ಯವಿಲ್ಲ ಬಿಡಿ, ಅದರಲ್ಲಿಯೂ ನಿಮ್ಮಂಥವರಿಗೆ ದೇಶಪ್ರೇಮ ಹುಟ್ಟಬೇಕು ಎಂದರೆ ಅದು ಕಷ್ಟವೇ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಊಟ, ಬಟ್ಟೆ, ಖ್ಯಾತಿ ಎಲ್ಲವೂ ಭಾರತದಲ್ಲಿಯೇ ಆಗಬೇಕು, ಆದರೆ ನಿಮ್ಮ ದೇಶಪ್ರೇಮ ಮಾತ್ರ ಮತ್ತೊಂದು ದೇಶದತ್ತಲೇ ಇರುತ್ತದೆ, ನಿಮ್ಮಂಥವರು ಸಾಕಷ್ಟು ಮಂದಿ ಭಾರತದಲ್ಲಿ ಇದ್ದಾರೆ ಎಂದು ಇನ್ನೊಂದಿಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ (Social media) ನಟನ ವಿರುದ್ಧ ಕಿಡಿ ಕಾರುತ್ತಿದ್ದಾರೆ. 
 

Follow Us:
Download App:
  • android
  • ios