Asianet Suvarna News Asianet Suvarna News

ಕೆಜಿಎಫ್​-2 ದಾಖಲೆಯನ್ನೂ ಪುಡಿ ಮಾಡ್ತು ಪಾಕ್​ ಕಹಾನಿ ಗದರ್-2: ಕಲೆಕ್ಷನ್​ ಎಷ್ಟು ಗೊತ್ತಾ?

ಸನ್ನಿ ಡಿಯೋಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ-2' ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು ಕನ್ನಡದ ಕೆಜಿಎಫ್​-2 ದಾಖಲೆಯನ್ನು ಹಿಂದಿಕ್ಕಿದೆ. ಹಾಗಿದ್ದರೆ ಅದು ಗಳಿಸಿದ್ದೆಷ್ಟು? 
 

Sunny Deols Gadar 2  film beats Yashs KGF 2 film suc
Author
First Published Aug 27, 2023, 5:22 PM IST

ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಸೀಕ್ವೆಲ್​ ಇದೇ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಈ ಚಿತ್ರದ ಮೊದಲ ಭಾಗ  2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಆಗಲೂ ಇದೇ ರೀತಿಯ ನಾಗಾಲೋಟದಲ್ಲಿ ಓಡಿದ್ದ ಚಿತ್ರ ಈಗ ಪಾರ್ಟ್​-1 ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಪಾರ್ಟ್​-2 ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ.  ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ.   ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ.  ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ. ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು.  ಮೊದಲ ವಾರದ ಗಳಿಕೆಯಲ್ಲಿ ಪಠಾಣ್​ ದಾಖಲೆಯನ್ನೂ ಉಡೀಸ್​ ಮಾಡಿ ಚಿತ್ರ ಮುನ್ನುಗ್ಗಿತ್ತು. ಇದೀಗ ಕನ್ನಡದಲ್ಲಿ ಎಲ್ಲಾ ದಾಖಲೆಗಳನ್ನೂ ಹಿಂದಿಕ್ಕಿದ್ದ ಯಶ್​ ಅಭಿನಯದ ಕೆಜಿಎಫ್​-2 ಚಿತ್ರವನ್ನೂ ಹಿಂದಿಕ್ಕಿ ಗದರ್​-2 ಮುನ್ನುಗ್ಗುತ್ತಿದೆ.
 
 ಗದರ್ 2 ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಒಟ್ಟಾರೆಯಾಗಿ 439 ಕೋಟಿ ರೂಪಾಯಿಗಳನ್ನು  ಕಲೆಕ್ಷನ್​ ಮಾಡಿದೆ ಗದರ್​-2. ಈ ಮೂಲಕ ಕೆಜಿಎಫ್​ ದಾಖಲೆಯನ್ನೂ ಧೂಳಿಪಟ ಮಾಡಿದೆ.  'ಕೆಜಿಎಫ್-2' ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು.  1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ 'ಕೆಜಿಎಫ್-2' ಭಾರತದಲ್ಲೇ ಒಂದು ಸಾವಿರ  ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ವಿದೇಶಗಳಲ್ಲಿ  214 ಕೋಟಿಗೂ ಹೆಚ್ಚು ಗಳಿಸಿತ್ತು. ಆದರೆ ಈಗ ಗದರ್​-2 ಈ ದಾಖಲೆಯನ್ನು ಮುಗಿದಿದೆ. ಈಗಾಗಲೇ ಸಿನಿಮಾ 439 ಕೋಟಿ ಕಲೆಕ್ಷನ್ ಮಾಡಿದ್ದು ಈಗ ಕೆಜಿಎಫ್ 2 ಸಿನಿಮಾ ಹಿಂದೆ ದಾಖಲೆಗಳನ್ನು ಬ್ರೇಕ್ ಮಾಡಿದೆ. ಕೆಜಿಎಫ್ 2 ರೆಕಾರ್ಟ್ ಕ್ರಾಸ್ ಮಾಡಲು ಗದರ್ 2 ಸಿನಿಮಾಗೆ 16 ದಿನಗಳಷ್ಟೇ ಸಾಕಾಗಿವೆ.

ಶಾರುಖ್​ಗೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇದೆಂಥ ಕೆಲ್ಸ ಅಂತಿದ್ದಾರೆ ಪ್ರತಿಭಟನಾಕಾರರು!
 
  ಪಠಾಣ್ ಹಾಗೂ ಬಾಹುಬಲಿ ದಿ ಕನ್ಕ್ಲೂಷನ್​ ನಂತರ ಗದರ್ 2 ಸಿನಿಮಾ ಬಾಲಿವುಡ್​ನಲ್ಲಿ ಅತ್ಯಧಿಕ ಗಳಿಸಿದ ಮೂರನೇ ಸಿನಿಮಾ ಆಗಿ ಹೊರಹೊಮ್ಮಿದೆ. ಮೊದಲ ದಿನಗಳ ಗಳಿಕೆಯಲ್ಲಿ ಪಠಾಣ್​ ಹಾಗೂ ಬಾಹುಬಲಿಯ ದಾಖಲೆಯನ್ನು ಗದರ್​-2 ಹಿಂದಿಕ್ಕಿದ್ದರೂ ಒಟ್ಟಾರೆ ಕಲೆಕ್ಷ್​ನಲ್ಲಿ ಸದ್ಯ ಗದರ್​ಗೆ ಮೂರನೆಯ ಸ್ಥಾನವಿದೆ. ಬಾಹುಬಲಿಯ 511 ಕೋಟಿ ಹಾಗೂ ಪಠಾಣ್ ಸಿನಿಮಾದ 525 ಕೋಟಿ ಗಳಿಸಿದೆ.  ಆದರೆ ಇದಾಗಲೇ 439 ಕೋಟಿ ಕಲೆಕ್ಷನ್ ಮಾಡಿರೋ ಗದರ್​ಗೆ ಈ ದಾಖಲೆಯನ್ನೂ ಹಿಂದಿಕ್ಕಲು ಹೆಚ್ಚಿನ ದಿನ ಬೇಕಾಗಿಲ್ಲ ಎನ್ನುತ್ತಿದ್ದಾರೆ ಸಿನಿ ಮಂದಿ. ಅನಿಲ್ ಶರ್ಮಾ ನಿರ್ದೇಶಿಸಿದ ಈ ಸಿನಿಮಾದಲ್ಲಿ ಉತ್ಕರ್ಷ್ ಶರ್ಮಾ, ಸಿಮ್ರತ್ ಕೌರ್, ಮನೀಶ್ ಮಾಧವ, ಗೌರವ್ ಚೋಪ್ರಾ, ಲವ್ ಸಿನ್ಹಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
 
ಗದರ್ 2 ನಲ್ಲಿ ಸನ್ನಿ ಡಿಯೋಲ್ ಅಪ್ರತಿಮ ತಾರಾ ಸಿಂಗ್ ಆಗಿ ಪುನರಾಗಮನ ಆಗಲಿದ್ದಾರೆ.  ಅಮಿಷಾ ಪಟೇಲ್ ಸಕೀನಾ ಆಗಿದ್ದಾರೆ. 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್​ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್​ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ. ಈ ಮೂಲಕ ಸನ್ನಿ ಡಿಯೋಲ್ ಸಿನಿ ಭವಿಷ್ಯ ನುಡಿಸಿದ್ದ  ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ (Pandith Jagannath Guruji) ಮಾತು ನಿಜವಾಗಿದೆ.  ಬಲವಾದ ಗ್ರಹಗಳಿಂದ ಸನ್ನಿ ಪ್ರಯೋಜನ ಪಡೆಯುತ್ತಾರೆ. ಚಿತ್ರ ಹಿಟ್ ಆಗುವ ಉತ್ತಮ ಅವಕಾಶಗಳಿವೆ ಎಂದು ಗುರೂಜಿ ಚಿತ್ರ ಬಿಡುಗಡೆಗೂ ಮುನ್ನ ಹೇಳಿದ್ದರು.  'ಸನ್ನಿ ಡಿಯೋಲ್ ಅವರ ಜಾತಕದ ಪ್ರಕಾರ, ಅವರ ಗುರುವು ಸ್ಥಿರವಾದ ಮತ್ತು ಬಲವಾದ ರೂಪದಲ್ಲಿರುವಂತೆ ತೋರುತ್ತಿದೆ. ಅದು ಗದರ್ 2 ಬಿಡುಗಡೆಯಾದ ಮೊದಲ ವಾರದಲ್ಲಿ ಅದ್ಭುತಗಳನ್ನು ಮಾಡಬಲ್ಲದು.  ಪ್ರೇಕ್ಷಕರು ಪ್ರೀತಿಸುವ ಚಿತ್ರವಾಗಲಿದೆ ಮತ್ತು ಚಲನಚಿತ್ರದಲ್ಲಿನ ಸನ್ನಿ ಡಿಯೋಲ್‌ನ ಅಭಿನಯವನ್ನು ಮೆಚ್ಚುವ ಮೂಲಕ ಇದು ಸರಾಸರಿ ಹಿಟ್ ಆಗಲಿದೆ ಎಂದಿದ್ದರು. ಇದೀಗ ನಿಜವಾಗಿದೆ. 

ನನ್ನ ಹೆಂಡ್ತಿಯನ್ನೇ ಸಂಭಾಳಿಸಲಿಕ್ಕೆ ಆಗ್ತಿಲ್ಲ; ಫ್ಯಾನ್ಸ್​ ಎದುರು ಶಾರುಖ್ ವೇದನೆ​!
 

Follow Us:
Download App:
  • android
  • ios