ಗದರ್-2 ಅಬ್ಬರಕ್ಕೆ ಪಠಾಣ್, ಬಾಹುಬಲಿ ದಾಖಲೆ ಉಡೀಸ್! ನಂ.1 ಪಟ್ಟಕ್ಕೇರಿದ ಸನ್ನಿ ಡಿಯೋಲ್
ಸನ್ನಿ ಡಿಯೋಲ್ ಅವರ ಗದರ್-2 ಚಿತ್ರವು ಶಾರುಖ್ ಖಾನ್ರ ಪಠಾಣ್ ಮತ್ತು ಬಾಹುಬಲಿ-2 ದಾಖಲೆಯನ್ನು ಹಿಂದಿಕ್ಕಿದೆ. ಗದರ್-2 ಗಳಿಸಿದ್ದೆಷ್ಟು?
ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಸೀಕ್ವೆಲ್ ಕಳೆದ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಈ ಚಿತ್ರದ ಮೊದಲ ಭಾಗ 2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಆಗಲೂ ಇದೇ ರೀತಿಯ ನಾಗಾಲೋಟದಲ್ಲಿ ಓಡಿದ್ದ ಚಿತ್ರ ಈಗ ಪಾರ್ಟ್-1 ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಪಾರ್ಟ್-2 ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ. ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ. ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ. ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ. ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು. ಇದೀಗ ಇಲ್ಲಿಯವರೆಗೆ ಚಿತ್ರ 500 ಕೋಟಿ ರೂಪಾಯಿಗಳನ್ನು ಕ್ಲಬ್ಗೆ ಸೇರಿಸಿದೆ. ಈ ಮೂಲಕ ಪಠಾಣ್ ಹಾಗೂ ಬಾಹುಬಲಿ-2 ದಾಖಲೆಯನ್ನು ಧೂಳಿಪಟ ಮಾಡಿದೆ ಎನ್ನಲಾಗುತ್ತಿದೆ.
ಕಳೆದ ವಾರವಷ್ಟೇ ಗದರ್ 2 439 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು. ಈ ಮೂಲಕ ಕೆಜಿಎಫ್ ದಾಖಲೆಯನ್ನೂ ಧೂಳಿಪಟ ಮಾಡಿತ್ತು. 'ಕೆಜಿಎಫ್-2' ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು. 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ 'ಕೆಜಿಎಫ್-2' ಭಾರತದಲ್ಲೇ ಒಂದು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ವಿದೇಶಗಳಲ್ಲಿ 214 ಕೋಟಿಗೂ ಹೆಚ್ಚು ಗಳಿಸಿತ್ತು. ಆದರೆ ಈಗ ಗದರ್-2 ಈ ದಾಖಲೆಯನ್ನು ಮುಗಿದಿದೆ. ಈಗಾಗಲೇ ಸಿನಿಮಾ 439 ಕೋಟಿ ಕಲೆಕ್ಷನ್ ಮಾಡಿದ್ದು ಈಗ ಕೆಜಿಎಫ್ 2 ಸಿನಿಮಾ ಹಿಂದೆ ದಾಖಲೆಗಳನ್ನು ಬ್ರೇಕ್ ಮಾಡಿದೆ. ಕೆಜಿಎಫ್ 2 ರೆಕಾರ್ಟ್ ಕ್ರಾಸ್ ಮಾಡಲು ಗದರ್ 2 ಸಿನಿಮಾಗೆ 16 ದಿನಗಳಷ್ಟೇ ಸಾಕಾಗಿತ್ತು. ಇದೀಗ ಪಠಾಣ್ ಹಾಗೂ ಬಾಹುಬಲಿ ದಾಖಲೆಯನ್ನೂ ಗದರ್-2 ಅಳಿಸಿ ಹಾಕಿದೆ.
ಕೆಜಿಎಫ್-2 ದಾಖಲೆಯನ್ನೂ ಪುಡಿ ಮಾಡ್ತು ಪಾಕ್ ಕಹಾನಿ ಗದರ್-2: ಕಲೆಕ್ಷನ್ ಎಷ್ಟು ಗೊತ್ತಾ?
ಗದರ್ 2 ನಲ್ಲಿ ಸನ್ನಿ ಡಿಯೋಲ್ ಅಪ್ರತಿಮ ತಾರಾ ಸಿಂಗ್ ಆಗಿ ಪುನರಾಗಮನ ಆಗಲಿದ್ದಾರೆ. ಅಮಿಷಾ ಪಟೇಲ್ ಸಕೀನಾ ಆಗಿದ್ದಾರೆ. 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ.
ಈ ಮೂಲಕ ಸನ್ನಿ ಡಿಯೋಲ್ ಸಿನಿ ಭವಿಷ್ಯ ನುಡಿಸಿದ್ದ ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ (Pandith Jagannath Guruji) ಮಾತು ನಿಜವಾಗಿದೆ. ಬಲವಾದ ಗ್ರಹಗಳಿಂದ ಸನ್ನಿ ಪ್ರಯೋಜನ ಪಡೆಯುತ್ತಾರೆ. ಚಿತ್ರ ಹಿಟ್ ಆಗುವ ಉತ್ತಮ ಅವಕಾಶಗಳಿವೆ ಎಂದು ಗುರೂಜಿ ಚಿತ್ರ ಬಿಡುಗಡೆಗೂ ಮುನ್ನ ಹೇಳಿದ್ದರು. 'ಸನ್ನಿ ಡಿಯೋಲ್ ಅವರ ಜಾತಕದ ಪ್ರಕಾರ, ಅವರ ಗುರುವು ಸ್ಥಿರವಾದ ಮತ್ತು ಬಲವಾದ ರೂಪದಲ್ಲಿರುವಂತೆ ತೋರುತ್ತಿದೆ. ಅದು ಗದರ್ 2 ಬಿಡುಗಡೆಯಾದ ಮೊದಲ ವಾರದಲ್ಲಿ ಅದ್ಭುತಗಳನ್ನು ಮಾಡಬಲ್ಲದು. ಪ್ರೇಕ್ಷಕರು ಪ್ರೀತಿಸುವ ಚಿತ್ರವಾಗಲಿದೆ ಮತ್ತು ಚಲನಚಿತ್ರದಲ್ಲಿನ ಸನ್ನಿ ಡಿಯೋಲ್‌ನ ಅಭಿನಯವನ್ನು ಮೆಚ್ಚುವ ಮೂಲಕ ಇದು ಸರಾಸರಿ ಹಿಟ್ ಆಗಲಿದೆ ಎಂದಿದ್ದರು. ಇದೀಗ ನಿಜವಾಗಿದೆ.
ಸಂಸತ್ತಿನ ಹೊಸ ಕಟ್ಟಡಕ್ಕೂ ಕಾಲಿಟ್ಟ ಬ್ಲಾಕ್ಬಸ್ಟರ್ ಗದರ್-2: ಇತಿಹಾಸ ಸೃಷ್ಟಿ!