ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಅಮೆರಿಕಾ ಅಮೆರಿಕಾ ಸಿನಿಮಾ ಕೂಡ ಒಂದು. ಈ ಅದ್ಭುತ ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದಲ್ಲಿ ಬಂದಿರುವ ಈ ಸೂಪರ್ ಹಿಟ್ ಸಿನಿಮಾದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ 'ಅಮೆರಿಕಾ ಅಮೆರಿಕಾ'(America America) ಸಿನಿಮಾ ಕೂಡ ಒಂದು. ಈ ಅದ್ಭುತ ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar) ಸಾರಥ್ಯದಲ್ಲಿ ಬಂದಿರುವ ಈ ಸೂಪರ್ ಹಿಟ್ ಸಿನಿಮಾದಲ್ಲಿ ರಮೇಶ್ ಅರವಿಂದ್(Ramesh Aravind), ಅಕ್ಷಯ್ ಆನಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಾಲ ಶತಮಾನ ಕಳೆದರೂ ಈ ಸಿನಿಮಾ ಇಂದಿಗೂ ಪ್ರಸ್ತುತವಾಗಿದೆ. ಆಗಿನ ಕಾಲದಲ್ಲೇ ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕಾಗೆ ಹೋಗಿ ಶೂಟಿಂಗ್ ಮಾಡಿದ ಹೆಗ್ಗಳಿಕೆ ಕೂಡ ಈ ಚಿತ್ರಕ್ಕಿದೆ.
1997 ಏಪ್ರಿಲ್ 11ರಂದು ತೆರೆಗೆ ಬಂದ ಈ ಸಿನಿಮಾ ಕನ್ನಡ ಚಿತ್ರರಸಿಕರ ಮನಗೆದ್ದಿತ್ತು. 1996 ಜೂನ್ 26ರಂದು ಅಮೆರಿಕಾ ಅಮೆರಿಕಾ ಸಿನಿಮಾದ ಮುಹೂರ್ತ ನಡೆದಿತ್ತು. ತ್ರಿಕೋನ ಪ್ರೇಮಕಥೆಯ ಜೊತೆಗೆ ಭಾರತ ಮತ್ತು ಅಮೆರಿಕಾದ ನಡುವಿನ ಸಾಂಸ್ಕೃತಿಕ ವ್ಯತ್ಯಾಸ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದರು. ಅಮೆರಿಕದಲ್ಲಿರುವ ಹುಡುಗನನ್ನು ಮದುವೆಯಾಗಿ ಭಾರತದಿಂದ ಅಮೆರಿಕಾಗೆ ಹೋಗುವ ಹುಡುಗಿಯ ಪಾತ್ರದಲ್ಲಿ ಹೋಮಾ ಪಂಚಮುಖಿ ನಟಿಸಿದ್ದರು. ಅಮೆರಿಕಾ ಹುಡುಗನ ಪಾತ್ರದಲ್ಲಿ ಅಕ್ಷಯ್ ಆನಂದ್ ಕಾಣಿಸಿಕೊಂಡಿದ್ದರು. ಪ್ರೀತಿಸಿದ ಹುಡುಗಿಯನ್ನು ತ್ಯಾಗ ಮಾಡುವ ತ್ಯಾಗರಾಜನ ಪಾತ್ರದಲ್ಲಿ ರಮೇಶ್ ಅರವಿಂದ್ ಅಭಿನಯಿಸಿದ್ದರು. ಈ ಸಿನಿಮಾ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ಕನ್ನಡಿಗರಿಗೆ ಅಮೆರಿಕಾದ ದರ್ಶನ ಮಾಡಿಸಿದ್ದರು.
ಈ ಸಿನಿಮಾದ ಹಾಡುಗಳು ಸಹ ಅಷ್ಟೇ ಅದ್ಭುತವಾಗಿದ್ದವು. ಮನೋ ಮೂರ್ತಿ ಸಾರಥ್ಯದಲ್ಲಿ ಬಂದ ಸಂಗೀತ ಗಾನ ಪ್ರಿಯರ ಹೃದಯ ಗೆದ್ದಿತ್ತು. ಇಂದಿಗೂ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಸಿನಿಮಾದಲ್ಲಿ ಒಂದಾದರೂ ಭಾವಗೀತೆಯನ್ನು ಬಳಿಸಿಕೊಳ್ಳಬೇಕು ಎನ್ನುವ ಆಸೆ ನಾಗತಿಹಳ್ಳಿ ಅವರಿಗಿತ್ತು. ಅದರಂತೆ ಆಗಲೇ ಪ್ರಸಿದ್ಧಿ ಪಡೆದಿದ್ದ ಯಾವ ಮೋಹನ ಮುರಳಿ ಕರೆಯಿತು ಹಾಡನ್ನು ಬಳಸಿಕೊಂಡರು. ಈ ಹಾಡು ಚಿತ್ರದ ಯಶಸ್ಸಿಗೆ ಮತ್ತೊಂದು ಕಾರಣವಾಯಿತು ಎಂದರೆ ತಪ್ಪಾಗಲ್ಲ.
ಸಾಮಾಜಿಕ ಅಂತರ ಅಸ್ಪೃಶ್ಯತೆಯಾಗಿ ಕಾಣುತ್ತಿದೆ;ನಾಗತಿಹಳ್ಳಿ ಮೇಷ್ಟ್ರು ಹೇಳಿದ 14 ಅಂಶಗಳು!
ಈ ಕಥೆ ಹೊಳೆದಿದ್ದು ಹೇಗೆ?
ಈ ಅದ್ಭುತ ಸಿನಿಮಾದ ಕಥೆ ಹೊಳೆದಿದ್ದು ಹೇಗೆ ಎನ್ನುವುದನ್ನು ನಾಗತಿಹಳ್ಳಿ ಈ ಹಿಂದೆಯೇ ವಿವರಿಸಿದ್ದರು. 'ನನ್ನ ಪತ್ನಿ ಅಮೆರಿಕಾದಲ್ಲಿ ಸಾಫ್ಟ್ ವೇರ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು, ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ನಾನು ಬೇಸಿಗೆ ರಜೆಯಲ್ಲಿ ಅಮೆರಿಕಾಗೆ ಭೇಟಿ ನೀಡುತ್ತಿದ್ದೆ, ಆಗ ನನಗೆ ಈ ಐಡಿಯಾ ಹೊಳೆಯಿತು' ಎಂದು ಹೇಳಿದ್ದರು.
75 ಲಕ್ಷದಲ್ಲಿ ತಯಾರಾದ ಸಿನಿಮಾ
ಆ ಕಾಲದಲ್ಲೇ ಅಮೆರಿಕಾಗೆ ಹೋಗಿ ಸಿನಿಮಾ ಮಾಡಿದ ಖ್ಯಾತಿ ನಾಗತಿಹಳ್ಳಿ ಅವರದ್ದು. ಆ ಕಾಲದಲ್ಲಿ ಈ ಸಿನಿಮಾ 75 ಲಕ್ಷದಲ್ಲಿ ತಯಾರಾಗಿತ್ತು. ವಿದೇಶದಲ್ಲಿ ಚಿತ್ರೀಕರಣ ಮಾಡಿ ಬಂದಿದ್ದರೂ ಈ ಚಿತ್ರದ ಬಜೆಟ್ ಆಗಿನ ಸಮಯಕ್ಕೆ ಸುಮಾರು 70 ರಿಂದ 75 ಲಕ್ಷ. ಈ ಚಿತ್ರ 5 ಕೋಟಿ ರೂಪಾಯಿವರೆಗೂ ಬಿಸಿನೆಸ್ ಮಾಡಿದೆ ಎಂದು ವರದಿಗಳು ಹೇಳಿವೆ. ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆಯೂ ಈ ಚಿತ್ರಕ್ಕಿದೆ.
ದೋಹಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಇಂಡಿಯಾ ವರ್ಸಸ್ ಇಂಗ್ಲೇಂಡ್'!
ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾ
ಇನ್ನು ವಿಶೇಷ ಎಂದರೆ ಅಮೆರಿಕಾ ಅಮೆರಿಕಾ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಅತ್ಯುತ್ತಮ ಕನ್ನಡ ಸಿನಿಮಾ ಎಂದು ನ್ಯಾಷನಲ್ ಅವಾರ್ಡ್ ಮತ್ತು ಅತ್ಯುತ್ತಮ ನಟ, ಅತ್ಯುತ್ತಮ ಕಥೆ, ಅತ್ಯುತ್ತಮ ಸಿನಿಮಾ ರಾಜ್ಯ ಪ್ರಶಸ್ತಿಯನ್ನು ಅಮೆರಿಕಾ ಅಮೆರಿಕಾ ಚಿತ್ರ ಪಡೆದುಕೊಂಡಿದೆ.
