ದೋಹಾ(ಫೆ.19): ಪ್ರಖ್ಯಾತ ಕನ್ನಡ ಚಲನಚಿತ್ರಕಾರ, ನಟ, ನಿರ್ದೇಶಕ ಹಾಗೂ ಲೇಖಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಪರಿಚಯ ಕನ್ನಡಿಗರಿಗೆ ಪ್ರತ್ಯೇಕವಾಗಿ ನೀಡಬೇಕಿಲ್ಲ.  ವಿಭಿನ್ನ ಚಲನಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದವರು ನಾಗತ್ತಿಹಳ್ಳಿ ಚಂದ್ರಶೇಖರ್.

ನಾಗತಿಹಳ್ಳಿ ಚಂದ್ರಶೇಖರ್ 'ಕೊಟ್ರೇಶಿ ಕನಸು', 'ಅಮೆರಿಕ ಅಮೆರಿಕ' ಮತ್ತು 'ಹೂಮಾಲೆ' ಚಿತ್ರಗಳಿಗೆ ರಾಷ್ಟ್ರೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿರುವ ಹೆಸರುವಾಸಿ ನಿರ್ದೇಶಕರು. 

ನಾಗತಿಹಳ್ಳಿ ಚಂದ್ರಶೇಖರ್ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿರುವ ಕನ್ನಡ ಸಿನಿ ಪ್ರಿಯರ ನೆಚ್ಚಿನ ನಿರ್ದೇಶಕರೂ ಹೌದು. ಅದರಂತೆ ಕತಾರ್’ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಚಲನಚಿತ್ರ ಬಿಡುಗಡೆಯಾಗಿದೆ.

ಇಂಡಿಯಾ v/s ಇಂಗ್ಲೆಂಡ್‌ ಪ್ರೇಕ್ಷಕರು ಗೌರವಿಸುವ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್‌

ನಾಗತಿಹಳ್ಳಿ ಚಂದ್ರಶೇಖರ್ ಅವರ ನೂತನ ಚಲನಚಿತ್ರ 'ಇಂಡಿಯಾ ವರ್ಸಸ್ ಇಂಗ್ಲೇಂಡ್' ಕತಾರ್ ರಾಜಧಾನಿಯಾದ ದೋಹಾ ನಗರದಲ್ಲಿ ಬಿಡುಗಡೆಗೊಳ್ಳಲಿದೆ. ಶುಕ್ರವಾರ(ಫೆ.21)ಚಲನಚಿತ್ರ ಬಿಡುಗಡೆಗಾಗಿ ನಾಗತಿಹಳ್ಳಿ ಚಂದ್ರಶೇಖರ್ ದೋಹಾಗೆ ಆಗಮಿಸಿದ್ದಾರೆ.

ಚಲನಚಿತ್ರ ಬಿಡುಗಡೆ ಸಮಾರಂಭದ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸ್ವೀಕರಿಸಲಿದ್ದಾರೆ.