ಚಿತ್ರಮಂದಿರಗಳನ್ನು ಅಕ್ಟೋಬರ್ 15ರಿಂದ ತೆರೆಯುವುದಕ್ಕೆ ಕೇಂದ್ರ ಗೃಹಸಚಿವಾಲಯ ಈಗಾಗಲೇ ಒಪ್ಪಿಗೆ ನೀಡಿ ಗೈಡ್‌ಲೈನ್ಸ್ ಪ್ರಕಟಿಸಿದ್ದರೂ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅವಕಾಶ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

50% ಆಸನ ಅವಕಾಶವನ್ನೇ ನೀಡುವುದರ ಜೊತೆ ಇನ್ನೂ 20ಕ್ಕೂ ಹೆಚ್ಚಿ ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸ್ಟಾಂಡರ್ಡ್ ಓಪರೇಟಿಂಗ್ ಪ್ರೊಸೀಜರ್ ಪ್ರಕಾರ ನಿಯಮಗಳನ್ನು ಚಿತ್ರಮಂದಿರ ಅನುಸರಿಸಬೇಕಾಗಿದೆ.

ಥಿಯೇಟರ್ ಗೈಡ್‌ಲೈನ್ಸ್: ACಗೂ ಲಿಮಿಟ್, ಆರೋಗ್ಯ ಸೇತು ಇದ್ರೆ ಮಾತ್ರ ಸಿನಿಮಾ ನೋಡ್ಬೋದು

ಪಿವಿಆರ್, ಐನೋಕ್ಸ್, ಸಿನಿಪೊಲಿಸ್, ಮುಕ್ತ ಎ2 ಸಿನಿಮಾಗಳು ಸೇರಿ ಮಲ್ಟಿಪ್ಲೆಕ್ಸ್ ಚೈನ್‌ಗಳು ಅಕ್ಟೋಬರ್ 15ರಿಂದ ಕಾರ್ಯಾಚರಿಸಲು ಸಿದ್ಧತೆ ಮಾಡಿಕೊಂಡಿವೆ. 22 ರಾಜ್ಯಗಳಲ್ಲಿ 875 ಥಿಯೇಟರ್‌ಗಳನ್ನು ಆಪರೇಟ್ ಮಾಡುವ ಪಿವಿಆರ್ 14 ರಾಜ್ಯಗಳಲ್ಲಿ 496 ಥಿಯೇಟರ್ ಅಷ್ಟೇ ತೆರೆಯುವ ಅನುಮತಿ ಪಡೆದಿದೆ ಎಂದು ಸಿಇಒ  ಗೌತಮ್ ದತ್ತಾ ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪಿವಿಆರ್ ಕಾರ್ಯನಿರ್ಮಹಿಸುವ ಮಹಾರಾಷ್ಟ್ರದಲ್ಲಿ ಥಿಯೇಟರ್ ತೆರಯಲು ಇನ್ನೂ ಅನುಮತಿ ಸಿಕ್ಕಿಲ್ಲ. ಪಿಆರ್‌ಗೆ ಸಂಬಂಧಿಸಿ ಮಹಾರಾಷ್ಟ್ರ ದೊಡ್ಡ ಮಾರ್ಕೆಟ್. ಹೆಚ್ಚಿನ ಥಿಯೇಟರ್‌ಗಳಿರುವುದು ಇಲ್ಲಿಯೇ ಎಂದಿದ್ದಾರೆ ಗೌತಮ್.

ರಾಜ್ಯದ 600 ಥಿಯೇಟರ್‌ಗಳಿಗೆ ಸಿನಿಮಾ ಕೊಡೋರು ಯಾರು?

ಮೆಕ್ಸಿಕನ್ ಮೂವಿ ಥಿಯೇಟರ್ ಚೈನ್ ಸಿನಿಪೊಲಿಸ್ ಕೂಡಾ ಚಿತ್ರಮಂದಿರ ತೆರೆಯಲು ರೆಡಿಯಾಗಿದೆ. ಭಾರತದಲ್ಲಿ 350 ಚಿತ್ರಮಂದಿರವಿದ್ದು ಅದರಲ್ಲಿ ಶೇ.75ರಷ್ಟು ಚಿತ್ರ ಮಂದಿರ ತೆರೆಯಲಾಗುವುದು ಎಂದು ಸಿನಿಪೊಲಿಸ್ ಸಿಇಒ ದೇವಾಂಗ್ ಸಂಪತ್ ಹೇಳಿದ್ದಾರೆ.

ಈ ನಡುವೆ ಐನೊಕ್ಸ್‌ನಂತಹ ಕೆಲವು ಕಂಪನಿಗಳು ವೀಕ್ಷಕರಿಗೆ ಖಾಸಗಿ ಪ್ರದರ್ಶನ ನೀಡಲು ಮುಂದಾಗಿವೆ. ಕುಟುಂಬಗಳು ಅಥವಾ, ಸ್ನೇಹಿತರ ತಂಡ ಒಟ್ಟಿಗೆ ಬುಕ್ ಮಾಡಿ ಸಿನಿಮಾ ನೋಡುವ ವ್ಯವಸ್ಥೆ ಮಾಡಲಾಗಿದೆ.

ಥಿಯೇಟರ್‌ನಲ್ಲಿ ರಿ-ರಿಲೀಸ್ ಆಗಲಿದೆ ನರೇಂದ್ರ ಮೋದಿ ಸಿನಿಮಾ

ದೆಹಲಿ, ಕೇರಳ, ಜಮ್ಮುಕಾಶ್ಮೀರದಲ್ಲಿ ಮಾರ್ಚ್ 11, 16ರಿಂದ ಮಾರ್ಚ್ 31ರ ತನಕ  ಸಿನಿಮಾ ಮಂದಿರಗಳನ್ನು ಮುಚ್ಚಿತ್ತು. ಮಾರ್ಚ್ 25ರಿಂದ ಕೇಂದ್ರದ ಸೂಚನೆಯಂತೆ ಮುಚ್ಚಲಾಗಿತ್ತು. ಭಾರತದಲ್ಲಿ ಒಟ್ಟು 8750ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದು, ಇದರಲ್ಲಿ 3100 ಮಲ್ಟಿಪ್ಲೆಕ್ಸ್ ಮತ್ತು 5650 ಸಿಂಗ್ಲ್ ಸ್ಕ್ರೀನ್ ಆಪರೇಟಿಂಗ್‌ಗಳು.