ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಅ.15ರಂದು ರಿ ರಿಲೀಸ್ ಆಗಲಿದೆ. ಪ್ರಧಾನಿ ಮೋದಿ ಜೀನವಾಧಾರಿತ ಸಿನಿಮಾಗಳು ಅ.15ರಂದು ಥಿಯೇಟರ್‌ಗಳಲ್ಲಿ ವೀಕ್ಷಿಸಬಹುದು. 

ಬಡತನದಲ್ಲಿ ಬೆಳೆದು ದೇಶದ ಪ್ರಧಾನಿಯಾಗುವವರೆಗಿನ ಜರ್ನಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ 2019 ಮೇ 24ರಂದು ಮೊದಲ ಬಾರಿ ರಿಲೀಸ್ ಆಗಿತ್ತು. ಸಿನಿಮಾವನ್ನು ಸಂದೀಪ್ ಸಿಂಗ್ ಪ್ರೊಡ್ಯೂಸ್ ಮಾಡಿದ್ದರು.

ಮಾಧ್ಯಮಗಳ ವಿರುದ್ಧ ರಿಯಾ ಕಾನೂನು ಅಸ್ತ್ರ: ಬಾಲಿವುಡ್ ನಟಿಯನ್ನು ಹೆಣ್ಣು ಹುಲಿ ಎಂದ ಲಾಯರ್

ಪ್ರಧಾನಿ ನರೇಂದ್ರ ಮೋದಿ ದೇಶದ ಬೆಸ್ಟ್ ಪ್ರಧಾನ ಮಂತ್ರಿ. ಇದು 2019ರ ಚುನಾವಣೆಯಲ್ಲಿ ಸಾಬೀತಾಗಿದೆ. ಥಿಯೇಟರ್ ರಿ ಓಪನ್ ಸಂದರ್ಭ ಇಂತಹ ಸ್ಫೂರ್ಥಿ ಹೆಚ್ಚಿಸುವ ಸಿನಿಮಾ ನೋಡುವುದಕ್ಕಿಂತ ಒಳ್ಳೆಯದೇನಿದೆ.. ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಕಳೆದ ಬಾರಿ ರಾಜಕೀಯ ಕಾರಣಗಳಿಂದ ಬಹಳಷ್ಟು ಜನಕ್ಕೆ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಈ ಬಾರಿ ಸಿನಿಮಾ ಹೊಸ ಲೈಫ್ ಮಾಡುವ ಬಗ್ಗೆ ನಂಬಿಕೆ ಇದೆ ಎಂದಿದ್ದಾರೆ.

ಒಮುಂಗ್ ಕುಮಾರ್ ಸಿನಿಮಾ ನಿರ್ದೇಶನ ಮಾಡಿದ್ದು, ವಿವೇಕ್ ಆನಂದ್ ಒಬೆರಾಯ್ ಮೋದಿ ಪಾತ್ರ ಮಾಡಿದ್ದಾರೆ. ಬೊಮನ್ ಇರಾನಿ, ದರ್ಶನ್ ಕುಮಾರ್, ಮನೋಜ್ ಜೋಶಿ, ಪ್ರಶಾಂತ್ ನಾರಾಯಣ್, ಝರೀನಾ ವಹಾಬ್ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.