ನಿಮಾ ಮಂದಿರಗಳ ಗೈಡ್ ಲೈನ್ಸ್ ಪ್ರಕಟ | ಏಸಿಯೂ ಲಿಮಿಟ್ | ಫೋನಲ್ಲಿ ಆರೋಗ್ಯ ಸೇತು ಇಲ್ಲಾಂದ್ರೆ ಮೂವಿ ನೋಡೋಕಾಗಲ್ಲ 

ಕೇಂದ್ರ ಸಚಿವ ಪ್ರಸಾದ್ ಜಾವೇಡ್ಕರ್ ಸಿನಿಮಾ ಮಂದಿರಗಳ ಗೈಡ್ ಲೈನ್ಸ್ ಪ್ರಕಟಿಸಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಚಿತ್ರಮಂದಿರಗಳಲ್ಲಿ ಅನುಸರಿಸಬೇಕಾದ ಗೈಡ್‌ಲೈನ್ಸ್ ಬಗ್ಗೆ ತಿಳಿಸಲಾಗಿದೆ.

ಹೊಸ ಗೈಡ್‌ಲೈನ್ಸ್‌ ಪ್ರಕಾರ ಏಸಿಗೂ ಲಿಮಿಟ್ ಗದಿಪಡಿಸಲಾಗಿದೆ. ಫೋನಲ್ಲಿ ಆರೋಗ್ಯ ಸೇತು ಇಲ್ಲಾಂದ್ರೆ ಮೂವಿ ನೋಡೋಕಾಗಲ್ಲ. ಹೀಗೆ ಬಹಳಷ್ಟು ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಹೀಗೆ ಥಿಯೇಟರ್ ಗೈಡ್ ಲೈನ್ಸ್

  • ಸಿನಿಮಾ ಮಂದಿರದ ಒಟ್ಟು ಆಸನಗಳ ಶೇ 50ಕ್ಕಿಂತ ಹೆಚ್ಚು ಜನರು ಒಟ್ಟಿಗೆ ಕೂರುವಂತಿಲ್ಲ.
  • ಕುಳಿತುಕೊಳ್ಳುವಾಗ ಸಾಮಾಜಿಕ ಅಂತರ ಕಡ್ಡಾಯ
  • ಆಸನಗಳಲ್ಲಿ ಕುಳಿತು ಕೊಳ್ಳಬಾರದು ಎಂದು ಮಾರ್ಕ್ ಮಾಡಬೇಕು
  • ಕೈ ತೊಳೆಯಲು ಮತ್ತು ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಇರಬೇಕು
  • ಆರೋಗ್ಯ ಸೇತು ಎಪ್ಲಿಕೇಷನ್ ಇನ್‌ಸ್ಟಾಲ್ ಮಾಡುವಂತೆ ಪ್ರತಿಯೊಬ್ಬರಿಗೂ ಸೂಚಿಸಬೇಕು.
  • ಥರ್ಮಲ್ ಸ್ಕ್ರೀನಿಂಗ್ ಹೊರಗಡೆ ಮಾಡಬೇಕು. ಯಾವುದೇ ಲಕ್ಷಣಗಳಿಲ್ಲದಿದ್ದರೆ ಮಾತ್ರ ಒಳಗೆ ಬಿಡಬಹುದು.
  • ತಮ್ಮ ಆರೋಗ್ಯದ ಬಗ್ಗೆ ವೀಕ್ಷಕರು ಕಾಳಜಿ ವಹಿಸಿ, ಯಾವುದೇ ಅಸ್ವಸ್ಥತೆ ಕಾಣಿಸಿಕೊಂಡಲ್ಲಿ ತಿಳಿಸಬೇಕು.
  • ಬೇರೆ ಬೇರೆ ಕ್ರೀನ್‌ಗಳಿ ಶೋ ಸಮಯದಲ್ಲಿ ನಿಭಾಯಿಸಬೇಕು.
  • ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಬೇಕು
  • ಥಿಯೇಟರ್ ಮತ್ತು ಇತರ ಆಸುಪಾಸಿನಲ್ಲಿ ಸ್ಯಾನಿಟೈಸ್ ಮಾಡಿ ಸ್ವಚ್ಛ ಮಾಡುತ್ತಿರಬೇಕು
  • ಥಿಯೇಟರ್ ಪಕ್ಕ ಬಹಳಷ್ಟು ಕೌಂಟರ್‌ಗಳಿರಬೇಕು.
  • ಜನರು ಹೆಚ್ಚು ಅತ್ತಿಂದಿತ್ತ ಓಡಾಡುವಂತಿಲ್ಲ
  • ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕರ್‌ಗಳನ್ನು ಬಳಸಿ ಗುರುತು ಮಾಡಬೇಕು
  • ಜನದಟ್ಟಣೆ ಕಡಿಮೆ ಮಾಡಲು ದಿನಪೂರ್ತಿ ಕೌಂಟರ್‌ಗಳನ್ನು ತೆರೆದಿಡಬೇಕು
  • ಸಿನಿಮಾ ಮಂದಿರದಲ್ಲಿ ಉಗುಳುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ
  • ಪ್ಯಾಕ್ಡ್ ಆಹಾರ ಹಾಗೂ ಕೂಲ್‌ಡ್ರಿಂಕ್ಸ್ ಬಳಸಬಹುದು. ಥಿಯೇಟರ್ ಒಳಗೆ ಆಹಾರ ಸರ್ವ್ ಮಾಡುವಂತಿಲ್ಲ
  • ಪ್ಯಾಕ್ಡ್ ಫುಡ್ ಮಾರಾಟಕ್ಕೆ ಹೆಚ್ಚಿನ ಕೌಂಟರ್ ಮಾಡಬೇಕು
  • ಸ್ಯಾನಿಟೈಸೇಷನ್ ಮಾಡುವ ಸಿಬ್ಬಂದಿ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಗ್ಲೌಸ್, ಮಾಸ್ಕ್, ಬೂಟ್ಸ್, ಪಿಪಿಇ ಕಿಟ್ ನಿಡಬೇಕು
  • ಟ್ರಾಕ್‌ ಮಾಡುವುದಕ್ಕಾಗಿ ಅಗತ್ಯಕ್ಕಾಗಿ ಮೊಬೈಲ್ ನಂಬರ್ ನೀಡಲೇ ಬೇಕು.
  • ಹೆಚ್ಚಿಗೆ ಕೌಂಟರ್‌ಗಳನ್ನು ತೆರೆಯಬೇಕು
  • ಕೊರೋನಾ ಸಂಬಂಧಿಸಿದ ತುರ್ತು ಅಗತ್ಯಗಳಿಗೆ ಕಡ್ಡಾಯವಾಗಿ ಸ್ಪಂದಿಸಬೇಕು
  • ಸಿನಿಮಾ ಹಾಲ್ ಒಳಗೆ ಏಸಿ ಉಷ್ಣತೆ 24-30 ಡಿಗ್ರಿ ಸೆಲ್ಶಿಯಸ್ ಒಳಗಿರಬೇಕು
  • ಸಿನಿಮಾ ಆರಂಭಕ್ಕೆ ಮೊದಲೂ ಕೊನೆಗೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಬಗ್ಗೆ ಅನೌನ್ಸ್ ಮಾಡಬೇಕು.

Scroll to load tweet…

ಅಕ್ಟೋಬರ್ 15ರಿಂದ ಚಿತ್ರ ಪ್ರದರ್ಶನ: ಮಾಲೀಕರ ನಿರಾಸಕ್ತಿ