Asianet Suvarna News Asianet Suvarna News

ಪಿವಿಆರ್ ಐನಾಕ್ಸ್ 'Subscription Pass'ಮೂಲಕ ಸಿನಿಮಾ ನೋಡಿ ಆನಂದಿಸಿ..!

ಇತ್ತೀಚೆಗೆ ಸಿನಿಮಾ ಥಿಯೇಟರ್‌ ಒಳಗೆ ಪ್ರೇಕ್ಷಕರು ಬರುತ್ತಿರುವುದು ಕಡಿಮೆ ಆಗಿದೆ ಎಂಬುದು ಥಿಯೇಟರ್ ಮಾಲೀಕರ ಅಳಲು. ಹೀಗಾಗಿ ಇಂತಹ ಪ್ಲಾನ್‌ಗಳನ್ನು ಮಾಡಲಾಗುತ್ತಿದ್ದು, ಈ ಮೂಲಕವಾದರೂ ಸಿನಿಮಾ ಪ್ರೇಕ್ಷಕರು ಮಾಲ್‌ಗಳು ಹಾಗೂ ಸಿನಿಮಾ ಮಂದಿರಗಳಿಗೆ ಬರಲಿ ಎಂಬುದು ಸಿನಿಮಾ ಮಂದಿರದ ಮಾಲೀಕರ ಉದ್ದೇಶ. 

Multiplex company PVR INOX Ltd launched a movie subscription pass srb
Author
First Published Oct 16, 2023, 6:11 PM IST

ಪಿವಿಆರ್ ಐನಾಕ್ಸ್ ಲಿಮಿಟೆಡ್, ಮಲ್ಟಿಪ್ಲೆಕ್ಸ್ ಕಂಪನಿ ಸಿನಿಮಾ ಸಬ್‌ಸ್ರ್ಕಪ್ಶನ್  ಪಾಸ್ ಬಿಡುಗಡೆ ಮಾಡಿದೆ. ರೂ. 699 ರ ಈ ಪಾಸ್ ಪ್ರೇಕ್ಷಕರು ಸಿನಿಮಾ ಥಿಯೇಟರ್‌ಗೆ ಬರುವ ಉದ್ದೇಶ ಹೊಂದಿದೆ. ಈ ಸಿನಿಮಾ Subscription ಪ್ಲಾನ್ ಮಿನಿಮಮ್ 3 ತಿಂಗಳ ಪಿರಿಯೆಡ್‌ ದಾಗಿದ್ದು, ಐಮ್ಯಾಕ್ಸ್, ಗೋಲ್ಡ್, ಲ್ಯೂಕ್ಸ್ ಮತ್ತು ಡೈರೆಕ್ಟರ್ಸ್‌ ಕಟ್ ನಿಂದ ರಿಯಾಯಿತಿ ಹೊಂದಿದೆ. ಸೋಮವಾರದಿಂದ ಗುರುವಾರದ ವರೆಗೆ ಮಾತ್ರ ಈ ಪಾಸ್ ಅಪ್ಲಿಕೇಬಲ್ ಆಗಿದ್ದು, ಶುಕ್ರವಾರದಿಂದ ಭಾನುವಾರದವರೆಗೆ ಈ ಪಾಸ್ ನಡೆಯುವುದಿಲ್ಲ. 

ಇತ್ತೀಚೆಗೆ ಸಿನಿಮಾ ಥಿಯೇಟರ್‌ ಒಳಗೆ ಪ್ರೇಕ್ಷಕರು ಬರುತ್ತಿರುವುದು ಕಡಿಮೆ ಆಗಿದೆ ಎಂಬುದು ಥಿಯೇಟರ್ ಮಾಲೀಕರ ಅಳಲು. ಹೀಗಾಗಿ ಇಂತಹ ಪ್ಲಾನ್‌ಗಳನ್ನು ಮಾಡಲಾಗುತ್ತಿದ್ದು, ಈ ಮೂಲಕವಾದರೂ ಸಿನಿಮಾ ಪ್ರೇಕ್ಷಕರು ಮಾಲ್‌ಗಳು ಹಾಗೂ ಸಿನಿಮಾ ಮಂದಿರಗಳಿಗೆ ಬರಲಿ ಎಂಬುದು ಸಿನಿಮಾ ಮಂದಿರದ ಮಾಲೀಕರ ಉದ್ದೇಶ. ಇದೀಗ ರೂ. 699/- ರ ಪಾಸ್ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಪಿವಿಆರ್ ಸಫಲವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಈ ಮಾಸಿಕ ಚಂದಾದಾರಿಕೆ ಪಾಸ್‌ಗಳು (Subscription Pass)ಇಂದಿನಿಂದ (16 ಅಕ್ಟೋಬರ್ 2023) ಪ್ರೇಕ್ಷಕರಿಗೆ ಪಿವಿಆರ್ ಐನಾಕ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. 

ಹನಿಮೂನ್‌ಗೆ ಹೋಗದೇ ಫ್ರೆಂಡ್ಸ್ ಜೊತೆ ಟೂರ್? ಏನಾಯ್ತು ಪರಿಣಿತಿ ಚೋಪ್ರಾ ಲೈಫಲ್ಲಿ?

ಸ್ಥಳಿಯ ಸಿನಿಮಾಗಳು ಇಂದು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬದಲಾಗುತ್ತಿವೆ. ಎಲ್ಲ ಭಾಷೆಗಳ ಚಿತ್ರಗಳು ಎಲ್ಲಾ ರಾಜ್ಯಗಳ ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದ್ದು, ಹೆಚ್ಚಿನ ಕಾಂಪಿಟೀಶನ್ ಎದುರಿಸುತ್ತಿವೆ. ಜತೆಗೆ ಸಿನಿಮಾಗಳಲ್ಲಿ ವೀಕ್ಷಿಸಲು ಸಾಕಷ್ಟು ಓಟಿಟಿ ಹಾಗೂ ಆನ್‌ಲೈನ್ ಫ್ಲಾಟ್‌ಫಾರ್ಮ್ಗಳು ಲಭ್ಯವಿವೆ. ಹೀಗಾಗಿ ಸಿನಿಮಾಪ್ರಿಯರೂ ಕೂಡ ಸಿನಿಮಾ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ ಕಡೆ ಬರುತ್ತಿಲ್ಲ. ಸಿನಿಮಾ ಪ್ರೇಕ್ಷಕರು ಸಿನಿಮಾ ನೋಡುವುದನ್ನು ಬಿಟ್ಟಿಲ್ಲ, ಆದರೆ ಸಿನಿಮಾ ಮಂದಿರಗಳು ಮಾತ್ರ ಖಾಲಿ ಖಾಲಿ ಎಂಬಂತಾಗಿವೆ. ಈ ಮೂಲಕ ಪಿವಿಆರ್ ಸಕ್ಸಸ್ ಕಂಡರೆ ಮುಂದೆ ಹಲವು ಕಂಪನಿಗಳು ಈ ಪ್ರಯೋಗಕ್ಕೆ ಮುಂದಾಗಬಹುದು, ಕಾದು ನೋಡಬೇಕು!

ಶಾರುಖ್​ ಈ ಐದು ಚಿತ್ರಗಳು ಕೊನೆಗೂ ರಿಲೀಸ್ ಆಗ್ಲಿಲ್ಲ: ಹಾಲಿವುಡ್​ಗೂ ಟ್ರೈ ಮಾಡಿ ಸೋತ ನಟ!

Follow Us:
Download App:
  • android
  • ios