Asianet Suvarna News Asianet Suvarna News

ಶಾರುಖ್​ ಈ ಐದು ಚಿತ್ರಗಳು ಕೊನೆಗೂ ರಿಲೀಸ್ ಆಗ್ಲಿಲ್ಲ: ಹಾಲಿವುಡ್​ಗೂ ಟ್ರೈ ಮಾಡಿ ಸೋತ ನಟ!

 ಶಾರುಖ್​ ಖಾನ್​ ಅವರ ಒಂದು ಹಾಲಿವುಡ್​ ಮತ್ತು ನಾಲ್ಕು ಬಾಲಿವುಡ್​  ಚಿತ್ರಗಳು ಕೊನೆಗೂ ರಿಲೀಸ್ ಆಗಲೇ ಇಲ್ಲ. ಅವು ಯಾವುವು? 
 

Hollywood and Bollywood movies of Shahrukh Khan that were never release suc
Author
First Published Oct 16, 2023, 5:43 PM IST

ಬಾಲಿವುಡ್​ ಬಾದ್​ಶಾಹ್​ ಎಂದೇ ಕರೆಯಲ್ಪಡುವ ಶಾರುಖ್​ ಖಾನ್​ ಇದೀಗ ಪಠಾಣ್​ ಮತ್ತು ಜವಾನ್​ ಯಶಸ್ಸಿನ ಗೆಲುವಿನಿಂದ ಬೀಗುತ್ತಿದ್ದಾರೆ. ಜವಾನ್​ ಇದಾಗಲೇ ಬಾಲಿವುಡ್​ನ ಎಲ್ಲಾ ದಾಖಲೆಗಳನ್ನೂ ಉಡೀಸ್​ ಮಾಡಿ ಮುನ್ನುಗ್ಗುತ್ತಿದೆ. ಚಿತ್ರ ಇದಾಗಲೇ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಆದರೆ ಒಂದು ಚಿತ್ರ ತಯಾರು ಮಾಡಿದಾಗ, ಅದು ಸಕ್ಸಸ್​ ಆಗಿಯೇ ಆಗುತ್ತದೆ ಎಂದು ಹೇಳುವುದು ಕಷ್ಟೇ. ನೂರಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡಿ ದೊಡ್ಡ ದೊಡ್ಡ ಸ್ಟಾರ್​ಗಳನ್ನು ಹಾಕಿಕೊಂಡು ಸಿನಿಮಾ ಮಾಡಿದರೂ ಅದು ಫ್ಲಾಪ್​ ಆಗುವುದು ಇದೆ, ಅದೇ ಇನ್ನೊಂದೆಡೆ ಕೆಲವೇ ಕೋಟಿ ರೂಪಾಯಿಗಳಲ್ಲಿ ಸಾಮಾನ್ಯ ನಟರನ್ನು ಹಾಕಿಕೊಂಡು ಮಾಡುವ ಚಿತ್ರಗಳೂ ಭರ್ಜರಿ ಯಶಸ್ಸು ಕಾಣುವುದು ಇದೆ. ಯಾವುದನ್ನೂ ಹೀಗೆಯೇ ಎಂದು ಊಹಿಸುವುದು ಕಷ್ಟ.

ಅದೇ ರೀತಿ ನಟ ಶಾರುಖ್​ ಖಾನ್​ ಅವರ ಐದು ಚಿತ್ರಗಳು ರಿಲೀಸ್​ ಆಗಲೇ ಇಲ್ಲ ಎನ್ನುವ ಸತ್ಯ ಇದೀಗ ಬಹಿರಂಗಗೊಂಡಿದೆ. ಬ್ಲಾಕ್​ಬಸ್ಟರ್​ ಚಿತ್ರ ಕುಚ್​ ಕುಚ್​ ಹೋತಾ ಹೈನ 25ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರೋ ನಟ ಶಾರುಖ್​, ನೀಡಿರುವ ಬ್ಲಾಕ್​ ಬಸ್ಟರ್​ ಚಿತ್ರಗಳುಹಲವಾರು. 95ಕ್ಕೂ ಚಿತ್ರಗಳಲ್ಲಿ ನಟಿಸಿರುವ ಶಾರುಖ್​ ಅವರ ಕೆಲವು ಚಿತ್ರಗಳು ಫ್ಲಾಪ್​ ಎಂದು ಸಾಬೀತಾಗಿದ್ದರೆ ಐದು ಚಿತ್ರಗಳು ಬಿಡುಗಡೆಯೇ ಕಾಣಲಿಲ್ಲ. ಇವುಗಳ ಪೈಕಿ ಒಂದು ಹಾಲಿವುಡ್​​ ಚಿತ್ರ ಕೂಡ ಇದೆ.

ಹೇಮಾಮಾಲಿನಿ @75: ಶಾರುಖ್​ ಖಾನ್​ರನ್ನು ರಿಜೆಕ್ಟ್​ ಮಾಡಿದ್ದ ಕನಸಿನ ಕನ್ಯೆಯ ಇಂಟರೆಸ್ಟಿಂಗ್​ ವಿಷ್ಯ ರಿವೀಲ್​!

ಆ ಐದು ಚಿತ್ರಗಳು ಯಾವುವು ಎಂದು ನೋಡುವುದಾದರೆ: 

ರಕ್ಷಕ್​, ಅಹಮಕ್​
ರಕ್ಷಕ್ ಹೆಸರಿನ ಚಿತ್ರದ ಚಿತ್ರೀಕರಣ 2001 ರಲ್ಲಿ ಪ್ರಾರಂಭವಾಯಿತು. ಶಾರುಖ್ ಖಾನ್ ಜೊತೆಗೆ ಅಮಿತಾಭ್​ ಬಚ್ಚನ್​ ಕೂಡ ಇದ್ದರು.  ಜೂಹಿ ಚಾವ್ಲಾ ನಾಯಕಿಯಾಗಿದ್ದರು. ಆದರೆ ಕಾರಣಾಂತರಗಳಿಂದ ಈ ಚಿತ್ರ ಬಿಡುಗಡೆಯೇ ಕಾಣಲಿಲ್ಲ. ಅಹಮಕ್​ ಹೆಸರು ಚಿತ್ರ  ಸಂಪೂರ್ಣವಾಗಿ ಸಿದ್ಧವಾಗಿತ್ತು.  1999ರಲ್ಲಿ ತೆರೆ ಕಾಣಬೇಕಿತ್ತು.  ಚಿತ್ರ ಪೂರ್ಣಗೊಂಡು  ಕೆಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಆದರೆ ಈ ಚಿತ್ರ ಥಿಯೇಟರ್‌ಗೆ ಬರಲೇ ಇಲ್ಲ.

ಎಕ್ಸ್​ಟ್ರೀಮ್​ ಸಿಟಿ, ಶಿಖರ್​
ಇದು ಹಾಲಿವುಡ್ ಚಿತ್ರ. ಶಾರುಖ್​ ಖಾನ್​ ತಮ್ಮ ಅದೃಷ್ಟವನ್ನು ಹಾಲಿವುಡ್​ನಲ್ಲಿ ನೋಡಲು ಬಯಸಿದ್ದರು.  2011 ರಲ್ಲಿ, ಅವರು ಹಾಲಿವುಡ್ ಚಲನಚಿತ್ರ ಎಕ್ಸ್​ಟ್ರೀಮ್​ ಸಿಟಿ ಕೆಲಸ ಮಾಡಿದರು. ಈ ಚಿತ್ರದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಕೂಡ ಅವರ ಜೊತೆಗಿದ್ದರು. ಆದರೆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಇನ್ನೊಂದು ಬಿಡುಗಡೆ ಕಾಣದ ಬಾಲಿವುಡ್​ ಚಿತ್ರ ಶಿಖರ್​. ಈ ಚಲನಚಿತ್ರದ ನಿರ್ದೇಶಕರು ಸುಭಾಷ್ ಘಾಯ್. ಸುಭಾಷ್​ ಅವರು ಶಾರುಖ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅವರೊಂದಿಗೆ ಈ ಚಿತ್ರವನ್ನು ಮಾಡಲು ಬಯಸಿದ್ದರು. ಆದಾಗ್ಯೂ, ಶಾರುಖ್ ಖಾನ್ ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ಸುಭಾಷ್ ಘಾಯ್ ಅದಕ್ಕೆ ಒಪ್ಪಲಿಲ್ಲ. ಇದರಿಂದಾಗಿ ಶಾರುಖ್ ಖಾನ್ ಚಿತ್ರದಿಂದ ಹೊರಗುಳಿದರು, ನಂತರ ಸುಭಾಷ್ ಘಾಯ್ ಅವರು ಅನಿಲ್ ಕಪೂರ್, ಐಶ್ವರ್ಯ ರೈ ಮತ್ತು ಅಕ್ಷಯ್ ಖನ್ನಾ ಅವರೊಂದಿಗೆ ತಾಲ್ ಎಂಬ ಚಿತ್ರವನ್ನು ನಿರ್ಮಿಸಿದರು, ಇದು ಭಾರಿ ಹಿಟ್ ಆಗಿತ್ತು.

Tiger 3 Trailer: ಚಿಕ್ಕ ಟವಲ್​ನಲ್ಲೇ ಕತ್ರಿನಾ ಫೈಟಿಂಗ್​- ಗುದ್ದಾಟದಲ್ಲೂ ಗ್ಲಾಮರಸ್ಸಾ? ತಲೆಕೆಡಿಸಿಕೊಂಡ ಫ್ಯಾನ್ಸ್​!

ಕಿಸೀ ನೆ ದಿಲ್ ಲಗಾ ಕೆ ದೇಖೋ: 
ಈ ಚಿತ್ರದ ಶೂಟಿಂಗ್ ಕೂಡ ಅರ್ಧಕ್ಕಿಂತ ಹೆಚ್ಚು ಮುಗಿದಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದು, ಚಿತ್ರ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
 

Follow Us:
Download App:
  • android
  • ios