Asianet Suvarna News Asianet Suvarna News

Death Hoax news:ಮತ್ತೆ ಹರಿದಾಡುತ್ತಿದೆ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ನಿಧನ ಸುದ್ದಿ!

  • ಎಲ್ಲೆಡೆ ಹರಿದಾಡುತ್ತಿದೆ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ನಿಧನ ಸುದ್ದಿ
  • ಬೀನ್ ಆರೋಗ್ಯವಾಗಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಸುಳ್ಳು
  • ಪದೇ ಪದೇ 66ರ ಹರೆಯದ ಕಾಮಿಡಿ ನಟನ ಸಾವಿನ ಸುಳ್ಳು ಸುದ್ದಿ ಹರಿದಾಡುತ್ತಿರುವುದೇಕೆ?
Mr Bean aka Rowan Atkinson Not Dead Hoax news massively spreading across social media ckm
Author
Bengaluru, First Published Nov 23, 2021, 5:20 PM IST

ಲಂಡನ್(ನ.23):  ಮಿಸ್ಟರ್ ಬೀನ್...ಈ ಹೆಸರು ಕೇಳಿದರೆ ಮುಖದಲ್ಲಿ ನಗು ಉಕ್ಕುತ್ತದೆ. ಅಷ್ಟರ ಮಟ್ಟಿಗೆ ಮಿಸ್ಟರ್ ಬೀನ್(Mr Bean)  ಖ್ಯಾತಿಯ ರೋವನ್ ಅಟ್ಕಿನ್ಸನ್ ವಿಶ್ವದಲ್ಲಿ ಆವರಿಸಿಕೊಂಡಿದ್ದಾರೆ. ಬ್ರಿಟೀಷ್ ಕಾಮಿಡಿ ನಟ ವಿಶ್ವವನ್ನೇ ನಗಿಸಿದ, ನಗಿಸುತ್ತಿರುವ ಅದ್ಭುತ ಕಲಾವಿದ. ಸದ್ಯ 66ರ ಹರೆಯದ  ರೋವನ್ ಅಟ್ಕಿನ್ಸನ್(Rowan Atkinson ) ಸಾವಿನ ಸುದ್ದಿ ಸಾಮಾಜಿಕ ಜಾಲತಾಣ ತಾಣ(Social Media) ಸೇರಿದಂತೆ ಎಲ್ಲಡೆ ಹರಿದಾಡುತ್ತಿದೆ.  ಈ ಸುದ್ಧಿ ಸುಳ್ಳು(Fake News). ರೋವನ್ ಅಟ್ಕಿನ್ಸನ್ ಆರೋಗ್ಯವಾಗಿದ್ದಾರೆ.

ಮಿಸ್ಟರ್ ಬೀನ್ ಪಾತ್ರದ ಮೂಲಕ ಹೆಸರುವಾಸಿಯಾದ ರೋವನ್ ಅಟ್ಕಿನ್ಸನ್ ಸಾವಿನ ಸುದ್ಧಿ ಟ್ವಿಟರ್ ಮೂಲಕ ಮಿಂಚಿನಂತೆ ಹರಿದಾಡಿತು. ಶೋಕ ಸಂತಾಪಗಳು ಆರಂಭಗೊಂಡವು. ಆದರೆ ಕೆಲ ಹೊತ್ತಲ್ಲೇ ರೋವನ್ ಅಟ್ಕಿನ್ಸನ್ ಸಾವಿನ ಸುದ್ಧಿ ಸುಳ್ಳು(dead hoax news) ಅನ್ನೋದು ಬಹಿರಂಗವಾಗಿದೆ. ಹಲವು ಸ್ಪಷ್ಟನೆಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಬೀನ್ ಸಾವಿನ ಸುಳ್ಳು ಮಾತ್ರ ಈಗಲೂ ಹರಿದಾಡುತ್ತಿದೆ.

Mr. ಬೀನ್ ಸಿಕ್ಕರೆ ಜನ ಏನು ಕೇಳ್ತಾರೆ ಗೊತ್ತೆ?

ಬ್ರಿಟಿಷ್  ಹಾಸ್ಯನಟ(English actor) ಮತ್ತು ಬರಹಗಾರ ರೋವನ್ ಅಟ್ಕಿನ್ಸನ್ ನಿಧನದ ಸುಳ್ಳು ಸುದ್ದಿ ಇದೇ ಮೊದಲಲ್ಲ  ಕೆಲವು ಬಾರಿ ಈ ರೀತಿ ನಿಧನ ಸುದ್ದಿ ಹರಿದಾಡಿದೆ. 2017ರಲ್ಲಿ ಮೊದಲ ಬಾರಿಗೆ  ರೋವನ್ ಅಟ್ಕಿನ್ಸನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ಅತೀ ದೊಡ್ಡ ಆಘಾತ ತಂದಿತ್ತು. ಅಭಿಮಾನಿಗಳು ತೀವ್ರ ನೊಂದಿದ್ದರು. ಆದರೆ ಈ ಸುದ್ಧಿ ಸುಳ್ಳು ಎಂದಾಗ ನಿಟ್ಟುಸಿರು ಬಿಟ್ಟಿದ್ದರು. ಆದರೆ ಪೊಲೀಸರು ಈ ಸುಳ್ಳು ಸುದ್ದಿಯನ್ನು ಸುಮ್ಮನೆ ಬಿಟ್ಟಿರಲಿಲ್ಲ. ಇದರ ಜಾಡು ಹಿಡಿದು ಸಾಗಿದಾಗ,  ವ್ಯವಸ್ಥಿತಿ ಜಾಲವೊಂದು ಕೆಲಸ ಮಾಡುತ್ತಿದೆ ಅನ್ನೋದು ಬೆಳಕಿಗೆ ಬಂದಿತ್ತು.

2017ರಲ್ಲಿ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ಕಾರು ಅಪಘಾದಲ್ಲಿ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ಪೋಸ್ಟ್ ಮಾಡಲಾಗಿತ್ತು. 58ರ ಹರೆಯದ ರೋವನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.  ಮಾರ್ಚ್ 18, 2017ರಲ್ಲಿ ಮತ್ತೊಂದು ಟ್ವೀಟ್ ಮೂಲಕ ರೋವನ್ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಈ ಟ್ವೀಟ್ ಕ್ಲಿಕ್ ಮಾಡಿದಾಗ ಇತರ ವೆಬ್‌ಪೇಜ್‌ ತೆರೆದಿತ್ತು. ಇಲ್ಲಿ ಫೋನ್ ನಂಬರ್ ಡಯಲ್ ಮಾಡಲು ನಮೂದಿಸಲಾಗಿತ್ತು. ಈ ಫೋನ್ ನೇರವಾಗಿ ನಿಮ್ಮಕ್ರೆಡಿಟ್ ಕಾರ್ಡ್ ಸಂಖ್ಯೆ ನಮೂದಿಸಿ ಸಾಫ್ಟ್‌ವೇರ್ ಖರೀದಿಗೆ ಸೂಚಿಸಲಾಗಿತ್ತು. ಹೀಗೆ ಮಾಡಿದರೆ ಕ್ರೆಡಿಟ್‌ ಕಾರ್ಡ್, ಡೆಬಿಟ್ ಕಾರ್ಡ್‌ನಲ್ಲಿರುವ ಎಲ್ಲಾ ಹಣ ದೋಚುವ ವಂಚಕ ಜಾಲ ಇದಾಗಿತ್ತು. 

63ರ ಪ್ರಾಯದಲ್ಲಿ ತಂದೆಯಾದ ರಸಿಕ ಮಿಸ್ಟರ್ ಬೀನ್

ಸೆಲೆಬ್ರೆಟಿಗಳ ಹೆಸರಿನಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿ ವಂಚನೆ ಮಾಡವು ಜಾಲಗಳು ಹಲವಾರಿದೆ. ಆಂಟಿ-ವೈರಸ್ ಸಂಸ್ಥೆ(McFee) ಪ್ರಕಾರ ಆನ್‌ಲೈನ್ ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಇಂಟರ್ನೆಟ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಫಿಶಿಂಗ್ ಲಿಂಕ್‌ಗಳಿಗಾಗಿ ಪ್ರಸಿದ್ಧ ಹೆಸರುಗಳನ್ನು ಬಳಸುತ್ತಾರೆ.  ರೋವನ್ ಅಟ್ಕಿನ್ಸನ್ ಹಲವು ಬಾರಿ ಈ ರೀತಿಯ ಸುಳ್ಳು ಸುದ್ದಿಗೆ ಗುರಿಯಾಗಿದ್ದಾರೆ. 

ಜನವರಿ 6, 1955ರಲ್ಲಿ ಇಂಗ್ಲೆಂಡ್‌ನ ಕಾನ್ಸೆಟ್ ಕೌಂಟಿ ದರ್ಹ್ಯಾಮ್‌ನಲ್ಲಿ ಹುಟ್ಟಿದ ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್, ಶಾಲಾದಿನದಲ್ಲಿ ಸಂಕೋಚದ ವಿದ್ಯಾರ್ಥಿಯಾಗಿದ್ದ. ಆದರೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದ ರೋವನ್, ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು.  ಶಾಲಾ ದಿನದಲ್ಲಿ ಜೇಮ್ಸ್ ಬಾಂಡ್ ಚಿತ್ರದ ನಾಯಕನಾಗಬೇಕು ಅನ್ನೋ ಕನಸು ಕಂಡಿದ್ದರು. ತನ್ನ ನಟನೆಯಲ್ಲಿನ ಹಾಸ್ಯಕ್ಕೆ ಎಲ್ಲರು ಮರುಳಾಗುತ್ತಿದ್ದರು. ಹೀಗಾಗಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದಿದ್ದರೂ, ರೋವನ್ ನೇರವಾಗಿ ನಟನೆಯತ್ತ ಗಮನ ಕೇಂದ್ರೀಕರಿಸಿದ್ದರು. 1979ರಲ್ಲಿ ರೇಡಿಯಾ ಮೂಲಕ ರೋವನ್ ಪಯಣ ಆರಂಭಗೊಂಡಿತು. ಅದೇ ವರ್ಷ ಟಿವಿ ಶೋನಲ್ಲಿ ಕಾಣಿಸಿಕೊಂಡು ಎಲ್ಲರ ಮನೆಮಾತಾದರು. ರೋವನ್ ತಾನೇ ಸೃಷ್ಟಿಸಿದ ಪಾತ್ರ ಮಿಸ್ಟರ್ ಬೀನ್. 1990ರಲ್ಲಿ ಮಿಸ್ಟರ್ ಬೀನ್ ಕಾಮಿಡಿ ಸೀರಿಯಲ್ ಪ್ರಸಾರವಾಯಿತು. ಅಷ್ಟೇ ವೇಗದಲ್ಲಿ ಜನಪ್ರಿಯತೆಗಳಿಸಿತು. ಅಂದಿನಿಂದ ರೋವನ್ ಅಟ್ಕಿನ್ಸನ್ ಹೆಸರಿಗಿಂತ ಹೆಚ್ಚಾಗಿ ಎಲ್ಲರೂ ಮಿಸ್ಟರ್ ಬೀನ್ ಎಂದೇ ಕರೆಯುತ್ತಾರೆ.  ಮಿಸ್ಟರ್ ಬೀನ್ ಕಾಮಿಡಿ ಸೀರಿಯಲ್ 5 ವರ್ಷ ಟಿವಿಯಲ್ಲಿ ಪ್ರಸಾರವಾಗಿತ್ತು. ಬರೋಬ್ಬರಿ 245 ದೇಶಗಳಿಗೆ ಕಾಮಿಡಿ ಸೀರಿಯಲ್ ಪ್ರಸಾರ ಮಾಡಲು ಹಕ್ಕು ಮಾರಾಟ ಮಾಡಲಾಗಿತ್ತು. 
 

Follow Us:
Download App:
  • android
  • ios