ಮಿಸ್ಟರ್ ಬೀನ್ ಪಾತ್ರ ಮಾಡಿದ ರೋವನ್ ಅಟ್ಕಿನ್‌ಸನ್‌ನ ರಸಿಕ ಜೀವನದ ವಿಷಯಗಳು ನಿಮಗೆ ಗೊತ್ತೇ?
ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ? ಈತನ ಪಾತ್ರ ಮಾಡುವವನು ರೋವನ್ ಅಟ್ಕಿನ್‌ಸನ್ ಎಂಬ ಇಂಗ್ಲಿಷ್ ನಟ. ಈತನ ಬಗ್ಗೆ ನೀವು ತಿಳಿಯದೆ ಇದ್ದಿರಬಹುದಾದ ಹಲವು ವಿಚಾರಗಳು ಇವೆ.
ಮೊದಲನೆಯದು, ಈತನ ಬರ್ತ್‌ಡೇ ಇತ್ತೀಚೆಗೆ ಇತ್ತು. ಅದು ಈತನ ೬೬ನೇ ವರ್ಷದ ಜನ್ಮದಿನ. ಈತ ಬರ್ತ್‌ಡೇ ದಿನ ಒಂದು ಘೋಷಣೆ ಮಾಡಿದ: ನಾನಿನ್ನು ಒಂದು ವರ್ಷ ನಟನೆಗೆ ರಜೆ ತಗೊಳ್ತೀನಿ. ರಜೆಗೆ ಕಾರಣ? ಮಗುವನ್ನು ನೋಡಿಕೊಳ್ಲುವುದು ಅಥವಾ ಪಿತೃತ್ವ ರಜೆ. ಮಗು ಅಂದರೆ ಮೊಮ್ಮಗುವೇ? ಅಲ್ಲ! ಅವನದೇ ಸ್ವಂತ ಮಗು! ಆ ಮಗುವಿಗೀಗ ಎರಡು ವರ್ಷ. ಅಂದರೆ, ೬೪ನೇ ವರ್ಷದಲ್ಲಿ ಒಂದು ಮಗುವಿಗೆ ತಂದೆಯಾದ ಭೂಪತಿರಂಗ, ಸೊಗಸುಗಾರ, ರಸಿಕ ಆಸಾಮಿ ಈತ. ಅದೂ ಮೂರನೇ ಮಗು.
ಎರಡನೇ ಹೆಂಡತಿಯಲ್ಲಿ ಜನಿಸಿದ ಮಗುವಿದು. ಮೊದಲ ಹೆಂಡತಿಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಮೊದಲ ಹೆಂಡತಿಯಲ್ಲಿ ಜನಿಸಿದ ಮೊದಲ ಮಗಳು, ರೋವನ್‌ನಷ್ಟೇ ಎತ್ತರಕ್ಕೆ ಬೆಳೆದು ನಿಂತಿದ್ದು, ಆತನ ಜತೆ ಹಲವು ಶೋಗಳಲ್ಲಿ ನಟಿಸಿಯೂ ಇದ್ದಾಳೆ.
62ನೇ ವರ್ಷದಲ್ಲಿ ಈತ ಎರಡನೇ ಮದುವೆಯಾದ. ಅಂದ ಹಾಗೆ, ಈತನ ಎರಡನೇ ಹೆಂಡತಿಯ ಪ್ರಾಯ ಇವರು ಮದುವೆಯಾಗುವಾಗ ಇವನ ಅರ್ಧದಷ್ಟಿತ್ತು. ಅಂದರೆ ಆಗ ರೋವನ್‌ಗೆ 62 ವರ್ಷ. ಆತನ ಎರಡನೇ ಹೆಂಡತಿಗೆ 31 ವರ್ಷ ಪ್ರಾಯ.
ಅಂದ ಹಾಗೆ, ನಿಮಗೆ ಗೊತ್ತಿರಲಾರದು: ರೋವನ್ ಅಟ್ಕಿನ್‌ಸನ್‌ಗೂ ಭಾರತಕ್ಕೂ ಒಂದು ಸಂಬಂಧ ಇದೆ. ಅದೇನು ಅಂದರೆ, ರೋವನ್‌ನ ಮೊದಲ ಹೆಂಡತಿ ಭಾರತದವಳು. ಆಕೆಯ ಹೆಸರು ಸುನೇತ್ರಾ ಶಾಸ್ತ್ರಿ. ಈಕೆ ಮೇಕಪ್ ಆರ್ಟಿಸ್ಟ್. 1990ರಲ್ಲಿ ಇವರು ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳು- ಲಿಲ್ಲಿ ಮತ್ತು ಬೆನ್. ಬಿಬಿಸಿಯಲ್ಲಿ ರೋವನ್‌ನ ಮಿ.ಬೀನ್ ಶೋ ಪ್ರಸಾರ ಆಗುತ್ತಿದ್ದಾಗ. ಆತನಿನ್ನೂ ಪ್ರಸಿದ್ಧಿಯ ಮೆಟ್ಟಿಲು ಹತ್ತುವುದಕ್ಕೂ ಮೊದಲೇ ಆಕೆ ಅವನಿಗೆ ಮೇಕಪ್ ಆರ್ಟಿಸ್ಟ್ ಆಗಿದ್ದಳು. ಇಬ್ಬರಿಗೂ ಪರಿಚಯ ಬೆಳೆದು ಪ್ರೇಮಕ್ಕೆ ತಿರುಗಿತು. ಇಬ್ಬರೂ ಮದುವೆಯಾದರು. ಇವರದು 25 ವರ್ಷಗಳ ದಾಂಪತ್ಯ. ಇವರಿಬ್ಬರೂ ಆಗಾಗ ಭಾರತಕ್ಕೂ ಬಂದದ್ದು ಉಂಟು. ಇಲ್ಲಿನ ಅಡುಗೆ, ಉಡುಗೆ, ಆಚಾರಗಳ ಬಗ್ಗೆ ರೋವನ್‌ಗೆ ಸಾಕಷ್ಟು ಮಾಹಿತಿಯಿದೆ. ಕೆಲವು ಇಲ್ಲಿನ ತಿಂಡಿಗಳು ಅವನಿಗೆ ಇಷ್ಟ.
ಪತಿ ಜೊತೆಯ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡ ಪ್ರೀತಿ ಜಿಂಟಾ! ...
2014ರಲ್ಲಿ ಇವರ ನಡುವೆ ವಿರಸ ಉಂಟಾಯಿತು. ಯಾಕೆ ಉಂಟಾಯಿತೋ ತಿಳಿಯದು. ಆದರೂ, ಈಗ ರೋವನ್ ಮದುವೆಯಾಗಿರುವ ಲೂಯಿಸ್ ಫೋರ್ಡ್ ಎಂಬಾಕೆಯ ಕಾರಣದಿಂದಲೇ ಅನ್ನುವವರು ಇದ್ದಾರೆ. ಈಕೆಗೂ ಈತನಿಗೂ 2013ರ ನಂತರದ ಪರಿಚಯ. ಇವರಿಗೂ ಒಂದು ಶೋದಲ್ಲಿ ಪರಿಚಯ ಬೆಳೆದಿತ್ತು. ಆಕೆಯ ಹಿಂದೆ ಬಿದ್ದ ರೋವನ್, ಮಡದಿ ಸುನೇತ್ರಾಳನ್ನು ಮರೆತಿದ್ದ. ಇದರಿಂದ ಸುನೇತ್ರಾಗೆ ತುಂಬಾ ಬೇಸರವಾಗಿತ್ತು. ಡೈವೋರ್ಸ್‌ಗೆ ನೀಡಿದ ಕಾರಣದಲ್ಲಿ 'ರೋವನ್‌ನ ಸಕಾರಣವಿಲ್ಲದ ನಡತೆ' ಡೈವೋರ್ಸ್‌ಗೆ ಕಾರಣ ಎಂದು ಸುನೇತ್ರಾ ಹೇಳಿದ್ದಾಳೆ. ಅದು ಯಾವುದು ಎಂದು ಸ್ಪಷ್ಟವಿಲ್ಲ. ಹಾಗೆಯೇ 62ರ ರೋವನ್‌ನನ್ನು 31ರ ಲೂಯಿಸ್ ಮೆಚ್ಚಿದ್ದು ಹೇಗೆ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಆದರೆ ರೋವನ್, ಮಿ.ಬೀನ್ ಕಾಮಿಡಿ ಮತ್ತಿತರ ಶೋಗಳಿಂದ ಮೂರು ತಲೆಮಾರು ಕುಂತುಣ್ಣವಷ್ಟು ಆಸ್ತಿ ಮಾಡಿರುವುದಂತೂ ನಿಜ. ಒಂದು ಲೆಕ್ಕದ ಪ್ರಕಾರ ಅದು ನೂರು ದಶಲಕ್ಷ ಡಾಲರ್.
ಅಷ್ಟೊಂದು ಜನರ ಮಧ್ಯೆ ಹಾಟ್ ಆಗಿ ನಟಿಸೋದೇಗೆ..? ಸನ್ನಿ ಹೇಳಿದ್ದಿಷ್ಟು ...
ಅಂತೂ ಇಂತೂ ಇನ್ನೊಂದು ಮಗು ಮಾಡಿದ ರೋವನ್, ಆಕೆಗೆ ಇಸ್ಲಾ ಮೇ ಎಂದು ಹೆಸರು ಇಟ್ಟಿದ್ದಾನೆ. ಆಕೆಯನ್ನು 'ಬೇಬಿ ಬೀನ್' ಕರೆಯುತ್ತಾನಂತೆ. ಸದ್ಯ ಆಕೆಯ ಜೊತೆಯಲ್ಲಿ ಆಡುವುದು, ಪಾಲನೆ ಪೋಷಣೆಯತ್ತ ಅವನ ಹೆಚ್ಚಿನ ಗಮನ. ಹೀಗಾಗಿ ನಟನೆಗೆ ಬ್ರೇಕ್. ಹೆಂಡತಿ ಲೂಯಿಸ್, ಮಗುವನ್ನು ರೋವನ್‌ನ ಕೈಗಿತ್ತು ನಟನೆ ಕೆರಿಯರ್ ಅನ್ನು ಇಂಪ್ರೂವ್ ಮಾಡಿಕೊಳ್ಳಲು ಮುಂದಾಗಿದ್ದಾಳೆ.
ಮುಂಬೈನಲ್ಲಿ ಹೊಸ ಮನೆ ತಗೊಂಡ ನಟಿ ಜಾಕಿ..! ಬೆಲೆ ಎಷ್ಟು ಗೊತ್ತಾ..? ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 22, 2021, 5:27 PM IST