ಜಾಕ್ವೆಲಿನ್, ನೋರಾ ಫತೇಹಿ, ಸುಕೇಶ್ ತ್ರಿಕೋನ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!
ಸುಕೇಶ್ ಚಂದ್ರಶೇಖರ್ನಿಂದ ದುಬಾರಿ ಗಿಫ್ಟ್ ಪಡೆದು ಪರದಾಡುತ್ತಿರುವ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಕುರಿತು ಸುಕೇಶ್ ಕೋರ್ಟ್ಗೆ ಹೇಳಿದ್ದೇನು?
200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗೆ ಸಿಲುಕಿ ಒದ್ದಾಡುತ್ತಿದ್ದಾರೆ ಇಬ್ಬರು ನಟಿಮಣಿಗಳಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ (Nora Fatehi). ಕೋಟಿ ಕೋಟಿಗಟ್ಟಲೆ ಬೆಲೆ ಬಾಳುವ ಉಡುಗೊರೆಗಳನ್ನು ಸುಕೇಶ್ನಿಂದ ಪಡೆದು ಆತ ಹೇಳಿದಂತೆಲ್ಲಾ ಕೇಳುತ್ತಾ ಈಗ ಪೇಚಿಗೆ ಸಿಲುಕಿರುವ ಈ ನಟಿಯರ ಕುರಿತು ಸುಕೇಶ್ ಈಗ ಸತ್ಯವೊಂದನ್ನು ಹೊರಗೆಡವಿದ್ದಾರೆ. ಇಬ್ಬರ ಜೊತೆಯೂ ಡೇಟಿಂಗ್ ಮಾಡುತ್ತಾ, ಕೋಟಿಗಟ್ಟೆಲೆ ಮೌಲ್ಯದ ಉಡುಗೊರೆ ಕೊಡುತ್ತಾ ಇಬ್ಬರನ್ನೂ ಬಳಸಿಕೊಂಡಿದ್ದ ಸುಕೇಶ್ ಈಗ ಒಂದೊಂದಾಗಿ ನಟಿಯರ ನಡುವಿನ ರಹಸ್ಯವನ್ನು ಬಿಚ್ಚಿಡುತ್ತಿದ್ದಾರೆ.
ಈಗ ಸುಕೇಶ್ ಪೊಲೀಸರಿಗೆ ಹೇಳಿದ್ದೇನೆಂದರೆ, ನಟಿ ನೋರಾ ಫತೇಹಿ ಅವರು ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez ) ಬಗ್ಗೆ ಯಾವಾಗಲೂ ಅಸೂಯೆ ಹೊಂದಿದ್ದರು ಎಂಬುದಾಗಿ. ಇಷ್ಟಕ್ಕೂ ಆತ ಹೀಗೆ ಹೇಳಲು ಕಾರಣವೇನೆಂದರೆ ಖುದ್ದು ನೋರಾ ಸುಕೇಶ್ ವಿರುದ್ಧ ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದರು. ನನ್ನ ಗೆಳತಿಯಾದರೆ ಬಂಗಲೆ ಹಾಗೂ ಕಾರಿನ ಆಸೆ ತೋರಿಸಿದ್ದ ಸುಕೇಶ್. ಐಷಾರಾಮಿ ಜೀವನಶೈಲಿಯನ್ನು ನೀಡುವುದಾಗಿ ಭರವಸೆ ನೀಡಿದ್ದ, ನಾನು ಮೋಸ ಹೋದೆ. ನನ್ನದು ಏನೂ ತಪ್ಪಿಲ್ಲ ಎಂದಿದ್ದರು. 'ಸುಕೇಶ್ ಗೆಳತಿಯಾಗಲು ಅನೇಕ ನಟಿಯರು ಸಾಯುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಸುಕೇಶ್ ಜೊತೆ ಸಂಬಂಧ ಹೊಂದಲು ಬಯಸಿದ್ದಾರೆ ಮತ್ತು ಸುಕೇಶ್ ಒಪ್ಪಿಗೆಗೆ ಕಾಯುತ್ತಿದ್ದಾರೆ. ಆದರೆ ಸುಕೇಶನಿಗೆ ನಾನೇ ಬೇಕು. ಇದನ್ನು ಖುದ್ದು ಆತ ನನ್ನ ಕಸಿನ್ ಬಳಿ ಹೇಳಿಕೊಂಡಿದ್ದ. ಅವನೇ ನನ್ನ ಹಿಂದೆ ಬಿದ್ದಿದ್ದ' ಎಂದು ನೋರಾ ಹೇಳಿದ್ದರು.ಇದಕ್ಕೆ ವಿರುದ್ಧವಾಗಿ ಈಗ ಆಕೆಯ ವಿರುದ್ಧವೇ ಸುಕೇಶ್ ಭಾರಿ ಆರೋಪ ಮಾಡಿದ್ದಾರೆ.
ಮಹೇಶ್ ಬಾಬುಗಾಗಿ ನಟನೆ ಬಿಟ್ಟೆ : ಮಾಜಿ ಮಿಸ್ ಇಂಡಿಯಾ, ನಟಿ ನಮ್ರತಾ ಶಿರೋಡ್ಕರ್ ಮನದಾಳದ ಮಾತು...
ಸುಕೇಶ್ ತನ್ನ ವಕೀಲರಾದ ಅನಂತ್ ಮಲಿಕ್ ಮತ್ತು ಎಕೆ ಸಿಂಗ್ ಮೂಲಕ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸುಕೇಶ್ (Sukesh Chandrashekhar ), ನೋರಾ ಯಾವಾಗಲೂ ಜಾಕ್ವೆಲಿನ್ನಿಂದ ದೂರ ಇರುವಂತೆ ನನಗೆ ಬ್ರೈನ್ ವಾಶ್ ಮಾಡುತ್ತಿದ್ದಳು. ಜಾಕ್ವೆಲಿನ್ ಅನ್ನು ತೊರೆದು ತನ್ನೊಂದಿಗೆ ಡೇಟಿಂಗ್ ಮಾಡು ಎಂದು ಪೀಡಿಸುತ್ತಿದ್ದಳು. ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಳು ಮತ್ತು ನಾನು ಕರೆಗೆ ಉತ್ತರಿಸದಿದ್ದರೆ ಅವಳು ನನಗೆ ಕರೆ ಮಾಡುತ್ತಲೇ ಇರುತ್ತಿದ್ದಳು. ನಾನು ಮತ್ತು ಜಾಕ್ವೆಲಿನ್ ಗಂಭೀರ ಸಂಬಂಧದಲ್ಲಿದ್ದುದರಿಂದ, ನಾನು ನೋರಾಳನ್ನು ತಪ್ಪಿಸಲು ಪ್ರಾರಂಭಿಸಿದೆ, ಆದರೆ ಅವಳು ಕರೆ ಮಾಡುವ ಮೂಲಕ ನನ್ನನ್ನು ಕೆರಳಿಸುತ್ತಿದ್ದಳು ಮತ್ತು ನಾನು ಸಂಗೀತ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಲು ಬಾಬಿಗೆ (ನೋರಾ ಸಂಬಂಧಿ) ಸಹಾಯ ಮಾಡುವಂತೆ ಕೇಳಿಕೊಂಡಳು. ಅವಳು ಬಯಸಿದ ಹರ್ಮ್ಸ್ ಬ್ಯಾಗ್‌ಗಳು (Herms Bags) ಮತ್ತು ಆಭರಣಗಳ ಅನೇಕ ಚಿತ್ರಗಳನ್ನು ಅವಳು ನನಗೆ ಕಳುಹಿಸುತ್ತಿದ್ದಳು, ಅದನ್ನು ನಾನು ಅವಳಿಗೆ ನೀಡುವ ಮೂಲಕ ಅವಳಿಂದ ದೂರ ಹೋಗಲು ಬಯಸಿದೆ' ಎಂದಿರುವ ಸುಕೇಶ್, ಅವಳಲ್ಲಿರುವ ಬ್ಯಾಗ್‌ಗಳನ್ನು ಒಮ್ಮೆ ನೋಡಿ. ಎಲ್ಲವೂ 2 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ್ದಾಗಿವೆ ಎಂದಿದ್ದಾರೆ.
ಅದೇ ಇನ್ನೊಂದೆಡೆ ಸುಕೇಶ್ನಿಂದ ಐಷಾರಾಮಿ ಉಡುಗೊರೆಗಳನ್ನು (gifts) ಪಡೆದುಕೊಂಡಿರುವ ಜಾಕ್ವೆಲಿನ್ ಕೋರ್ಟ್ನಲ್ಲಿ, 'ಸುಕೇಶ್ ನನ್ನ ದಾರಿ ತಪ್ಪಿಸಿದ, ನನ್ನ ಜೀವನ, ವೃತ್ತಿ, ಆದಾಯವನ್ನು ಹಾಳು ಮಾಡಿದ. ಆತ ಕ್ರಿಮಿನಲ್ ಬ್ಯಾಕ್‌ಗ್ರೌಂಡರ್ ನನಗೆ ಆಮೇಲೆ ಗೊತ್ತಾಯ್ತು. ಪಿಂಕಿ ಇರಾನಿ (Pinky Irani) ಅನ್ನುವವಳಿಗೆ ಚಂದ್ರಶೇಖರ್ ಆಕ್ಟಿವಿಟಿ, ಬ್ಯಾಕ್‌ಗ್ರೌಂಡ್ ಬಗ್ಗೆ ಗೊತ್ತಿದ್ದರೂ ಅವಳು ನನಗೆ ಹೇಳಲೇ ಇಲ್ಲ' ಎಂದು ಹೇಳಿದ್ದಾರೆ. ಇದೇ ವೇಳೆ, ಈ ಇಬ್ಬರು ನಟಿಯರೂ, ಸುಕೇಶ್ ಚಂದ್ರಶೇಖರ್ ಅವರಿಂದ ಐಷಾರಾಮಿ ಕಾರುಗಳು ಮತ್ತು ಇತರೆ ದುಬಾರಿ ಉಡುಗೊರೆಗಳನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ತಿಳಿಸಿದೆ.
ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ