NiKhil Kumarswamy: ಬರ್ತ್ಡೇ ದಿನವೇ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ನಿಖಿಲ್ ಕುಮಾರಸ್ವಾಮಿ
ನಟನೆ ಹಾಗೂ ರಾಜಕಾರಣದಲ್ಲಿ ಹೆಸರು ಮಾಡಿರುವ ನಟ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ, ಏನಿದರ ಮಾಹಿತಿ?
ನಟನೆ, ರಾಜಕಾರಣ ಎರಡರಲ್ಲಿಯೂ ಖ್ಯಾತಿ ಗಳಿಸಿರುವ ನಿಖಿಲ್ ಕುಮಾರಸ್ವಾಮಿ (NiKhil kumarswamy) ಅವರಿಗೆ ಜನುಮದಿನದ ಸಂಭ್ರಮ ಇಂದು (ಜ.22). ತಮ್ಮ ಹೋಮ್ ಬ್ಯಾನರ್ನಲ್ಲಿ ನಿರ್ಮಾಣಗೊಂಡ `ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹೆಸರು ಪಡೆದಿರುವುದೂ ಅಲ್ಲದೇ, ಜೆಡಿಎಸ್ ಪಕ್ಷದ ಯುವ ಘಟಕದ ನಾಯಕಾರಾಗಿ ಕೂಡ ಪ್ರಸಿದ್ಧಿ ಪಡೆದಿರುವ ನಿಖಿಲ್ ಅವರು 33ನೇ ಹುಟ್ಟುಹಬ್ಬದ (Birthday) ಖುಷಿಯಲ್ಲಿದ್ದಾರೆ. ನಿಖಿಲ್ ಅವರಿಗೆ ಬೆಳಗ್ಗೆಯಿಂದಲೂ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಹುಟ್ಟುಹಬ್ಬವನ್ನು ಪತ್ನಿ ರೇವತಿ ಮತ್ತು ಮಗುವಿನ ಜೊತೆ ಸಂತಸದಿಂದ ಕಳೆದಯುತ್ತಿರುವ ನಿಖಿಲ್, ಫ್ಯಾಮಿಲಿಯ (Family)ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನಿಖಿಲ್ ನೀಡಿದ್ದಾರೆ. ಅದೇನೆಂದರೆ ಬರ್ತ್ಡೇ ದಿನವೇ ಹೊಸ ಸಿನಿಮಾ ಘೋಷಿಸಿದ್ದಾರೆ ನಿಖಿಲ್. ಈ ಕುರಿತು ಖುದ್ದು, ಲಹರಿ ಆಡಿಯೋ ಕಂಪೆನಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಭಾರತದಲ್ಲಿ ಖ್ಯಾತಿವೆತ್ತ ಆಡಿಯೋ ಕಂಪೆನಿಗಳಲ್ಲಿ ಒಂದಾಗಿರುವ ಲಹರಿ ಸಂಸ್ಥೆ ನಿಖಿಲ್ ಕುಮಾರಸ್ವಾಮಿ ಅವರ ಈ ಹೊಸ ಸಿನಿಮಾವವನ್ನು ನಿರ್ಮಾಣ ಮಾಡಲಿದೆ. ಈ ಕುರಿತು ಟ್ವಿಟರ್ನಲ್ಲಿ ಲಹರಿ (Lahari)ಸಂಪೂರ್ಣವಾಗಿ ವಿವರಣೆ ನಿಡಿದೆ.
ಮಹೇಶ್ ಬಾಬುಗಾಗಿ ನಟನೆ ಬಿಟ್ಟೆ : ಮಾಜಿ ಮಿಸ್ ಇಂಡಿಯಾ, ನಟಿ ನಮ್ರತಾ ಶಿರೋಡ್ಕರ್ ಮನದಾಳದ ಮಾತು...
2010 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೈಲಾರಿ ಚಿತ್ರದಿಂದ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 2012 ರಲ್ಲಿ ಶಿವರಾಜಕುಮಾರ್ (Shivarajkumar) ಅಭಿನಯದ `ಶಿವ, ಮತ್ತು 2018 ರಲ್ಲಿ `ಟಗರು' ಚಿತ್ರವನ್ನು ನಿರ್ಮಿಸಿದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಈ ಹೊಸ ಸಿನಿಮಾವವನ್ನು ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಲಾಗಿದ್ದು, ಹೊಸ ಪ್ರತಿಭೆ ಮನೋಹರ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಸಹ ನಿರ್ಮಾಪಕರಾಗಿ ನವೀನ್ ಮನೋಹರನ್, ಸುನಿಲ್ ಗೌಡ, ಚಂದ್ರು ಮನೋಹರನ್ ಹಣ ಹಾಕಿದ್ದಾರೆ. ಈ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಜಿ. ತುಳಸಿ ರಾಂ (ಲಹರಿ ವೇಲು), ಜಿ ರಮೇಶ್, ಜಿ ಆನಂದ್, ಚಂದ್ರು ಮನೋಹರನ್, ನಾಗೇಂದ್ರ ಕೆಲಸ ಮಾಡಲಿದ್ದಾರೆ. ಲಹರಿ ಸಂಸ್ಥೆ ಮತ್ತು ನಿರ್ಮಾಪಕ ಕೆ ಪಿ ಶ್ರೀಕಾಂತ್ ಜೊತೆಯಾಗಿ ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ 'ಯುಐ' (UI) ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರಕ್ಕೂ ಜೊತೆಯಾಗಿರುವುದು ಕುತೂಹಲ ಮೂಡಿಸಿದೆ.
ಇದಾಗಲೇ ಫಸ್ಟ್ ಲುಕ್ ರಿಲೀಸ್ (First look released) ಆಗಿದೆ. ಈ ಚಿತ್ರದ ಬಗ್ಗೆ ವಿಸ್ತಾರವಾಗಿ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರದ ಹೆಸರು, ಯಾರೆಲ್ಲಾ ನಟಿಸಲಿದ್ದಾರೆ? ಏನಿದರ ಕಥೆ? ಯಾವಾಗ ರಿಲೀಸ್ ಎಂಬಿತ್ಯಾದಿ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಈಗ ಟ್ವಿಟರ್ನಲ್ಲಿ ಶೇರ್ ಮಾಡಲಾದ ಫಸ್ಟ್ ಲುಕ್ ಗಮನಿಸಿದರೆ, ಇದೊಂದು ಕ್ರೀಡೆಗೆ ಸಂಬಂಧಿಸಿದ ಸಿನಿಮಾ ಎಂದು ಕಾಣಿಸುತ್ತದೆ. ಏಕೆಂದರೆ ಫಸ್ಟ್ ಲುಕ್ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹಳದಿ ಬಣ್ಣದ ಷರ್ಟ್ ಧರಿಸಿದ್ದು, ಅದರ ಹಿಂದುಗಡೆ ನಿಖಿಲ್ ಎಂದು ಬರೆಯಲಾಗಿದೆ. ಅದರ ಕೆಳಗೆ ಕ್ರೀಡಾಪಟುಗಳಿಗೆ ನೀಡುವಂತೆ 07 ಎಂಬ ನಂಬರ್ ನೀಡಲಾಗಿದೆ. ಈ ಲುಕ್ ನೋಡಿದರೆ ಇದು ಸ್ಫೋರ್ಟ್ಸ್ಗೆ ಸಂಬಂಧಿಸಿದ್ದು ಎಂದು ಅನ್ನಿಸದೇ ಇರಲಾರದು.
ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ
ಅಂದಹಾಗೆ ನಿಖಿಲ್ ಅವರು 'ಜಾಗ್ವಾರ್' ಮಾತ್ರವಲ್ಲದೇ ಅವರ ಹೋಮ್ ಬ್ಯಾನರ್‌ನಲ್ಲೇ (Home banner) ಮೂಡಿಬಂದ ಇನ್ನೊಂದು ಚಿತ್ರ 'ಸೀತಾರಾಮ ಕಲ್ಯಾಣ'ದಲ್ಲಿಯೂ ಅಭಿನಯಿಸಿದ್ದಾರೆ. ಹೋಮ್ ಬ್ಯಾನರ್ ಹೊರತುಪಡಿಸಿದರೆ ಮುನಿರತ್ನ ಅವರ ನಿರ್ಮಾಣದ 'ಕುರುಕ್ಷೇತ್ರ' ಹಾಗೂ ಲಹರಿ ಸಂಸ್ಥೆ ನಿರ್ಮಾಣದ 'ರೈಡರ್' ಸಿನಿಮಾದಲ್ಲಿ ನಟಿಸಿದ್ದರು. 'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದರು. ಜಾಗ್ವಾರ್‌ನಲ್ಲಿನ ಅಭಿನಯಕ್ಕಾಗಿ ಸಿಮಾ (ಎಸ್‌ಐಐಎಂಎ) ಅತ್ಯುತ್ತಮ ಹೊಸ ನಟ (ಪುರುಷ) ಕನ್ನಡ ವಿಭಾಗದ ಪ್ರಶಸ್ತಿ, ಅತ್ಯುತ್ತಮ ಹೊಸ ನಟ (ಪುರುಷ) ವಿಭಾಗದ ಟಿಎಸ್‌ಆರ್ ಫಿಲ್ಮ್ ಅವಾರ್ಡ್ ತೆಲುಗು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಸಿಮಾ ಅತ್ಯುತ್ತಮ ಹೊಸ ನಟ (ಪುರುಷ) ತೆಲುಗು ವಿಭಾಗಕ್ಕೆ ನಾಮಿನೇಟ್ ಆಗಿದ್ದರು. ಇದಲ್ಲದೇ ರಾಜಕಾರಣದಲ್ಲಿಯೂ ಅಪ್ಪ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಖಿಲ್ ಕೈಜೋಡಿಸಿದ್ದಾರೆ. ಜೆಡಿಎಸ್ ಪಕ್ಷದ ಯುವ ಘಟಕದ ನಾಯಕಾರಾಗಿ ಕೂಡ ಗುರುತಿಸಿಕೊಂಡಿದ್ದಾರೆ. 2019 ರಲ್ಲಿ ಜರುಗಿದ ಲೋಕಸಭಾ ಚುಣಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು.