ಲಿಪ್ ಕಿಸ್ ಮಾಡಿ ವಿಡಿಯೋ ಹಂಚಿಕೊಂಡ ಮಿಲಿಂದ್ ಸೋಮನ್: ಇದಕ್ಕಿಂತ ಇನ್ನೇನು ಬೇಕು ಎಂದ ನಟ
ಫಿಟ್ನೆಸ್ ಫ್ರೀಕ್ ಮಿಲಿಂದ್ ಸೋಮನ್ ಮತ್ತು ಅಂಕಿತಾ ದಂಪತಿ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. 56 ವರ್ಷದ ಮಿಲಿಂದ್ ಸೋಮನ್ 31 ವರ್ಷದ ಪತ್ನಿ ಅಂಕಿತಾ ಜೊತೆ ಸದ್ಯ ಲಖಾಡ್‌ನಲ್ಲಿದ್ದಾರೆ. ಅಲ್ಲಿಂದ ಇಬ್ಬರು ಕಿಸ್ಸಿಂಗ್ ವಿಡಿಯೋ ಶೇರ್ ಮಾಡಿದ್ದಾರೆ.
ಫಿಟ್ನೆಸ್ ಫ್ರೀಕ್ ಮಿಲಿಂದ್ ಸೋಮನ್ ಮತ್ತು ಅಂಕಿತಾ ದಂಪತಿ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 56 ವರ್ಷದ ಮಿಲಿಂದ್ ಸೋಮನ್ 31 ವರ್ಷದ ಪತ್ನಿ ಅಂಕಿತಾ ಜೊತೆ ಸದ್ಯ ಲಖಾಡ್‌ನಲ್ಲಿದ್ದಾರೆ. ಮೈ ಕೊರೆಯೂ ಚಳಿಯಲ್ಲಿ ಕಲ್ಲಂಗಡಿ ತಿನ್ನುತ್ತಾ ಪತ್ನಿಗೆ ಲಿಪ್ ಕಿಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ಕೂಡ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ. ಆಗಾಗ ಮ್ಯಾರಥಾನ್, ಯೋಗ, ವರ್ಕೌಟ್ ಅಂತ ಸದಾ ಬ್ಯುಸಿಯಾಗಿರುತ್ತಾರೆ.
ಒಂದಲ್ಲೊಂದು ವಿಚಾರಗಳ ಮೂಲಕ ಮಿಲಿಂದ್ ಸೋಮನ್ ಅಭಿಮಾನಿಗಳ ತನ್ನತ್ತ ಸೆಳೆಯುವಂತೆ ಮಾಡುತ್ತಾರೆ. ಸದ್ಯ ಲಡಾಖ್ ನಲ್ಲಿರುವ ಈ ಜೋಡಿ ಸುಂದರ ಪ್ರಕೃತಿಯ ನಡುವೆ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ.
ಕೈಯಲ್ಲಿ ಕಲ್ಲಂಗಡಿ ಹಣ್ಣಿನ ತಟ್ಟೆ ಹಿಡಿದು ಪತ್ನಿಗೆ ಕಿಸ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ ರೊಮ್ಯಾಂಟಿಕ್ ಕ್ಯಾಪ್ಷನ್ ನೀಡಿದ್ದಾರೆ. 'ಲಾಡಾಖ್‌ನಲ್ಲಿ ನೀಲಿ ಆಕಾಶ. ತಾಜಾ ಕಲ್ಲಂಗಡಿ ಹಣ್ಣು, ಸಿಹಿ ಮುತ್ತು ಇದಕ್ಕಿಂತ ಉತ್ತಮವಾಗಿರುವುದು ಯಾವುದು?' ಎಂದು ಬರೆದುಕೊಂಡಿದ್ದಾರೆ. ಲವ್, ಲೈಫ್ ಹ್ಯಾಪಿನೆಸ್ ಎಂದು ಬಪೆದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
ಮಿಲಿಂದ್ ವಿಡಿಯೋಗೆ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ಅಭಿಮಾನಿಗಳು ಕ್ಯೂಟ್ ಜೋಡಿ ಎಂದು ಹೇಳುತ್ತಿದ್ದಾರೆ. ಇನ್ನು ಕೆವಲರು ಬೆಸ್ಟ್ ಜೋಡಿ, ಇಬ್ಬರ ಕೆಮಿಸ್ಟ್ರಿ ಸೂಪರ್, ಮುದ್ದಾದ ಜೋಡಿ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಹಾರ್ಟ್ ಇಮೋಜಿ ಇರಿಸಿ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಮಿಲಿಂದ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಿಲಿಂದ್ ಫಟ್ನೆಸ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿರುತ್ತಾರೆ.
55ರ ನಟನಿಗೆ 29ರ ಪತ್ನಿ: ನಿನ್ನ ತೋಳಲ್ಲೆ ಸುಖವಿದೆ ಎಂದ ಮಿಲಿಂದ್
ಸದ್ಯ ಇಬ್ಬರು ಕಿಸ್ ಮಾಡುತ್ತಿರುವ ಜಾಗದಲ್ಲಿಯೇ ಅಂಕಿತಾ ಮೊದಲು ಯೋಗ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಪ್ರತಿದಿನ ತಪ್ಪದೆ ಯೋಗ, ವರ್ಕೌಟ್ ಮಾಡುವ ಈ ಜೋಡಿ ಪ್ರವಾಸಕ್ಕೆ ಹೋದರು ಸಹ ಯೋಗ ಮಾಡುವುದನ್ನು ತಪ್ಪಿಸುವುದಿಲ್ಲ.
ಗೋವಾ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ್ದ ನಟನಿಗೆ ಕೊರೋನಾ ಪಾಸಿಟಿವ್
ಅಂದಹಾಗೆ ಅಂಕಿತಾ ಕೊನ್ವರ್ ಮತ್ತು ಮಿಲಿಂದ್ ಸೋಮನ್ ಇಬ್ಬರು ಏಪ್ರಿಲ್ 2018ರಲ್ಲಿ ವಿವಾಹವಾದರು. ಇಬ್ಬರೂ ಮದುವೆಗೂ ಮೊದಲು ಉತ್ತಮ ಸ್ನೇಹಿತರಾಗಿದ್ದರು. ಇಬ್ಬರ ಮದುವೆಗೆ ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ತನಗಿಂತ ತುಂಬಾ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾದ ಮಿಲಿಂದ್ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಆದರೆ ಈ ಬಗ್ಗೆ ಮಿಲಿಂದ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತನ್ನ ಪತ್ನಿ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆಗಾಗ ಪ್ರಸಾರ ಎಂಜಾಯ್ ಮಾಡುತ್ತಿರುತ್ತಾರೆ.