55ರ ನಟನಿಗೆ 29ರ ಪತ್ನಿ: ನಿನ್ನ ತೋಳಲ್ಲೆ ಸುಖವಿದೆ ಎಂದ ಮಿಲಿಂದ್
First Published Feb 28, 2021, 10:53 AM IST
ಬಾಲಿವುಡ್‌ನಲ್ಲಿ ಅತ್ಯಂತ ಹೆಚ್ಚು ವಯಸ್ಸಿನ ಅಂತರವಿದ್ದು ಮದುವೆಯಾದ ಜೋಡಿಗಳಲ್ಲಿ ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೂಡಾ ಇದ್ದಾರೆ. ಇವರಿಬ್ಬರ ಏಜ್ ಗ್ಯಾಪ್ 26 ವರ್ಷ.

ಮಿಲಿಂದ್ ಸೋಮನಗ ಮತ್ತು ಅಂಕಿತಾ ಕೊನ್ವಾರ್ 7 ವರ್ಷದ ಹಿಂದೆ ಫೆಬ್ರವರಿ 26ರಂದು ಮೊದಲ ಬಾರಿ ಭೇಟಿಯಾಗಿದ್ದರು.

ಈ ಜೋಡಿ 7 ವರ್ಷ ಜೊತೆಯಾಗಿರೋದನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.

ಜಗತ್ತೆಲ್ಲವನ್ನೂ ಸುತ್ತಾಡಿ, ಪರ್ವತಗಳನ್ನು ಹತ್ತಿ, ಸಮುದ್ರದಾಳವನ್ನು ನೋಡಿ, ದೇಶಗಳಲ್ಲೆಲ್ಲ ಓಡಿ, ಅರಣ್ಯವನ್ನು ಸುತ್ತಿ, ಬಂದರು, ಮರುಭೂಮಿ ಎಲ್ಲವನ್ನೂ ನೋಡಿದರೂ ನನ್ನ ನೆಚ್ಚಿನ ಸ್ಥಳ ನಿನ್ನ ತೋಳುಗಳಲ್ಲಿ ಎಂದು ಮಿಲಿಂದ್ ಫೋಟೋ ಪೋಸ್ಟ್ ಮಾಡಿದ್ದಾರೆ.

ಜೋಡಿಯ ರೊಮ್ಯಾಂಟಿಕ್ ಲುಕ್

ಅಂಕಿತಾ ಅವರ ಅಪ್ಪುಗೆಯಲ್ಲಿ ಮಲಗಿರುವ ಫೋಟೋ ಪೋಸ್ಟ್ ಮಾಡಿ ಮುಗಿಯದ ಆನಿವರ್ಸರಿಗಳು ಎಂದು ಬರೆದಿದ್ದಾರೆ.

ಇಬ್ಬರೂ ಫಿಟ್ನೆಸ್ ಫ್ರೀಕ್ಗಳಾಗಿದ್ದು, ಮ್ಯಾರಥಾನ್, ಟ್ರಾವೆಲಿಂಗ್ ಮಾಡುತ್ತಾರೆ.

5 ವರ್ಷ ಡೇಟ್ ಮಾಡಿದ ಈ ಜೋಡಿ 2018 ಎಪ್ರಿಲ್ನಲ್ಲಿ ವಿವಾಹವಾದರು.

ಮಹಾರಾಷ್ಟ್ರದ ಸಂಪ್ರದಾಯಗಳಂತೆ ಈ ಜೋಡಿ ಸತಿಪತಿಯಾಗಿದ್ದರು.

ಗೋವಾದಲ್ಲಿ ಬೆತ್ತಲೆಯಾಗಿ ಓಡಿ ಮಿಲಿಂದ್ ಸೋಮನ್ ಟೀಕೆಗೆ ಗುರಿಯಾಗಿದ್ದರು.

ಇನ್ನು ಮಿಲಿಂದ್ ಅವರ ತಾಯಿಯೂ ಫಿಟ್ನೆಸ್ ಫ್ರೀಕ್.