'ಒಮ್ಮೆ ಮುಟ್ಟುವೆ' ಎಂದು ಕರೀನಾ ಹಿಂದೆ ಓಡಿದ ಫ್ಯಾನ್: ಮುಂದೇನಾಯ್ತು ನೋಡಿ...
ನಟಿ ಕರೀನಾ ಕಪೂರ್ ಪತಿಯ ಜೊತೆ ಹೋಟೆಲ್ಗೆ ಹೋಗಿದ್ದಾಗ ಮಹಿಳೆ ಮಾಡಿದ್ದೇನು? ವಿಡಿಯೋ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು
ಚಿತ್ರನಟರು ಎಲ್ಲಿಗೆ ಹೋದರೂ ಜನರು ಸುತ್ತುವರಿಯುತ್ತಾರೆ. ಅವರು ಪಬ್ಲಿಕ್ ಫಿಗರ್ (Public Figure) ಆಗಿರುವ ಕಾರಣ, ಖಾಸಗಿ ಜೀವನ ಎನ್ನುವುದೇ ಇರುವುದಿಲ್ಲ. ರಸ್ತೆ ಮೇಲಾಗಲೀ ಅಥವಾ ಸಾರ್ವಜನಿಕ ಸ್ಥಳಗಳಲ್ಲಾಗಲೀ ಕಂಡರೆ ಅವರ ಫ್ಯಾನ್ಸ್ ಕಾಯುತ್ತಿರುತ್ತಾರೆ. ಅವರ ಜೊತೆ ಸೆಲ್ಫಿ ತೆಗೆಸಿಕೊಂಡರೆ ಜೀವನ ಪಾವನ ಎಂದು ಅಂದುಕೊಳ್ಳುವ ಅಭಿಮಾನಿಗಳೇ ಹೆಚ್ಚು, ಚಿತ್ರ ತಾರೆಯರೇ ತಮ್ಮ ದೇವರು ಎಂದು ಬಯಸುವವರಿಗಂತೂ ಕೊರತೆಯೇನಿಲ್ಲ. ಆದ್ದರಿಂದ ಅವರನ್ನು ನೋಡಲು ಮುಗಿಬೀಳುತ್ತಾರೆ. ಎಷ್ಟೋ ಮಂದಿ ಚಿತ್ರನಟ ನಟಿಯರ ಬಂಗಲೆಗೆ ಪ್ರಾಣ ಪಣಕ್ಕಿಟ್ಟು ಹೋಗಿ ನೋಡುವ ಸಾಹಸ ಮಾಡಿರುವ ಘಟನೆಗಳೂ ಇವೆ. ಇತ್ತೀಚೆಗಂತೂ ನಟ ನಟಿಯರಿಗಾಗಿ ಸೆಲ್ಫಿ ಕಿತ್ತಾಟದ ಸುದ್ದಿ ಜಾಸ್ತಿನೇ ಆಗಿದೆ. ಆದರೆ ಇಲ್ಲಿ ಅದಕ್ಕಿಂತ ಸ್ವಲ್ಪ ವಿಭಿನ್ನವಾದ ಘಟನೆ ನಡೆದಿದೆ, ಇದು ಸೆಲ್ಫಿಗಾಗಿ ನಡೆದ ಗಲಾಟೆಯಲ್ಲ, ಬದಲಿಗೆ ನೇರವಾಗಿ ನಟಿಯನ್ನು ಮುಟ್ಟಲು ಮಹಿಳೆಯೊಬ್ಬರು (Woman) ಹಾತೊರೆದ ಘಟನೆಯಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ವೀಕೆಂಡ್ (Weekend) ಖುಷಿಯಲ್ಲಿ ನಿನ್ನೆ ಶನಿವಾರ ರಾತ್ರಿ ನಟಿ ಕರೀನಾ ಕಪೂರ್ ತಮ್ಮ ಪತಿಯಾದ ನಟ ಸೈಫ್ ಅಲಿ ಖಾನ್ (Saif Ali Khan) ಜೊತೆ ಊಟಕ್ಕೆ ಹೋಗಿದ್ದರು. ಸೈಫ್ ಅಲಿ ಖಾನ್ ಮುಂದೆ ಹೋಗಿದ್ದರು. ಹಿಂದೆ ಇದ್ದ ನಟಿ ಕರೀನಾ ಕಪೂರ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ, ಅವರನ್ನು ಗುರುತಿಸಿದ ಮಹಿಳೆಯೊಬ್ಬರು ಅದೆಲ್ಲಿಂದಲೋ ಓಡೋಡಿ ಬಂದರು. ಅವರ ಬಳಿಗೆ ಓಡಿ ಬಂದು, "ಮೇಡಂ, ನಿಮ್ಮ ಕೈಗಳನ್ನು ಸ್ಪರ್ಶಿಸಬೇಕು, ದಯವಿಟ್ಟು ಅನುಮತಿ ಮಾಡಿಕೊಡಿ" ಎಂದು ಒಂದೇ ಸಮನೆ ಕೇಳತೊಡಗಿದರು. ಕರೀನಾ (Kareena Kapoor) ಆಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಮಹಿಳೆ ಮಾತ್ರ ಬಿಡಲೇ ಇಲ್ಲ.
ಅಜಯ್ ದೇವಗನ್ ಜೊತೆ ಲಿಪ್ಲಾಕ್ಗೆ ಕರೀನಾ ಹಿಂಜರಿಯಲು ಇದೇ ಕಾರಣ!
ಇಂಥ ಸಂದರ್ಭದಲ್ಲಿ ನಟ ನಟಿಯರಿಗಾಗಿ ಆಗುವ ಮುಜುಗರ ಅಷ್ಟಿಷ್ಟಲ್ಲ. ಒಂದೆಡೆ ಯಾರ್ಯಾರೋ ಬಂದು ಹೀಗೆ ಅಡ್ಡಗಟ್ಟುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲವಾದರೆ, ಇನ್ನೊಂದೆಡೆ ಸ್ವಲ್ಪ ಸಿಟ್ಟಿಗೆದ್ದರಂತೂ ಮುಗಿದೇ ಹೋಯ್ತು. ಇದ್ದ ಘಟನೆಗಳನ್ನು ಬಿಟ್ಟು ನಟ-ನಟಿಯರ ವಿರುದ್ಧದ ಅಪಪ್ರಚಾರ ಶುರುವಾಗಿಯೇ ಬಿಡುತ್ತದೆ. ಅಭಿಮಾನಿಗಳನ್ನು ತಳ್ಳಿದರು, ಹೊರಕ್ಕೆ ಹಾಕಿದರು, ಬಾಡಿಗಾರ್ಡ್ಗಳು ಕೆಟ್ಟದ್ದಾಗಿ ನಡೆಸಿಕೊಂಡರು ಇತ್ಯಾದಿಯಾಗಿ ಸುದ್ದಿಯಾಗುವ ಕಾರಣ, ಸಂದಿಗ್ಧ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳು ಇರುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ, ನಟರಾದ ಸಲ್ಮಾನ್ ಖಾನ್, ಮಲೈಕಾ ಅರೋರ ಮುಂತಾದವರ ಬಾಡಿಗಾರ್ಡ್ಗಳು ಅಭಿಮಾನಿಗಳನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಕತ್ ಟ್ರೋಲ್ ಆಗಿತ್ತು. ಆದ್ದರಿಂದ ಫ್ಯಾನ್ಸ್ಗಳನ್ನು (Fans) ರೊಚ್ಚಿಗೇಳಿಸದೇ ಸಮಾಧಾನಚಿತ್ತವಾಗಿ ಸಮಸ್ಯೆ ಬಗೆಹರಿಸುವುದು ಸೆಲೆಬ್ರಿಟಿಗಳಿಗೆ ಕಷ್ಟಕರವಾದ ಮಾತೇ.
ಅದೇ ರೀತಿ ಕರೀನಾ ಅವರ ಘಟನೆಯಲ್ಲಿಯೂ ಆಯಿತು. ಮಹಿಳೆ ಒಂದೇ ಸಮನೆ ಕಿರಿಕಿರಿ ಮಾಡುತ್ತಿದ್ದರೂ, ಕರೀನಾ ಆರಂಭದಲ್ಲಿ ನಗುತ್ತಲೇ ಆಕೆಯನ್ನು ತಳ್ಳಲು ಪ್ರಯತ್ನಿಸುತ್ತಿದ್ದರು. ಒಂದು ಹಂತದಲ್ಲಿ ಅವರು ತಾಳ್ಮೆ ಕಳೆದುಕೊಂಡದ್ದೂ ಕಂಡುಬಂತು. ಆದರೂ ಹಿಂದೆ ಕ್ಯಾಮೆರಾ ತಮ್ಮ ಮೇಲೆ ಇರುವುದನ್ನು ಕಂಡು ಮಹಿಳೆಯರನ್ನು ಸಮಾಧಾನಚಿತ್ರವಾಗಿ ತಪ್ಪಿಸಲು ಸಾಕಷ್ಟು ಪ್ರಯತ್ನಿಸಿದರು. ನಂತರ ಪರಿಸ್ಥಿತಿಯನ್ನು ಅರಿತ ಬೆಬೋ ಅವರ ಅಂಗರಕ್ಷಕ ಮಹಿಳೆಯನ್ನು ದೂರ ತಳ್ಳಿ ಮಹಿಳೆ ಹತ್ತಿರ ಬರದಂತೆ ನೋಡಿಕೊಂಡದರು.
ಸೈಫ್ ಮೊದಲ ಪುತ್ರಿಗೆ ಏನೋ ಹೇಳ ಹೊರಟಿದೆ ಕರೀನಾಳ ಪುಟ್ಟ ಕಂದ, ಫೋಟೋ ವೈರಲ್
ಅಂದುಕೊಂಡಂತೆ, ಇದು ಕೂಡ ಹಲವರ ಟ್ರೋಲ್ಗೆ ಆಹಾರವಾಗಿದೆ. ಕರೀನಾ ಪರವಾಗಿ ಕೆಲವರು ನಿಂತಿದ್ದರೆ, ಕೆಲವರು ನಟಿಯನ್ನು ದೂಷಿಸಿ ಕಮೆಂಟ್ ಮಾಡುತ್ತಿದ್ದಾರೆ. ಫ್ಯಾನ್ಸ್ ಇಲ್ಲದಿದ್ದರೆ ಇವರ ಚಿತ್ರ ನೋಡುವವರು ಯಾರು, ಚಿತ್ರ ನೋಡಲು ಅಭಿಮಾನಿಗಳು ಹೆಚ್ಚಿಗೆ ಬೇಕು, ಆದರೆ ಒಂದು ಸಲ ಮುಟ್ಟಲು ಅವಕಾಶ ಕೇಳಿದರೆ ಮಹಿಳೆಯರನ್ನು ನಡೆಸಿಕೊಂಡ ರೀತಿ ಸರಿಯಲ್ಲ ಎಂದಿದ್ದರೆ, ಇನ್ನು ಕೆಲವರು ನಟಿಯನ್ನು ದೂಷಿಸಬೇಡಿ, ಮಹಿಳೆಯ ಕ್ರಮ ಸರಿಯಿಲ್ಲ ಎಂದಿದ್ದಾರೆ.