Asianet Suvarna News Asianet Suvarna News

'ಅವತಾರ್-2' ನೋಡುವಾಗ ಹೃದಯಾಘಾತ; ಚಿತ್ರಮಂದಿರದಲ್ಲೇ ವ್ಯಕ್ತಿ ಸಾವು

ಅವತಾರ್-2 ನೋಡಿ ಸಂಭ್ರಮಿಸುವ ವೇಳೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಸಂಭವಿಸಿದೆ. 

Man Suffers Heart Attack While Watching Avatar 2 In Andhra Pradesh sgk
Author
First Published Dec 18, 2022, 1:34 PM IST

ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಅವತಾರ್-2 ಸಿನಿಮಾ ಕೊನೆಗೂ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದಲ್ಲೂ ಅವತಾರ್-2 ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಬರೋಬ್ಬರಿ 13 ವರ್ಷಗಳ ಬಳಿಕ ಬಂದ ಅವತಾರ್ ಸೀರಿಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೇಮ್ಸ್ ಕ್ಯಾಮರೂನ್ ದೃಶ್ಯ ವೈಭವಕ್ಕೆ ಮತ್ತೊಮ್ಮೆ ಫಿದಾ ಆಗಿದ್ದಾರೆ ಅಭಿಮಾನಿಗಳು. ಅವತಾರ್-2 ನೋಡಿ ಸಂಭ್ರಮಿಸುವ ವೇಳೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಸಂಭವಿಸಿದೆ. 

ಅಭಿಮಾನಿ ಲಕ್ಷ್ಮೀರೆಡ್ಡಿ ತನ್ನ ಸಹೋದರನ ಜೊತೆ ಅವತಾರ್-2 ನೋಡಲು ಚಿತ್ರಮಂದಿರಕ್ಕೆ ಆಗಮಿಸಿದ್ದರು. ಸಿನಿಮಾ ನೋಡುವಾಗ ಹೃದಯಾಘಾತವಾಗಿದ್ದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅವತಾರ್: ದಿ ವೇ ಆಫ್ ವಾಟರ್ ವೀಕ್ಷಿಸುವಾಗ ಲಕ್ಷ್ಮೀ ರೆಡ್ಡಿ ಚಿತ್ರಮಂದಿರದಲ್ಲೇ ಕುಸಿದು ಬಿದ್ದಿದ್ದಾರೆ ತಕ್ಷಣವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ನಿಧನಹೊಂದಿದ್ದಾರೆ.  ಲಕ್ಷ್ಮೀ ರೆಡ್ಡಿ ಅವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವತಾರ್-2 ನೋಡುವಾಗ ಅತಿಯಾದ ಉತ್ಸಾಹದಿಂದ ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. 

Avatar:The Way of Water; 'ಅವೆಂಜರ್ಸ್ ಎಂಡ್‌ಗೇಮ್' ಕಲೆಕ್ಷನ್ ಬ್ರೇಕ್ ಮಾಡಲು ವಿಫಲವಾದ 'ಅವತಾರ್-2'

ಅಂದಹಾಗೆ ಈ ರೀತಿಯ ಘಟನೆ ಈ ಮೊದಲು ಅಂದರೆ ಅವತಾರ್ ಮೊದಲ ಭಾಗ ರಿಲೀಸ್ ಆದಾಗಲೂ ಸಂಭವಿಸಿತ್ತು. 'ಸಿನಿಮಾ ನೋಡುವಾಗ ಅತಿಯಾದ ಉತ್ಸಾಹದಿಂದ' ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಬಹಿರಂಗಪಡಿಸಿದರು. ಇದೀಗ ಅದೇ ರೀತಿಯ ಘಟನೆ ಆಂಧ್ರ ಪ್ರದೇಶದಲ್ಲಿ ಸಂಭವಿಸಿರುವುದು ದುರದೃಷ್ಟಕರವಾಗಿದೆ.  

Avatar2: ವಿಶ್ವಾದ್ಯಂತ ಅವತಾರ್-2 ರಿಲೀಸ್: ಮೊದಲ ದಿನವೇ ಭರ್ಜರಿ ಓಪನಿಂಗ್

  'ಅವತಾರ್ ದಿ ವೇ ಆಫ್ ವಾಟರ್' ಬಗ್ಗೆ

ಡಿಸೆಂಬರ್ 16ರಂದು ವಿಶ್ವದಾದ್ಯಂತ ತೆರೆಗೆ ಬಂದಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್-2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲೂ ಮೊದಲ ದಿನ ಉತ್ತಮ ಗಳಿಕೆ ಮಾಡಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಹಾಲಿವುಡ್ ಸಿನಿಮಾ ಇದಾಗಿದೆ.  ಅವತಾರ್-2 ಭಾರತದಲ್ಲಿ 2ನೇ ದಿನಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಬಾಚಿಕೊಂಡಿದೆ ಎನ್ನಲಾಗಿದೆ. ಒಂದು ದಶಕದ ನಂತರ ಬಂದಿರುವ ಪಾರ್ಟ್-2 ಅವತಾರ್: ದಿ ವೇ ಆಫ್ ವಾಟರ್ ಚಿತ್ರಕ್ಕೆ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಸಿಕ್ವೇಲ್‌ನಲ್ಲಿ ಕಾಡನ್ನು ತೋರಿಸಲಾಗಿತ್ತು. ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿರುವುದು ವಿಶೇಷ. 3Dಯಲ್ಲಿ ಮೂಡಿಬಂದ ಈ ಸಿನಿಮಾ ದೊಡ್ಡ ದೃಶ್ಯ ವೈಭವವಾಗಿದೆ. Sam Worthington,Kate Winslet, Zoe Saldaña, Joel David Moore, CCH Pounder ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.


 

Follow Us:
Download App:
  • android
  • ios