Asianet Suvarna News Asianet Suvarna News

Avatar:The Way of Water; 'ಅವೆಂಜರ್ಸ್ ಎಂಡ್‌ಗೇಮ್' ಕಲೆಕ್ಷನ್ ಬ್ರೇಕ್ ಮಾಡಲು ವಿಫಲವಾದ 'ಅವತಾರ್-2'

'ಅವತಾರ್ ದಿ ವೇ ಆಫ್ ವಾಟರ್', ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಿನಿಮಾ. ಕೊನೆಗೂ ಈ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. 

Avatar The Way of Water collection Day 1: James Cameron's film fails to beat Avengers Endgame in India sgk
Author
First Published Dec 17, 2022, 11:28 AM IST

'ಅವತಾರ್ ದಿ ವೇ ಆಫ್ ವಾಟರ್', ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಿನಿಮಾ. ಇಡೀ ವಿಶ್ವವೇ ಅವತಾರ್-2 ರಿಲೀಸ್‌ಗಾಗಿ ಎದುರು ನೋಡುತ್ತಿದ್ದರು. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ 'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ ಕೊನೆಗೂ ರಿಲೀಸ್ ಆಗಿದೆ. ಬರೋಬ್ಬರಿ 13 ವರ್ಷಗಳ ಬಳಿಕ ಅವತಾರ್ ಸೀರಿಸ್ ರಿಲೀಸ್ ಆಗಿದ್ದು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. 2009ರಲ್ಲಿ ಅವತಾರ್ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ 2ನೇ ಭಾಗ ಡಿಸೆಂಬರ್ 16ರಂದು ವಿಶ್ವದಾದ್ಯಂತ ತೆರೆಗೆ ಬಂದಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್-2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲೂ ಮೊದಲ ದಿನ ಉತ್ತಮ ಗಳಿಕೆ ಮಾಡಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಹಾಲಿವುಡ್ ಸಿನಿಮಾ ಇದಾಗಿದೆ.   

ಅವತಾರ್: ದಿ ವೇ ಆಫ್ ವಾಟರ್ ಭಾರತದದದಲ್ಲಿ ಬಾಕ್ಸ್ ಆಫೀಸ್‌ ಬೇಟೆ ಮುಂದುವರೆಸಿದೆ. ಮೊದಲ ದಿನ ಭರ್ಜರಿ ಕಮಾಯಿ ಮಾಡಿದ್ರೂ ಈ ಸಿನಿಮಾ ಅವೆಂಜರ್ಸ್ ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ವಿಫಲವಾಗಿದೆ. ಸಿನಿಮಾ ಪಂಡಿತರ ಲೆಕ್ಕಾಚಾರದ ಪ್ರಕಾರ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್-2 ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 38.50 ಕೋಟಿ ರೂಪಾಯಿಂದ 40.50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಅವತಾರ್ 2 ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿ ಹೆಚ್ಚು ಓಪನಿಂಗ್ ಮಾಡಿದ ಹಾಲಿವುಡ್ ಸಿನಿಮಾವಾಗಿದೆ. ಅಂದಹಾಗೆ ಮೊದಲ ಸಿನಿಮಾ 2019ರಲ್ಲಿ ಬಂದ Avengers: Endgame ಆಗಿದೆ. ಅವೆಂಜರ್ಸ್ ಸಿನಿಮಾ ಮೊದಲ ದಿನ ಭಾರತದಲ್ಲಿ 53.10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

Avatar 2: 'ಅವತಾರ್​: ದಿ ವೇ ಆಫ್​ ವಾಟರ್​' ಇಂದು ಬಿಡುಗಡೆ: ಕರ್ನಾಟಕದಲ್ಲಿ 1000 ಪ್ರದರ್ಶನ

ಅವತಾರ್-2 ಭಾರತದ ಅನೇಕ ಭಾಷೆಯಲ್ಲಿ ರಿಲೀಸ್ ಆಗಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಡಬ್ ಆಗಿ ತೆರೆಗೆ ಬಂದಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಕರ್ನಾಟಕ ಸೇರಿದಂತೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಭಾರತದಲ್ಲೇ ಅವತಾರ್-2 ಸಿನಿಮಾ ಬರೋಬ್ಬರಿ 22 ಕೋಟಿ ರೂಪಾಯಿ ಬಾಚಿಕೊಂಡಿದೆ. ಉತ್ತರ, ಪೂರ್ವ ಹಾಗೂ ಪಶ್ಚಿಮ ಭಾರತದಲ್ಲೂ ಭರ್ಜರಿ ಗಳಿಕೆ ಮಾಡಿದೆ. ಅಂದಹಾಗೆ ಅವತಾರ್-2 ಸಿನಿಮಾ ಹಾಲಿವುಡ್‌ನ ಸ್ಪೈಡರ್ ಮ್ಯಾನ್; ನೋ ವೇ ಹೋಮ್, ಡಾಕ್ಟರ್ ಸ್ಟ್ರೇಂಜ್; ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್ ಮತ್ತು ಅವೆಂಜರ್ಸ್: ಇನ್ಫಿನಿಟಿ ವಾರ್‌ ಸಿನಿಮಾಗಳ ಕಲೆಕ್ಷನ್ ಬ್ರೇಕ್ ಮಾಡಿದೆ. 

ಕನ್ನಡದಲ್ಲೂ ಬರುತ್ತಿದೆ ದೃಶ್ಯ ವೈಭವದ ಅವತಾರ್-2, ಇಲ್ಲಿದೆ ಟ್ರೈಲರ್!

ಅವತಾರ್: ದಿ ವೇ ಆಫ್ ವಾಟರ್ ಬಗ್ಗೆ

ಒಂದು ದಶಕದ ನಂತರ ಬಂದಿರುವ ಪಾರ್ಟ್-2 ಅವತಾರ್: ದಿ ವೇ ಆಫ್ ವಾಟರ್ ಚಿತ್ರಕ್ಕೆ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಸಿಕ್ವೇಲ್‌ನಲ್ಲಿ ಕಾಡನ್ನು ತೋರಿಸಲಾಗಿತ್ತು. ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿರುವುದು ವಿಶೇಷ. 3Dಯಲ್ಲಿ ಮೂಡಿಬಂದ ಈ ಸಿನಿಮಾ ದೊಡ್ಡ ದೃಶ್ಯ ವೈಭವವಾಗಿದೆ. Sam Worthington,Kate Winslet, Zoe Saldaña, Joel David Moore, CCH Pounder ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Follow Us:
Download App:
  • android
  • ios