ಎಲ್ಲಾ ಮುಗಿದ್ ಮೇಲೆ ಸನ್ಯಾಸತ್ವದತ್ತ ಮನಸ್ಸು ಮಾಡಿದ್ರ ನಟಿ ಮಮತಾ ಕುಲಕರ್ಣಿ:ಕುಂಭಮೇಳದ ವೀಡಿಯೋ ವೈರಲ್
90 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯವಾಗಿದ್ದ ಹೆಸರು ಮಮತಾ ಕುಲಕರ್ಣಿ, ಆದರೆ ಅವರೀಗ ಸನ್ಯಾಸತ್ವ ಸ್ವೀಕರಿಸಿ ಸಾಧ್ವಿಯಾಗಲಿದ್ದಾರೆ ಎಂಬ ವಿಚಾರವೊಂದು ಸಾಕಷ್ಟು ಸದ್ದು ಮಾಡುತ್ತಿದೆ.

90 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯವಾಗಿದ್ದ ಹೆಸರು ಮಮತಾ ಕುಲಕರ್ಣಿ, ಆದರೆ ಅವರೀಗ ಸನ್ಯಾಸತ್ವ ಸ್ವೀಕರಿಸಿ ಸಾಧ್ವಿಯಾಗಲಿದ್ದಾರೆ ಎಂಬ ವಿಚಾರವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಇಂದು ಬೆಳಗ್ಗೆ ಮಾಜಿ ನಟಿ ಮಮತಾ ಕುಲಕರ್ಣಿ ಅವರು ಪ್ರಸ್ತುತ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಅಲ್ಲಿನ ಕಿನ್ನರ್ ಅಖಾಡವನ್ನು ಸೇರಿದ್ದಾರೆ. ಅಲ್ಲಿ ಅವರು ಕಿನ್ನರ್ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಡಾ. ಲಕ್ಷ್ಮಿ ನಾರಾಯಣ್ ತ್ರಿಪಾಠಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮಹಾಮಂಡಲೇಶ್ವರನಾಗುವ ವಿಚಾರದ ಬಗ್ಗೆ ಇಬ್ಬರ ನಡುವೆ ಸುಮಾರು ಒಂದು ಗಂಟೆ ಕಾಲ ಮಾತುಕತೆಗಳು ನಡೆದವು. ಈ ವೇಳೆ ಮಮತಾ ಕುಲಕರ್ಣಿ ಧರಿಸಿದ್ದ ವೇಷಭೂಷಣಗಳು ಗಮನ ಸೆಳೆದವು. ಕತ್ತಿಗೆ ರುದ್ರಾಕ್ಷಿ ಮಾಲೆ ಧರಿಸಿದ್ದ ಮಮತಾ ಹೆಗಲಿಗೆ ಕೇಸರಿ ಚೀಲವನ್ನು ಹಾಕಿಕೊಂಡಿದ್ದರು. ಹಿಂದೂ ಸನ್ಯಾಸಿಯಂತಹ ವೇಷ ಭೂಷಣ ಅವರದಾಗಿತ್ತು. ಮಮತಾ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಇಂದು ಕಿನ್ನರ್ ಅಖಾಡದ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ್ ತ್ರಿಪಾಠಿ ಅವರು ಮಮತಾ ಕುಲಕರ್ಣಿ ಅವರೊಂದಿಗೆ ಅಖಿಲ ಭಾರತ ಅಖಾಡದ ಅಧ್ಯಕ್ಷ ರವೀಂದ್ರ ಪುರಿ ಅವರನ್ನು ಭೇಟಿಯಾದರು. ಭೇಟಿಯ ಸಮಯದಲ್ಲಿ, ಮಮತಾ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು ಎಂದು ವರದಿಯಾಗಿದೆ. ಆದರೆ ಮಮತಾ ಕುಲಕರ್ಣಿಯವರನ್ನು ತನ್ನ ಅಖಾಡದ ಮಹಾಮಂಡಲೇಶ್ವರರನ್ನಾಗಿ ನೇಮಿಸುವ ಬಗ್ಗೆ ಕಿನ್ನರ್ ಅಖಾಡವು ಸಂಪೂರ್ಣ ಗೌಪ್ಯತೆಯನ್ನು ಕಾಯ್ದುಕೊಂಡಿದೆ.
ಭಗವಾನ್ ರಾಮನು ಮಾತಾ ಸೀತೆಯನ್ನು ಹುಡುಕುತ್ತಾ ಚಿತ್ರಕೂಟದ ಕಾಡಿಗೆ ಹೋದಾಗ, ಶಿವ ಮತ್ತು ಮಾತೆ ಪಾರ್ವತಿಯ ನಡುವೆ ಸಂಭಾಷಣೆ ನಡೆಯಿತು. ಮಹಾಕುಂಭಕ್ಕೆ ಬಂದು ಅದರ ಭವ್ಯತೆಯನ್ನು ನೋಡುವುದು ನನಗೆ ಬಹಳ ಸ್ಮರಣೀಯ ಕ್ಷಣವಾಗಿದೆ. ಈ ಪವಿತ್ರ ಮಹಾಕುಂಭ ಸಮಯವನ್ನು ನಾನು ವೀಕ್ಷಿಸುತ್ತಿರುವುದು ನನ್ನ ಅದೃಷ್ಟ, ಎಂದು ಮಮತಾ ಕುಲಕರ್ಣಿಯವರು ಅವರು ತಮ್ಮ ಭೇಟಿಯ ನಂತರ ಹೇಳಿದ್ದಾರೆ ಎಂದು
ವರದಿಯಾಗಿದೆ.
2015ರಲ್ಲಿ ಮಂಗಳಮುಖಿ ಸಮುದಾಯಕ್ಕೆ ನ್ಯಾಯ ಒದಗಿಸಲು ಹೋರಾಡುತ್ತಿದ್ದ ಲಕ್ಷ್ಮಿನಾರಾಯಣ್ ತ್ರಿಪಾಠಿ ಎಂಬುವವರು ಈ 'ಕಿನ್ನರ್ ಅಖಾಡ'ವನ್ನು ಸ್ಥಾಪಿಸಿದರು. ಲಕ್ಷ್ಮಿನಾರಾಯಣ್ ತ್ರಿಪಾಠಿ ತಮ್ಮ ತಂಡದೊಂದಿಗೆ ಮಂಗಳಮುಖಿ ಸಮುದಾಯವನ್ನು ಮುಖ್ಯವಾಹಿನಿಗೆ ಸಂಪರ್ಕಿಸಲು ಪ್ರಾರಂಭಿಸಿದರು. ಸಮಾಜದಲ್ಲಿ ಮಂಗಳಮುಖಿಯರಿಗೆ ಗೌರವ ಸಿಗುವಂತೆ ಮಾಡುವುದು ಕಿನ್ನರ್ ಅಖಾಡ' ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ.
ಇತ್ತ 52 ವರ್ಷ ಪ್ರಾಯದ ನಟಿ ಮಮತಾ ಕುಲಕರ್ಣಿಯ ಬಗ್ಗೆ ಹೇಳುವುದಾದರೆ ಆಕೆ 1990ರ ದಶಕದ ಬಾಲಿವುಡ್‌ನ ಖ್ಯಾತ ನಟಿಯಾಗಿದ್ದು, ಮನೆಮಾತಾಗಿದ್ದರು. ಬಾಲಿವುಡ್‌ನ ಹಲವು ಜನಪ್ರಿಯ ಸಿನಿಮಾಗಳಾದ . ಕರಣ್ ಅರ್ಜುನ್, ಕ್ರಾಂತಿವೀರ್, ಸಬ್ಸೆ ಬಡಾ ಖಿಲಾಡಿ, ಚೈನಾ ಗೇಟ್ ಹಾಗೂ ಆಂದೋಲನ್ ಸೇರಿದಂತೆ ಹಲವಾರು ಸೂಪರ್‌ಹಿಟ್ ಬಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2002ರಲ್ಲಿ ಬಿಡುಗಡೆಯಾದ ಕಭಿ ತುಮ್ ಕಭಿ ಹಮ್ ಅವರು ಕೊನೆಯದಾಗಿ ನಟಿಸಿದ ಬಾಲಿವುಡ್ ಸಿನಿಮಾವಾಗಿದೆ.
25 ವರ್ಷದ ಬಳಿಕ ಭಾರತಕ್ಕೆ ಬಂದು ನಾನಿನ್ನು ಸಿಂಗಲ್ ಎಂದ ನಟಿ ಮಮತಾ ಕುಲಕರ್ಣಿ!
ಭೂಗತ ಪಾತಕಿಗಳ ಪ್ರೀತಿಯ ಬಲೆಗೆ ಬಿದ್ದು, ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು!
ಸನಾ ಖಾನ್ - ಮಮತಾ ಕುಲಕರ್ಣಿ: ಧರ್ಮಕ್ಕಾಗಿ ಗ್ಲಾಮರ್ ಲೋಕಕ್ಕೆ ಬೈ ಹೇಳಿದವರು!