25 ವರ್ಷದ ಬಳಿಕ ಭಾರತಕ್ಕೆ ಬಂದು ನಾನಿನ್ನು ಸಿಂಗಲ್ ಎಂದ ನಟಿ ಮಮತಾ ಕುಲಕರ್ಣಿ!
ನಟಿ ಮಮತಾ ಕುಲಕರ್ಣಿ ಬರೋಬ್ಬರಿ 25 ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾರೆ. 2000 ಕೋಟಿ ರೂ ಡ್ರಗ್ಸ್ ಹಗರಣ ಆರೋಪ ಹೊತ್ತಿದ್ದ ಕುಲಕರ್ಣಿಗೆ ಬಾಂಬೇ ಹೈಕೋರ್ಟ್ ರಿಲೀಫ್ ನೀಡಿದೆ. ಇದರ ಬೆನ್ನಲ್ಲೇ ಮಮತಾ ನಾನಿನ್ನು ಸಿಂಗಲ್ ಎಂದಿದ್ದಾರೆ.
90ರ ದಶಕದ ಜನಪ್ರಿಯ ನಟಿ ಮಮತಾ ಕುಲಕರ್ಣಿ 25 ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ. 2015ರ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣ ಅವರ ವಾಪಸಾತಿ ಚರ್ಚೆಯ ವಿಷಯವಾಗಿದೆ. ಕೀನ್ಯಾದಲ್ಲಿ ನಡೆದ ಡ್ರಗ್ಸ್ ರಿಂಗ್ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕುಲಕರ್ಣಿ ಮೇಲೆ ಆರೋಪ ಹೊರಿಸಲಾಗಿತ್ತು, ಇದು ಸ್ನೇಹಿತ ವಿಕಿ ಗೋಸ್ವಾಮಿಗೆ ಸಂಬಂಧಿಸಿದೆ ಪ್ರಕರಣ ಎನ್ನಲಾಗಿದೆ.
ನ್ಯೂಸ್ 18 ಜೊತೆಗಿನ ಸಂದರ್ಶನವೊಂದರಲ್ಲಿ, ನಟಿ ಗೋಸ್ವಾಮಿಯ ಅಕ್ರಮ ವ್ಯವಹಾರದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದರೆ. ಕೀನ್ಯಾದಲ್ಲಿ ನಡೆದ ಸಭೆಯಲ್ಲಿ ಆಹ್ವಾನ ಮೇರೆಗೆ ಪಾಲ್ಗೊಂಡಿದ್ದೆ. ಆದರೆ ಸಭೆಗಳ ಸ್ವರೂಪದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತನ್ನ ಹೆಸರನ್ನು ತೆರವುಗೊಳಿಸಿದೆ ಎಂದು ಮಮತಾ ಕುಲಕರ್ಣಿ ಸಂತಸ ಹಂಚಿಕೊಂಡಿದ್ದಾರೆ.
ಬಾಂಬೇ ಹೈಕೋರ್ಟ್ ಎಫ್ಐಆರ್ ರದ್ದುಗೊಳಿಸಿದ ಬೆನ್ನಲ್ಲೇ ಘಟನೆ ಹಾಗೂ ಸಂಬಂಧ ಕುರಿತು ಮಾತನಾಡಿದ್ದಾರೆ. ವಿಕ್ಕಿ ಗೋಸ್ವಾಮಿ ನನ್ನ ಪತಿಯಲ್ಲ, ನಾನು ಹಾಗೂ ವಿಕಿ ನಡುವೆ ಪ್ರೀತಿ ಇತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಎಲ್ಲದರಿಂದ ದೂರವಾಗಿದ್ದೇನೆ. ನಾನು ಯಾರನ್ನೂ ಮದುವೆಯಾಗಿಲ್ಲ. ನಾನಿನ್ನು ಸಿಂಗಲ್ ಎಂದು ಮಮತಾ ಕುಲಕರ್ಣಿ ಹೇಳಿದ್ದಾರೆ. ಇದೇ ವೇಳೆ ಕುಲಕರ್ಣಿ ತಮ್ಮ ದೀರ್ಘಾವಧಿಯ ಅನುಪಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ,
ಮುಂಬೈಗೆ ಬಂದಿಳಿದಾಗ ತಾನು ಭಾವುಕಳಾಗಿದ್ದೆ ಎಂದು ನಟಿ ಹೇಳಿದ್ದಾರೆ, ನಗರಕ್ಕೆ ಮರಳಿ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ. ಚಿತ್ರರಂಗಕ್ಕೆ ಮರಳುವ ಉದ್ದೇಶವಿಲ್ಲ, ತನ್ನನ್ನು ತಾನು ಹುಡುಕುತ್ತಿದ್ದೆ. ಆದರೆ ಚಿತ್ರರಂಗಕ್ಕೆ ಮರಳುವ ಉದ್ದೇಶವಿರಲಿಲ್ಲ ಎಂದು ವಿವರಿಸಿದ್ದಾರೆ. ಅನೇಕ ಚಿತ್ರಗಳ ಆಫರ್‌ಗಳಿದ್ದಾಗ 2000ದಲ್ಲಿ ಭಾರತವನ್ನು ತೊರೆದಿದ್ದಾಗಿ ಬಹಿರಂಗಪಡಿಸಿದ್ದಾರೆ.