ಮದುವೆ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಬಾಲಿವುಡ್‌ ಹಾಟ್‌ ಬ್ಯೂಟಿ ಮಲ್ಲಿಕಾ ಶೆರಾವತ್‌ ಭಾರತದ ಹುಡುಗರ ಬಗ್ಗೆ ಹೀಗೆಲ್ಲಾ ಹೇಳಿದ್ದಾರೆ. 

ಸೆಕ್ಸ್​ ಬಾಂಬ್​ ಎಂದೇ ಫೇಮಸ್​ ಆಗಿರೋ ಮಾದಕ ನಟಿ ಮಲ್ಲಿಕಾ ಶೆರಾವತ್​ (Mallika Sherawat) ಎಂದಾಕ್ಷಣ ನೆನಪಾಗುವುದು ಬಾಲಿವುಡ್​ನ ಹಾಟ್​ ನಟಿ. ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​ನಲ್ಲಿ ಮೈ ಚಳಿ ಬಿಟ್ಟು ನಟಿಸಿರೋ ಮಲ್ಲಿಕಾ ಈಗ ತೆರೆಮರೆಗೆ ಸರಿದಿದ್ದಾರೆ. ‘ನೀವು ಒಂದು ಚಿತ್ರದಲ್ಲಿ ನಟಿಸುತ್ತಿದ್ದರೆ ಆ ಚಿತ್ರದ ನಟ ಕರೆದಲ್ಲಿ ಹೋಗಬೇಕು. ಜೊತೆಗೆ ಅವರು ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರುವಂತೆ ಹೇಳುತ್ತಾರೆ. ಒಂದು ವೇಳೆ ನೀವು ಆ ವೇಳೆ ಹೋಗದಿದ್ದಲ್ಲಿ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ ಎಂದು ಬಾಲಿವುಡ್​ನ ಕರಾಳ ಮುಖವನ್ನು ಕಳೆದ ವರ್ಷವಷ್ಟೇ ಬಿಚ್ಚಿಟ್ಟಿದ್ದರು ಮಲ್ಲಿಕಾ. ‘ಯಾವ ನಟಿ ತಮ್ಮೊಂದಿಗೆ ಬೆರೆಯುತ್ತಾರೆ, ಯಾವ ನಟಿಯನ್ನು ತಾವು ಕಂಟ್ರೋಲ್​ ಮಾಡಬಹುದು ಎಂದು ನೋಡುವ ಮೂಲಕ ನಟರು ಆ ರೀತಿಯ ನಟಿಯರನ್ನು (Actress) ಇಷ್ಟಪಡುತ್ತಾರೆ. ಆದರೆ ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ಹೀಗಾಗಿ ನನಗೆ ಟಾಪ್​ ನಟನರುಗಳ ಜೊತೆ ತೆರೆಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದೆಲ್ಲಾ ಹೇಳಿದ್ರು.

 ಹತ್ತು ವರ್ಷಗಳ ಹಿಂದೆ ಅಂದರೆ 2004ರಲ್ಲಿ ಮರ್ಡರ್‌ ಚಿತ್ರದಲ್ಲಿ ಸೆಕ್ಸ್​ ಬಾಂಬ್​ ಎಂದೇ ಫೇಮಸ್​ ಆಗಿರೋ ಮಾದಕ ನಟಿ ಮಲ್ಲಿಕಾ ಶೆರಾವತ್​ ಮತ್ತು ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​ ಆಗಿರೋ ನಟ ಇಮ್ರಾನ್​ ಹಶ್ಮಿ ನಡುವಿನ ಇಂಟಿಮೇಟ್​ ದೃಶ್ಯಗಳು ಎಲ್ಲರ ಹುಬ್ಬೇರಿಸಿದ್ದವು. ಈ ಚಿತ್ರದಲ್ಲಿ ಕಿಸ್ಸಿಂಗ್​ಗೆ ಅಂತೂ ಬರವೇ ಇರಲಿಲ್ಲ. ಆ ಪರಿಯಲ್ಲಿ ಇಂಟಿಮೇಟ್​ ದೃಶ್ಯಗಳು ಇದ್ದವು. 20 ವರ್ಷಗಳ ಹಿಂದೆ ಇಂಥ ದೃಶ್ಯಗಳು ಬಿಸಿಬಿಸಿ ಚರ್ಚೆಗೂ ಗ್ರಾಸವಾಗಿತ್ತು. ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎನ್ನುವ ಖ್ಯಾತಿ ಕೊಟ್ಟಿದ್ದು ಇದೇ ಚಿತ್ರ. ಏಕೆಂದರೆ ಇಬ್ಬರೂ ಈ ಸಿನಿಮಾದಲ್ಲಿ ಅಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡರು. ಇವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಟಾಪ್ ರೇಟೆಡ್ ಜೋಡಿ ಎಂಬ ಬಿರುದೂ ಅವರಿಗೆ ಬಂತು.

ಅನುಷ್ಕಾ- ವಿರಾಟ್‌ ದಾಂಪತ್ಯದಲ್ಲಿ ಬಿರುಕು? ಕೊಹ್ಲಿ ಭಾವನಾತ್ಮಕ ಪೋಸ್ಟ್‌ಗೆ ಫ್ಯಾನ್ಸ್ ಶಾಕ್‌!

ವಯಸ್ಸು 48 ಆದ್ರೂ ಇಂದಿಗೂ ಹಾಟ್‌ ಆಗಿಯೇ ಇರುವ ಮಲ್ಲಿಕಾ ಇದುವರೆಗೆ ಸಿಂಗಲ್. ತಾವು ಸಿಂಗಲ್‌ ಆಗಿಯೇ ಇರಲು ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಏನೆಂದ್ರೆ, ಭಾರತದ ಪುರುಷರಿಗೆ ಪ್ಯೂರ್‍‌ ಆಗಿರೋ ಹುಡುಗಿ ಬೇಕಂತೆ, ಯಾರೂ ಮುಟ್ಟದವರು ಬೇಕಂತೆ ಎಂದು ತಮಾಷೆ ಮಾಡಿದ್ದಾರೆ. ಭಾರತ ಮುಂಬೈ ಅಲ್ವಲ್ಲಾ, ನಿಜವಾದ ಭಾರತ ಇರುವುದು ಗ್ರಾಮೀಣ ಪ್ರದೇಶಗಳಲ್ಲಿ ಎನ್ನುವ ಮೂಲಕ ಈಗ ಪ್ಯೂರ್‍‌ ಹುಡುಗಿಯರು ಸಿಗೋದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಅದಕ್ಕಾಗಿಯೇ ನಾನು ಸಿಂಗಲ್‌ ಆಗಿದ್ದೇನೆ. ಏಕೆಂದ್ರೆ, ಈ ಸಿಲೇಬಸ್‌ನಿಂದ ನಾನು ಹೊರಕ್ಕೆ ಇದ್ದೇನೆ ಎನ್ನುವ ಮೂಲಕ ತಾವು ಪ್ಯೂರ್ ಅಲ್ಲ ಎಂದು ಹೇಳಿದ್ದಾರೆ. ನಾನು ಬಹಳ ಹಿಂದೆಯೇ ಮ್ಯಾರೇಜ್‌ ಮಾರ್ಕೆಟ್‌ನಿಂದ ನಾನು ದೂರನೇ ಇದ್ದೇನೆ ಎಂದಿದ್ದಾರೆ. ಇವರ ಈ ಸಂದರ್ಶದ ವಿಡಿಯೋ ಅನ್ನು ಬಾಲಿವುಡ್ ಒರಿಜಿನಲ್ಸ್‌ ಶೇರ್‍‌ ಮಾಡಿಕೊಂಡಿದೆ. 

ಅಂದಹಾಗೆ, ಮಲ್ಲಿಕಾ ಏನೂ ಪಟ್ಟಣದ ಹುಡುಗಿಯಲ್ಲ. ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಜನಿಸಿದ ನಟಿ ಜಾಟ್ ಕುಟುಂಬಕ್ಕೆ ಸೇರಿದವರು. ಸಂಪ್ರದಾಯಸ್ಥ ಕುಟುಂಬದವರು. ಇವರ ತಂದೆ ಮಗಳನ್ನು ಐಎಎಸ್ ಮಾಡಿಸುವ ಕನಸು ಕಂಡಿದ್ದರು. ಆದರೆ ಮಲ್ಲಿಕಾಗೆ ಸಿನಿಮಾದಲ್ಲಿ ನಟಿಸುವ ಆಸೆ. ಅದಕ್ಕಾಗಿಯೇ ಮನೆಯಲ್ಲಿ ಸಿನಿಮಾದಲ್ಲಿ ಕೆಲಸ ಮಾಡಬೇಕೆಂದರೆ ಕುಟುಂಬದ ಸಬ್ ನೇಮ್ ಬಳಸುವಂತಿಲ್ಲ ಎಂದು ಷರತ್ತು ವಿಧಿಸಿದ್ದರು. ಬಾಲಿವುಡ್‌ನಲ್ಲಿ ಏನಾದರೂ ಮಾಡಬೇಕೆಂಬ ಆಸೆಯಿಂದ ಇವರು ತಂದೆಯ ಷರತ್ತನ್ನು ಒಪ್ಪಿಕೊಂಡದ್ದು ಹೆಸರನ್ನೂ ಬದಲಿಸಿಕೊಂಡರು. ಮಲ್ಲಿಕಾ ಶೆರಾವತ್ ಅವರ ನಿಜವಾದ ಹೆಸರು ರೀಮಾ ಲಂಬಾ, ಆದರೆ ಚಿತ್ರರಂಗ ಪ್ರವೇಶಿಸುವ ಮುನ್ನ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಶೆರಾವತ್ ಎಂಬುದು ನಟಿಯ ತಾಯಿಯ ಅಮ್ಮನ ಮನೆಯಿಂದ ಬಂದ ಸರ್‍‌ನೇಮ್‌. ಬಾಲ್ಯದಿಂದಲೂ ತಾಯಿ ಬೆಂಬಲ ನೀಡಿದ್ದರಿಂದ ಅವರ ಸರ್‍‌ನೇಮ್‌ ಇಟ್ಟುಕೊಂಡರು ಮಲ್ಲಿಕಾ. ಚಿತ್ರರಂಗಕ್ಕೆ ಬಂದ ನಂತರ ನಟಿಯ ಫ್ಯಾಮಿಲಿ ಆಕೆಯಿಂದ ದೂರವಾಗಿದ್ದು ಸೆಕ್ಸ್‌ ಬಾಂಬ್‌ ಎನ್ನುವ ಹೆಸರು ಗಿಟ್ಟಿಸಿಕೊಳ್ಳುವವರೆಗೆ ಮಲ್ಲಿಕಾ ಬೆಳೆದರು.

ಸತ್ತ ವ್ಯಕ್ತಿ ಎದ್ದು ಬಂದ! ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಎದ್ದ ಯುವಕ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

View post on Instagram