Asianet Suvarna News Asianet Suvarna News

ಗಂಡಸರ ರೂಮಿಗೆ ನನ್ನನ್ನು ತಳ್ಳಿದ್ದು ಬೇರೆ ಯಾರೂ ಅಲ್ಲ; ಗಳಗಳನೇ ಅತ್ತು ದುಃಖ ತೋಡಿಕೊಂಡ ಶಕೀಲಾ

ನಾನು ಸಿನಿಮಾರಂಗಕ್ಕೆ ಬಂದೆ. ಆದರೆ, ಇಲ್ಲಿ ಕೂಡ ನನ್ನ ದೇಹ ಪ್ರದರ್ಶನವೇ ಆಯಿತು. ಈ ಬಗ್ಗೆ ನನಗೆ ತುಂಬಾ ಬೇಸರವಿದೆ. ಕಲಾವಿದೆಯಾಗುವ ಅರ್ಹತೆ ನನಗಿದ್ದರೂ ಇಂಡಸ್ಟ್ರಿಯಲ್ಲಿ ಯಾರಿಗೂ ಅದು ಬೇಕಾಗಿರಲಿಲ್ಲ. ಕ್ಯಾಮರಾ ಮುಂದೆ ನನ್ನನ್ನು ಗೊಂಬೆಯಂತೆ ಬಳಸಿಕೊಂಡರು.

Malayalam actress shakeela says her mother kicked her to gents room srb
Author
First Published Nov 1, 2023, 7:19 PM IST

ಮಲಯಾಂಳ ಮೂಲದ ನಟಿ ಶಕೀಲಾ ಮೊದಲು ನಟಿಸಿದ್ದು ನೀಲಿ ಚಿತ್ರಗಳಲ್ಲಿ. ಆದರೆ ಬಳಿಕ ಅವರು ಸಾಕಷ್ಟು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ, ಕಾಮಿಡಿ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಯೇ ಹೇಳುವಂತೆ, ಸಿನಿಮಾರಂಗ ಆಕೆಯ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ಬದಲಿಗೆ ಆಕೆಯ ದೈಹಿಕ ಸೌಂದರ್ಯವನ್ನಷ್ಟೇ ತೆರೆಯ ಮೇಲೆ ತೋರಿಸಿ ಕಾಸು ಸಂಪಾದನೆ ಮಾಡಿಕೊಂಡಿತು. 

ಶಕೀಲಾ ಹೇಳುವಂತೆ 'ನಾನು ಚಿಕ್ಕ ವಯಸ್ಸಿಗೇ ಸಾಕಷ್ಟು ಬೆಳೆದುಬಿಟ್ಟಿದ್ದೆ. ಹೈಸ್ಕೂಲು ಓದುವ ವಯಸ್ಸಿನಲ್ಲೇ ಕಾಲೇಜು ಹುಡುಗಿಯ ತರಹ ಇದ್ದೆ. ರಸ್ತೆಯಲ್ಲಿ ಹೋಗುತ್ತಿದ್ದರೆ ಬಹಳಷ್ಟು ಜನರು ನನ್ನನ್ನೇ ಗುರಾಯಿಸುತ್ತಿದ್ದರು. ಆದರೆ ನನಗೆ ಯಾಕೆ ಎಂದು ಅರ್ಥವೇ ಆಗುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಹಣಕ್ಕೆ ಬಹಳ ಸಮಸ್ಯೆ ಇತ್ತು. ನನ್ನ ತಾಯಿ ಗಂಡಸರನ್ನು ಪರಿಚಯ ಮಾಡಿಕೊಂಡು, ನನಗೆ ಅವರ ರೂಮಿಗೆ ಹೋಗಲು ಹೇಳುತ್ತಿದ್ದಳು. ಯಾಕೆ, ನಾನು ಹೋಗಲ್ಲ ಎಂದರೆ, ಹೊಡೆಯುತ್ತಿದ್ದಳು. ಬೇರೆ ದಾರಿಯಿಲ್ಲದೇ ಆಗ ನಾನು ಬಾಯಿ ಮುಚ್ಚಿಕೊಂಡು ಹೋಗುತ್ತಿದ್ದೆ' ಎಂದಿದ್ದಾರೆ ನಟಿ ಶಕೀಲಾ.

ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ ಕಿತ್ತೋದೋಳು, ಸ್ಪರ್ಧಿಗಳ ಮಾತು ಕೇಳಿ ಸುಸ್ತಾದ್ರಾ ವೀಕ್ಷಕರು!

ಮಲಯಾಳಂ ನಟಿ ಶಕೀಲಾ ಬಹಳಷ್ಟು ಜನಕ್ಕೆ ಗೊತ್ತು. ಆದರೆ ಆಕೆಯ ಕಣ್ಣೀರ ಕಥೆ ಹಲವರಿಗೆ ಗೊತ್ತಿಲ್ಲ. ಆಕೆಯೇ ಹೇಳಿಕೊಂಡಂತೆ, ಶಕೀಲಾ ಸಿನಿಮಾರಂಗಕ್ಕೆ ಬರುವ ಮೊದಲೇ ಆಕೆಯ ತಾಯಿ ಹಣಕ್ಕಾಗಿ ಗಂಡಸರ ರೂಮಿಗೆ ಕಳಿಸುತ್ತಿದ್ದರಂತೆ. ಆಕೆಗೆ ಏನೂ ಮಾಡಬೇಕೆಂದು ಗೊತ್ತಾಗದೇ ಮಲಗಿ ಬರುತ್ತಿದ್ದರಂತೆ. ಈ ಸಂಗತಿಯನ್ನು ಶಕೀಲಾ ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡು ಗಳಗಳನೇ ಅತ್ತಿದ್ದಾರೆ. 

ಡೈರೆಕ್ಟರ್ ಹೇಳಿದ್ದಕ್ಕೆ ಸ್ಕೂಟಿನಲ್ಲಿ ಒಟ್ಟಿಗೇ ಹೋಗುತ್ತಿದ್ದಾರೆ ಪಾಪ; ಪುಟ್ಟಕ್ಕನ ಸಂಸಾರಕ್ಕೆ ಇದೆಂಥಾ ಕಾಮೆಂಟ್!

ನನ್ನ ಹೆತ್ತಮ್ಮ ಈ ರೀತಿ ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಬಳಿಕ ನಾನು ಸಿನಿಮಾರಂಗಕ್ಕೆ ಬಂದೆ. ಆದರೆ, ಇಲ್ಲಿ ಕೂಡ ನನ್ನ ದೇಹ ಪ್ರದರ್ಶನವೇ ಆಯಿತು. ಈ ಬಗ್ಗೆ ನನಗೆ ತುಂಬಾ ಬೇಸರವಿದೆ. ಕಲಾವಿದೆಯಾಗುವ ಅರ್ಹತೆ ನನಗಿದ್ದರೂ ಇಂಡಸ್ಟ್ರಿಯಲ್ಲಿ ಯಾರಿಗೂ ಅದು ಬೇಕಾಗಿರಲಿಲ್ಲ. ಕ್ಯಾಮರಾ ಮುಂದೆ ನನ್ನನ್ನು ಗೊಂಬೆಯಂತೆ ಬಳಸಿಕೊಂಡರು" ಎಂದಿದ್ದಾರೆ ಒಂದು ಕಾಲದ ಸೆಕ್ಸಿ ನಟಿ ಬಿರುದಿನ ಶಕೀಲಾ. 

ಹಿರಿಯ ನಟ ದತ್ತಣ್ಣ ಜೊತೆ ಸೋತ ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಅಂಬರೀಷ್

Follow Us:
Download App:
  • android
  • ios