Asianet Suvarna News Asianet Suvarna News

ಹಿರಿಯ ನಟ ದತ್ತಣ್ಣ ಜೊತೆ ಸೋತ ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಅಂಬರೀಷ್

ಅಭಿಷೇಕ್ ಅಂಬರೀಷ್ ನಾಯಕತ್ವದ ಬ್ಯಾಡ್ ಮ್ಯಾನರ್ಸ್ ಚಿತ್ರವು ಶೂಟಿಂಗ್ ಮುಗಿಸಿ ಪ್ರಮೋಶನ್ ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದಲ್ಲಿ ಅಭಿಷೇಕ್ ಎದುರು ನಾಯಕಿಯಾಗಿ ನಟಿ ರಚಿತಾ ರಾಮ್ ನಟಿಸಿದ್ದಾರೆ. ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ.

Abishek Ambareesh says Good times with this great human for Dattanna srb
Author
First Published Oct 30, 2023, 8:05 PM IST

ನಟ ಅಭಿಷೇಕ್ ಅಂಬರೀಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ 'ಗುಡ್ ಟೈಮ್ ವಿತ್ ಗ್ರೇಟ್ ಹ್ಯೂಮನ್ ದತ್ತಣ್ಣ' ಎಂದು  ವೀಡಿಯೋ ಪೋಸ್ಟ್ ಮಾಡಿದ್ದಾರೆ. ತಮ್ಮ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಪ್ರಮೋಶನ್ ವೇಳೆ ನಟ ಅಭಿಷೇಕ್ ಅಂಬರೀಷ್, ತಮ್ಮ ಹಾಗೂ ಹಿರಿಯ ನಟ ದತ್ತಣ್ಣ ನಡುವೆ 'ತೋಳ್ಬಲ ಪ್ರದರ್ಶನ' ಆಟ ಏರ್ಪಡಿಸಿಕೊಂಡಿದ್ದಾರೆ. ಇದರಲ್ಲಿ ನಟ ದತ್ತಣ್ಣನೇ ಗೆದ್ದಿದ್ದಾರೆ. ಅಭಿಷೇಕ್ ಸೋತಿದ್ದು ಅಲ್ಲದೇ ಬಳಿಕ ದತ್ತಣ್ಣ ಶಕ್ತಿಯಿಂದ ಸಖತ್ ಕೈ ನೋವು ಅನುಭವಿಸಿದ್ದಾರೆ. 

ಅಭಿಷೇಕ್ ಅಂಬರೀಷ್ ನಾಯಕತ್ವದ ಬ್ಯಾಡ್ ಮ್ಯಾನರ್ಸ್ ಚಿತ್ರವು ಶೂಟಿಂಗ್ ಮುಗಿಸಿ ಪ್ರಮೋಶನ್ ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದಲ್ಲಿ ಅಭಿಷೇಕ್ ಎದುರು ನಾಯಕಿಯಾಗಿ ನಟಿ ರಚಿತಾ ರಾಮ್ ನಟಿಸಿದ್ದಾರೆ. ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದಾರೆ. ಬ್ಯಾಡ್ ಮ್ಯಾನರ್ಸ್ ಚಿತ್ರವು ನವೆಂಬರ್ 24 ರಂದು (24 ನವೆಂಬರ್ 2023) ಬಿಡುಗಡೆ ಡೇಟ್‌ ಅನೌನ್ಸ್ ಮಾಡಿದೆ. ಈ ಬ್ಯಾಡ್ ಮ್ಯಾನರ್ಸ್‌ ಚಿತ್ರವು ಬಿಗ್ ಬಜೆಟ್ ಹೊಂದಿದ್ದು ಹಲವು ವಿದೇಶಗಳಲ್ಲಿ ಶೂಟ್ ಆಗಿದೆ. 

ಅಂದಹಾಗೆ, ನಟ ಅಭಿಷೇಕ್ ಅಂಬರೀಷ್ ಅವಿವಾ ಬಿದ್ದಪ್ಪ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನ ನಡೆಸುತ್ತಿರುವುದು ಗೊತ್ತೇ ಇದೆ. ಜತೆಗೆ, ತಮ್ಮ ಸಿನಿಮಾ ವೃತ್ತಿಯನ್ನು ಕೂಡ ಮುಂದುವರಿಸುತ್ತಿದ್ದು ಹಲವಾರು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿರುವ ಬ್ಯಾಡ್ ಮಾನರ್ಸ್ ಬಳಿಕ, ಮತ್ತೊಂದು ಚಿತ್ರದ ಶೂಟಿಂಗ್ ಶುರುವಾಗಲಿದೆ. 

ಮರಳಿ ಬಿಗ್‌ಬಾಸ್ ಮನೆಗೆ ಬಂದ ವರ್ತೂರ್ ಸಂತೋಷ್‌, ಮನೆಯಲ್ಲಿ ಮೂಡಿದ ಹೊಸ ಬೆಳಕು!

ಒಟ್ಟಿನಲ್ಲಿ, ಅಷ್ಟು ಹಿರಿಯ ನಟ ದತ್ತಣ್ಣ ಜತೆ ಶಕ್ತಿ ಪ್ರದರ್ಶನದಲ್ಲಿ ಸೋತರೂ, 'ಬ್ಯಾಡ್ ಮಾನರ್ಸ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದರೂ ನಟ ಅಭಿಷೇಕ್ ಅಂಬರೀಷ್ ಅವರಿಗೆ 'ಗುಡ್ ಮ್ಯಾನರ್ಸ್' ಇದೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು 'ದತ್ತಣ್ಣ ಜತೆ ಸೋತ ಬಳಿಕ ಬಹುಶಃ ನಿಮಗೆ ಸರ್ಜರಿ ಬೇಕಾಗಬಹುದು' ಎಂದು ಕಾಮೆಂಟ್ ಮಾಡಿ ಅಭಿಷೇಕ್ ಕಾಲೆಳೆದಿದ್ದಾರೆ.

ಸಂಗೀತಾ-ಕಾರ್ತಿಕ್ ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ!

Follow Us:
Download App:
  • android
  • ios