ಡೈರೆಕ್ಟರ್ ಹೇಳಿದ್ದಕ್ಕೆ ಸ್ಕೂಟಿನಲ್ಲಿ ಒಟ್ಟಿಗೇ ಹೋಗುತ್ತಿದ್ದಾರೆ ಪಾಪ; ಪುಟ್ಟಕ್ಕನ ಸಂಸಾರಕ್ಕೆ ಇದೆಂಥಾ ಕಾಮೆಂಟ್!
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರೋಮೋ ಭಾರೀ ಕುತೂಹಲ ಕೆರಳಿಸುವಂತಿದೆ. ಅತ್ತೆ-ಸೊಸೆ ಒಂದೇ ಸ್ಕೂಟರಿನಲ್ಲಿ ಹೋಗುತ್ತಿದ್ದಾರೆ. ಅವರಿಬ್ಬರ ಇಂತಹ ಹೊಂದಾಣಿಕೆ ಕಂಡು ಎಷ್ಟೋ ಅತ್ತೆ-ಸೊಸೆಯರು ಅಚ್ಚರಿ ವ್ಯಕ್ತಪಡಿಸುವಂತಾಗಿದೆ. ಪುಟ್ಟಕ್ಕನ ಮಕ್ಕಳು ಎಂದರೆ ಅಪ್ಪಟ ಚಿನ್ನ ಎಂಬ ಮಾತು ಚಾಲ್ತಿಗೆ ಬಂದಿದೆ.

ಪುಟ್ಟಕ್ಕನ ಮಕ್ಕಳು ಸಿರಿಯಲ್ ಟಿಆರ್‌ಪಿ ರೇಸ್‌ನಲ್ಲಿ ಟಾಪ್‌ನಲ್ಲಿದೆ. ಇತ್ತೀಚೆಗೆ ಈ ಸೀರಿಯಲ್ ಟಿಆರ್‌ಪಿ ಮೀರಿಸುವ ಇನ್ನೊಂದು ಸೀರಿಯಲ್ ಬಂದಿಲ್ಲ. ಪುಟ್ಟಕ್ಕನ ಸಂಸಾರದ ಹೊಂದಾಣಿಕೆ ಹೇಗಿದೆ ಎಂದರೆ, ಅವಿಭಕ್ತ ಕುಟುಂಬ ಹೇಗಿರಬೇಕು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಪುಟ್ಟಕ್ಕನ ಮಕ್ಕಳು ಸೀರಿಯಲ್ ಪಾತ್ರಗಳು ಒಂದಕ್ಕೊಂದು ಹೇಗೆ ಹೊಂದಿಕೊಂಡಿವೆ ಎಂದರೆ, ಯಾರಿಗೇ ಸಮಸ್ಯೆ ಎದುರಾದರೂ ಮನೆಯ ಎಲ್ಲರೂ ಸಹಾಯಕ್ಕೆ ಧಾವಿಸಿ ಬರುತ್ತಾರೆ.
ಇದೀಗ ಈ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರೋಮೋ ಭಾರೀ ಕುತೂಹಲ ಕೆರಳಿಸುವಂತಿದೆ. ಅತ್ತೆ-ಸೊಸೆ ಒಂದೇ ಸ್ಕೂಟರಿನಲ್ಲಿ ಹೋಗುತ್ತಿದ್ದಾರೆ. ಅವರಿಬ್ಬರ ಇಂತಹ ಹೊಂದಾಣಿಕೆ ಕಂಡು ಎಷ್ಟೋ ಅತ್ತೆ-ಸೊಸೆಯರು ಅಚ್ಚರಿ ವ್ಯಕ್ತಪಡಿಸುವಂತಾಗಿದೆ. ಪುಟ್ಟಕ್ಕನ ಮಕ್ಕಳು ಎಂದರೆ ಅಪ್ಪಟ ಚಿನ್ನ ಎಂಬ ಮಾತು ಚಾಲ್ತಿಗೆ ಬಂದಿದೆ. ಅಷ್ಟು ಚೆಂದ ಈ ಫ್ಯಾಮಿಲಿ, ಅಷ್ಟು ಒಗ್ಗಟ್ಟು ಈ ಜಾಯಿಂಟ್ ಫ್ಯಾಮಿಲಿಯಲ್ಲಿ ಎಂಬುದು ನಿಜವಾಗಿಯೂ ಮೆಚ್ಚತಕ್ಕ ಅಂಶ.
ಹಾಡುಗಾರ-ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅಕಾಲಿಕ ನಿಧನ
ಪುಟ್ಟಕನ್ನ ಒಬ್ಬ ಮಗ ಈಗಾಗಲೇ ಮನೆ ಬಿಟ್ಟು ದೂರ ಹೋಗಿದ್ದಾನೆ. ಅವನಿಗೆ ದೂರದೂರಿನಲ್ಲಿ ಕೆಲಸ ಸಿಕ್ಕಿದೆ. ಮಗ-ಸೊಸೆಯನ್ನು ಪುಟ್ಟಕ್ಕನೇ ಇಷ್ಟಪಟ್ಟು ಆಶೀರ್ವದಿಸಿ ಕಳಿಸಿಕೊಟ್ಟಿದ್ದಾಳೆ. ದೂರವಿದ್ದವರು ಹತ್ತಿರವಿದ್ದವರು ಎಂಬ ಬೇಧವಿಲ್ಲದೇ ಇಡೀ ಕುಟುಂಬದಲ್ಲಿ ಒಗ್ಗಟ್ಟು ಮನೆಮಾಡಿದೆ. ಪಟ್ಟುಕ್ಕನ ಮಕ್ಕಳು ಸೀರಿಯಲ್‌ನ ಈ ಅಂಶವೇ ನಗರ ಮತ್ತು ಗ್ರಾಮೀಣ ಎರಡೂ ವರ್ಗಗಳ ವೀಕ್ಷಕರನ್ನು ಸೆಳೆಯುತ್ತಿದೆ. ಹೀಗಾಗಿಯೇ ಇದು ಸದ್ಯದ ನಂಬರ್ ಒನ್ ಸೀರಿಯಲ್.
ಬನ್ಸಾಲಿ 'ಬಾಜಿರಾವ್ ಮಸ್ತಾನಿ'ಗೆ ಮೊದಲ ಆಯ್ಕೆ ಬಿಗ್ ಸ್ಟಾರ್, ಬಳಿಕ ದೀಪಿಕಾ ಕಾಲಿಟ್ಟಿದ್ದು ಹೇಗೆ?
ಅಂದಹಾಗೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ಕನ್ನಡದಲ್ಲಿ ಸೋಮವಾರದಿಂದ- ಶನಿವಾರ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. ಹಿರಿಯ ಕಲಾವಿದೆ ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು, ಹಲವಾರು ಪ್ರಬುದ್ಧ ಕಲಾವಿದರ ಬಳಗವನ್ನೇ ಹೊಂದಿದೆ. ಜೀ ಕನ್ನಡದ ಉಳಿದೆಲ್ಲಾ ಧಾರಾವಾಹಿಗಳಿಗಿಂತ ಹೆಚ್ಚಿನ ಕಲಾವಿದರು ಇದರಲ್ಲಿದ್ದು, ಈ ಸೀರಿಯಲ್ ಸಂಚಿಕೆ ಅಥವಾ ಶೂಟಿಂಗ್ ಸ್ಪಾಟ್ ಹಳೆಯ ಕಾಲದ ಅವಿಭಕ್ತ ಕುಟುಂಬವನ್ನು ನೆನಪಿಗೆ ತರುತ್ತದೆ. ಒಟ್ಟಿನಲ್ಲಿ ಸದ್ಯಕ್ಕೆ ಸೀರಿಯಲ್ ಲೋಕದಲ್ಲಿ ಈ ಸೀರಿಯಲ್ ಟಿಆರ್‌ಪಿ ಮೀರಿಸುವ ಮತ್ತೊಂದು ಇಲ್ಲ.
ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ ಕಿತ್ತೋದೋಳು, ಸ್ಪರ್ಧಿಗಳ ಮಾತು ಕೇಳಿ ಸುಸ್ತಾದ್ರಾ ವೀಕ್ಷಕರು!