ಖಾನ್ ಸರ್‌ನೇಮ್ ತೆಗಿಬಾರದೆಂದು ವಾರ್ನಿಂಗ್ ಬಂದಿತ್ತು; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ
ಅರ್ಜಾಬ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಳಿಕ 'ಖಾನ್' ಸರ್‌ನೇಮ್ ತೆಗೆದುಹಾಕಿದ ಬಳಿಕ ಜನರು ನೀಡಿದ ಎಚ್ಚರಿಕೆ ಬಗ್ಗೆ ಮಲೈಕಾ ಅರೋರಾ ಬಹಿರಂಗ ಪಡಿಸಿದ್ದಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾ ವಿಚ್ಛೇದನ ಪಡೆದು ಅನೇಕ ವರ್ಷಗಳೇ ಆಗಿವೆ. ಆದರೂ ಅವರ ವಿಚ್ಛೇದನ ಸುದ್ದಿ ಆಗಾಗ ಸದ್ದು ಮಾಡುತ್ತಲೆ ಇರುತ್ತದೆ. ಸಲ್ಮಾನ್ ಖಾನ್ ಸಹೋದರ, ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದ ಮಲೈಕಾ 18 ವರ್ಷಗಳ ಕಾಲ ಜೊತೆಯಲ್ಲಿ ಸಂಸಾರ ನಡೆಸಿದ್ದರು. 2017ರಲ್ಲಿ ಇಬ್ಬರೂ ಬೇರೆ ಬೇರೆಯಾಗುವ ಮೂಲಕ ಶಾಕ್ ನೀಡಿದರು. ವಿಚ್ಛೇದನ ಬಳಿಕ ಮಲೈಕಾ ಎದುರುಸಿದ ಸಮಸ್ಯೆಗಳ ಬಗ್ಗೆ ಇತ್ತೀಚಿಗಷ್ಟೆ ಸಂದರ್ಶನಗಳಲ್ಲಿ ಬಹಿರಂಗ ಪಡಿಸಿದ್ದರು. ಅರ್ಬಾಜ್ ಖಾನ್ ಅವರಿಂದ ದೂರ ಆದ ಬಳಿಕ ಖಾನ್ ಸರ್‌ನೇಮ್ ನಿಂದ ಎಷ್ಟು ಸಮಸ್ಯೆ ಎದುರಿಸಿದರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ತನ್ನ ಹೆಸರಿನಿಂದ ಖಾನ್ ಸರ್‌ನೇಮ್ ತೆಗೆದುಹಾಕದಂತೆ ಅನೇಕ ಜನರಿಂದ ಎಚ್ಚರಿಕೆ ಕೂಡ ಬಂದಿತ್ತು ಎಂದು ಮಲೈಕಾ ಹೇಳಿದ್ದಾರೆ. ಕೊನೆಯ ಹೆಸರು ಬಹಳಷ್ಟು ತೂಕ ಹೊಂದಿದ್ದರಿಂದ ಅದನ್ನು ತೆಗೆಯಬಾರದು, ತೆಗೆದು ದೊಡ್ಡ ತಪ್ಪು ಮಾಡುತ್ತಿದ್ದಾಳೆ ಎಂದು ಆಡಿಕೊಂಡಿದ್ದ ಬಗ್ಗೆ ಮಲೈಕಾ ಬಿಚ್ಚಿಟ್ಟಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಮಲೈಕಾ ಖಾನ್ ಸರ್ ತೆಗೆದು ಹಾಕಿದ ಬಗ್ಗೆ ಹಂಚಿಕೊಂಡಿದ್ದಾರೆ.
'ಇದು ನನ್ನ ಜೀವನದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ ಆದರೆ ನಾನು ಈ ಪ್ರಸಿದ್ಧ ಸರ್‌ನೇಮ್ ಹೊಂದಿದ್ದೆ ಎಂಬ ಕಾರಣಕ್ಕೆ ವಿಶ್ರಾಂತಿ ಪಡೆಯಬೇಕು ಎಂದು ನಾನು ಭಾವಿಸುವುದಿಲ್ಲ. ನನ್ನ ಜೀವನದಲ್ಲಿ ನಾನು ಮಾಡಲು ಬಯಸಿದ ಎಲ್ಲದಕ್ಕೂ ಸರ್‌ನೇಮ್ ಎಂದು ನಾನು ಭಾವಿಸುವುದಿಲ್ಲ. ಇದರಿಂದ ನನಗೆ ಅನೇಕ ಅವಕಾಶಗಳು ಸಿಕ್ಕಿವೆ. ಆದರೆ ನನ್ನ ಸರ್‌ನೇಮ್ ಅನ್ನು ಲೆಕ್ಕಿಸದೆ ದಿನದ ಕೊನೆಯಲ್ಲಿ ನಾನು ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಉಳಿದುಕೊಳ್ಳಲು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು ಮತ್ತು ನನ್ನ ಜೀವನದ ಪ್ರತಿ ದಿನವೂ ನನ್ನನ್ನು ಸಾಬೀತುಪಡಿಸಬೇಕಾಗಿತ್ತು. ನನ್ನ ಮೊದಲ ಹೆಸರಿಗೆ ವಾಪಾಸ್ ಆದ ಬಳಿಕವೂ ನಾನು ಇನ್ನೂ ಕೆಲಸ ಮಾಡುತ್ತಿದ್ದೀನಿ' ಎಂದು ಹೇಳಿದ್ದಾರೆ.
ನಾನು ತುಂಬಾ ರೊಮ್ಯಾಂಟಿಕ್; ಅರ್ಜುನ್ ಕಪೂರ್ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮಲೈಕಾ
'ನಾನು ನನಗಾಗಿ ನನ್ನ ಕಾಲಮೇಲೆ ನಿಲ್ಲಬೇಕಾಯಿತು. ಕೇವಲ ಸರ್‌ನೇಮ್ ಗಾಗಿ ಮಾತ್ರವಲ್ಲ. ಸರ್ ನೇಮ್ ಕೈಬಿಟ್ಟು ಮತ್ತೆ ಹಳೆ ಹೆಸರಿಗೆ ಮರಳಿದ್ದು ನನಗೆ ನನ್ನ ವ್ಯಕ್ತಿತ್ವ ಗೊತ್ತಾಯಿತು. ಆಗ ನನಗೆ ನಾನು ಜೀವನದಲ್ಲಿ ಏನನ್ನೂ ಮಾಡಬಹುದು ಅಥವಾ ಏನು ಬೇಕಾದರೂ ಮಾಡಬಹುದು ಎಂದು ಅನಿಸಿತು' ಎಂದು ಮಲೈಕಾ ಹೈಳಿದ್ದಾರೆ.
ಖಾನ್ ಕುಟುಂಬಕ್ಕೆ ನಾನು ಮುಖ್ಯ ಅಲ್ಲ, ಮಗನಿಗಾಗಿ ಎಲ್ಲಾ ಮಾಡ್ತಾರೆ; ನಟಿ ಮಲೈಕಾ ಅರೋರಾ
ಸರ್‌ನೇಮ್ ತೆಗೆದು ಹಾಕಿ ದೊಡ್ಡ ತಪ್ಪು ಮಾಡಿದ್ದೀಯಾ ಎಂದು ಅನೇಕರು ತನಗೆ ಹೇಳಿದ್ದರು ಎಂದು ಮಲೈಕಾ ಬಹಿರಂಗ ಪಡಿಸಿದ್ದಾರೆ. 'ಸರ್‌ನೇಮ್ ಕೈಬಿಟ್ಟು ದೊಡ್ಡ ತಪ್ಪು ಮಾಡಿದ್ದೀಯಾ ಎಂದು ನನಗೆ ಬಹಳಷ್ಟು ಜನರು ಹೇಳಿದರು. ಅನೇಕರು ಸರ್‌ನೇಮ್‌ನ ತೂಕ ತಿಳಿದುಕೊಂಡಿಲ್ಲ ಎಂದು ಹೇಳಿದರು' ಎಂದು ಮಲೈಕಾ ಹೇಳಿದ್ದಾರೆ. ಬಳಿಕ ಅರ್ಬಾಜ್ ಖಾನ್ ಕುಟುಂಬದ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ಅರ್ಬಾಜ್ ತಾಯಿಯನ್ನು ತುಂಬಾ ಗೌರವಿಸುತ್ತೇನೆ ಎಂದ ಮಲೈಕಾ ಅವರು ತುಂಬಾ ಪ್ರೀತಿ ನೀಡಿದ್ದಾರೆ ಎಂದಿದ್ದಾರೆ. ಮಗ ಇರುವುದರಿಂದ ತಾನು ಕೂಡ ಆ ಕುಟುಂಬದ ಭಾಗವಾಗಿದ್ದೀನಿ ಎಂದು ಹೇಳಿದರು.