'ಸೆಕ್ಸ್ ಸಿಂಬಲ್' ಎಂದು ಕರೆಯಲ್ಪಡುವ ಬಗ್ಗೆ ಕೊನೆಗೂ ಮೌನ ಮುರಿದ ಮಲೈಕಾ; 'ನನಗೆ ಯಾವುದೇ ತಕರಾರಿಲ್ಲ' ಎಂದ ನಟಿ

'ಸೆಕ್ಸ್ ಸಿಂಬಲ್' ಎಂದು ಕರೆಯುವ ಬಗ್ಗೆ ನಟಿ ಮಲೈಕಾ ಅರೋರಾ ಕೊನೆಗೂ ಮೌನ ಮುರಿದಿದ್ದಾರೆ. ಈ ಹೆಸರಿನ ಬಗ್ಗೆ ತನಗೆ ಯಾವುದೇ ತಕರಾರಿಲ್ಲ ಎಂದು ಹೇಳಿದ್ದಾರೆ. 

Malaika Arora finally breaks silence on called sex symbol and says I like that tag sgk

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ 'ಸೆಕ್ಸ್ ಸಿಂಬಲ್' ಎಂದು ಕರೆಯಲ್ಪಡುವ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.  ಸದಾ ಹಾಟ್ ಮತ್ತು ಮಾದಕ ನೋಟದಿಂದನೇ ಸುದ್ದಿಯಲ್ಲಿರುವ ಮಲೈಕಾ ಅವರನ್ನು ಸೆಕ್ಸ್ ಸಿಂಬಲ್ ಎಂದರೆ ಕರೆಯಲಾಗುತ್ತಿತ್ತು. ಈ ಬಗ್ಗೆ ಮಲೈಕಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.   'ಸೆಕ್ಸ್ ಸಿಂಬಲ್' ಎಂದು ಕರೆಯುವುದು ತನಗೆ ಸಂತೋಷ ಎಂದು ಹೇಳಿದ್ದಾರೆ. ಇದರಿಂದ ಯಾವುದೇ ಹಿಂಜರಿಕೆ ಇಲ್ಲ ಎಂದು ಬಹಿರಂಗ ಪಡಿಸಿದರು. 

'ನಾನು ಸೆಕ್ಸ್ ಸಿಂಬಲ್ ಎಂದು ಕರೆಯುವುದನ್ನು ಇಷ್ಟಪಡುತ್ತೇನೆ. ಸೆಕ್ಸ್ ಸಿಂಬಲ್ ಆಗಿರುವ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪ್ಲೇನ್ ಜೇನ್ (ಸುಂದರವಾಗಿಲ್ಲ) ಎಂದು ಕರೆಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಾನು  ಸೆಕ್ಸ್ ಸಿಂಬಲ್  ಎಂದು ಕರೆಸಿಕೊಳ್ಳುವುದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಆ ಟ್ಯಾಗ್ (ಸೆಕ್ಸ್ ಸಿಂಬಲ್) ಅನ್ನು ಇಷ್ಟಪಡುತ್ತೇನೆ' ಎಂದು ಹೇಳಿದರು. 

'ಕೇವಲ ಸುಂದರ ನೋಟದಿಂದ ಮಾತ್ರ ಉದ್ಯಮದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದಿರುವ ಮಲೈಕಾ ಅರೋರಾ, ಕೇವಲ ತನ್ನ 'ಸುಂದರ ಮುಖ'ದಿಂದ ಮಾತ್ರವಲ್ಲ ಮನರಂಜನಾ ಕ್ಷೇತ್ರದಲ್ಲಿ ಮೂರು ದಶಕಗಳ ನಂತರವೂ ಸಕ್ರೀಯವಾಗಿದ್ದೇನೆ' ಎಂದು ಹೇಳಿದ್ದಾರೆ.

'ನಾನು ಕೆಲವೇ ಹಾಡುಗಳು ಅಥವಾ ಕೆಲವೇ ಐಟಂ ಹಾಡುಗಳಿಗಿಂತ ಹೆಚ್ಚು. ನಾನು ಅವುಗಳಿಗಿಂತ ಹೆಚ್ಚು. ಆರಂಭದಲ್ಲಿ ನೋಡುತ್ತಿದ್ದರು ಅಷ್ಟೆ ಅವಳು ಸುಂದರ ಮುಖ ಹೊಂದಿದ್ದಾಳೆ, ಉತ್ತಮ ದೇಹ, ಅವಳು ತೆರೆಯ ಮೇಲೆ ಅದ್ಭುತವಾಗಿ ಕಾಣುತ್ತಾಳೆ. ಅವಳು ನೃತ್ಯ ಮಾಡುವಾಗ ತುಂಬಾ  ಚೆನ್ನಾಗಿ ಬಳಕುತ್ತಾಳೆ ಹೀಗೆ ಹೇಳುತ್ತಿದ್ದರು. ಆದರೆ 30 ವರ್ಷಗಳಿಂದ ಸಕ್ರೀಯವಾಗಿರುವುದು ಸುಲಭವಲ್ಲ ಎಂದು ನಾನು ಭಾವಿಸುತ್ತೇನೆ.  ಉತ್ತಮ ನೋಟದಿಂದ ಕೆಲವು ಹಂತದವರೆಗೂ ಮಾತ್ರ ಇರಲು ಸಾಧ್ಯ ಆದರೆ ಆ ಸುಂದರ ನೋಟ ಮಸುಕಾಗುತ್ತದೆ. ನೀವು ಆ ನೋಟವನ್ನು ಮೀರಿ ಮುಂದುವರೆಯ ಬೇಕಾಗುತ್ತದೆ' ಎಂದು ಮಲೈಕಾ ಅರೋರಾ ಹೇಳಿದ್ದಾರೆ.

ಅಭದ್ರತೆಯೊಂದಿಗೆ ಪ್ರತಿದಿನವೂ ಬದುಕಬೇಕಾಗುತ್ತದೆ ಎಂದು ಮಲೈಕಾ ಬಹಿರಂಗ ಪಡಿಸಿದರು. ಏಕೆಂದರೆ 'ಒಂಟಿ ತಾಯಿ' ಮತ್ತು 'ವಿಚ್ಛೇದಿತ' ಎಂಬ ಪದಗಳನ್ನು ಹೆಚ್ಚಾಗಿ ಅಪಹಾಸ್ಯ ಮಾಡಲು ಬಳಸಲಾಗುತ್ತದೆ ಎಂದರು. ತನ್ನ ತಲೆಯನ್ನು ನೀರಿನ ಮೇಲೆ ಇಟ್ಟುಕೊಂಡು ಎತ್ತರವಾಗಿ ನಿಲ್ಲುತ್ತೇನೆ ಎಂದು ಮಲೈಕಾ ಹೇಳಿದ್ದಾರೆ.

ಖಾನ್ ಸರ್‌ನೇಮ್ ತೆಗಿಬಾರದೆಂದು ವಾರ್ನಿಂಗ್ ಬಂದಿತ್ತು; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ

ಖಾನ್ ಸರ್‌ನೇಮ್ ಬಗ್ಗೆ ಪ್ರತಿಕ್ರಿಯೆ

ತನ್ನ ಹೆಸರಿನಿಂದ ಖಾನ್ ಸರ್‌ನೇಮ್ ತೆಗೆದುಹಾಕದಂತೆ ಅನೇಕ ಜನರಿಂದ ಎಚ್ಚರಿಕೆ ಕೂಡ ಬಂದಿತ್ತು ಎಂದು ಮಲೈಕಾ ಹೇಳಿದ್ದಾರೆ. ಕೊನೆಯ ಹೆಸರು ಬಹಳಷ್ಟು ತೂಕ ಹೊಂದಿದ್ದರಿಂದ ಅದನ್ನು ತೆಗೆಯಬಾರದು, ತೆಗೆದು ದೊಡ್ಡ ತಪ್ಪು ಮಾಡುತ್ತಿದ್ದಾಳೆ ಎಂದು ಅನೇಕರು ಆಡಿಕೊಂಡಿದ್ದರು ಎಂದು ಮಲೈಕಾ ಹೇಳಿದರು. ಸಂದರ್ಶನದಲ್ಲಿ ಮಾತನಾಡಿದ ಮಲೈಕಾ ಖಾನ್ ಸರ್ ತೆಗೆದು ಹಾಕಿದ ಬಗ್ಗೆ ಹಂಚಿಕೊಂಡಿದ್ದಾರೆ. 

ಅರ್ಬಾಜ್ ಖಾನ್‌ ಜೊತೆ ವಿಚ್ಛೇದನದ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಹಾಟ್ ನಟಿ ಮಲೈಕಾ ಅರೋರಾ

ಅರ್ಬಾಜ್ ಖಾನ್‌ಗೆ ವಿಚ್ಛೇದನ, ಅರ್ಜುನ್ ಜೊತೆ ಡೇಟಿಂಗ್

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ವಿಚ್ಛೇದನ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. 

 

Latest Videos
Follow Us:
Download App:
  • android
  • ios