Asianet Suvarna News Asianet Suvarna News

ನನ್ನ ಕಷ್ಟಕ್ಕೆ ಅಮೃತಾ ಜೊತೆಯಾಗಿಲ್ಲ; ಸಹೋದರಿ ವಿರುದ್ಧ ಬೇಸರ ಹೊರಹಾಕಿದ ಮಲೈಕಾ ಅರೋರಾ

ತನ್ನ ಕಷ್ಟದ ಕಾಲದಲ್ಲಿ ಸಹೋದರಿ ಅಮೃತಾ ಅರೋರಾ ಜೊತೆಯಲ್ಲಿ ನಿಂತಿಲ್ಲ ಎಂದು ಮಲೈಕಾ ಅರೋರಾ ಬೇಸರ ವ್ಯಕ್ತಪಡಿಸಿದ್ದಾರೆ. 

Malaika Arora says sister Amrita Arora was not there for her during her lowest phase sgk
Author
First Published Dec 31, 2022, 3:05 PM IST

ಬಾಲಿವುಡ್ ನಟಿ ಮಲೈಕಾ ಅರೋರಾ ಸದ್ಯ ಒಟಿಟಿಯಲ್ಲಿ ಬ್ಯುಸಿಯಾಗಿದ್ದಾರೆ. ಮೂವಿಂಗ್ ಇನ್ ವಿತ್ ಮಲೈಕಾ' ಶೋ ಮೂಲಕ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋ ಮೂಲಕ ಅನೇಕ ವಿಚಾರಗಳನ್ನು ಮಲೈಕಾ ರಿವೀಲ್ ಮಾಡಿದ್ದಾರೆ. ವಿಚ್ಛೇದನ, ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಸೇರಿದಂತೆ ಮಲೈಕಾ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ವರ್ಷದ ಕೊನೆಯಲ್ಲಿ ಮಲೈಕಾ ತನ್ನ ಸಹೋದರಿ ಅಮೃತಾ ಅರೋರಾ ಜೊತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇಬ್ಬರು ಒಟ್ಟಿಗೆ ಎಂಟ್ರಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ಮಲೈಕಾ ಇತ್ತೀಚಿಗಷ್ಟೆ ನೃತ್ಯ ನಿರ್ದೇಶಕಿ ಮತ್ತು ನಿರ್ದೇಶಕಿ ಫರ್ಹಾ ಖಾನ್ ಜೊತೆ ಸಂದರ್ಶನದಲ್ಲಿ ಸಹೋದರಿ ಬಗ್ಗೆ ಮಾತನಾಡಿದ್ದರು. ತನ್ನ ಕಷ್ಟದ ಸಮಯದಲ್ಲಿ ಸಹೋದರಿ ಜೊತೆ ನಿಂತಿಲ್ಲ ಎಂದು ಹೇಳಿದ್ದರು. ಇದೀಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ವಿಚ್ಛೇದನದ ಸಮಯದಲ್ಲಿ ಸಹೋದರಿ ಅಮೃತಾ ಅರೋರಾ ಜೊತೆಯಲ್ಲಿ ಇರಲಿಲ್ಲ, ಧೈರ್ಯ ಹೇಳಿಲ್ಲ ಎಂದು ಮಲೈಕಾ ಅರೋರಾ ಬೇಸರ ಹಂಚಿಕೊಂಡಿದ್ದರು. 'ನಾನೇ ಮೂವ್ ಆನ್ ಆದಾಗ, ವಿಚ್ಛೇದನ ಪಡೆದಾಗ ನನ್ನ ಜೀವನದ ಅತ್ಯಂತ ಕಷ್ಟದ ಸಮಯವಾಗಿತ್ತು. ವೈಯಕ್ತಿಕವಾಗಿ ಮತ್ತು ಭಾವನಾತ್ಮಕ ತುಂಬಾ ಕಷ್ಟವಾಗಿತ್ತು. ಆಗ ನಿನ್ನ ಅವಶ್ಯಕತೆ ತುಂಬಾ ಇತ್ತು. ನನಗೆ ನೀನು ನನ್ನ ತಂಗಿಯಾಗಿ ಬೇಕಿತ್ತು. ನನಗೆ ಆಗ ಯಾವುದೇ ಜಡ್ಜ್ ಮೆಂಟ್, ಸಮಾಲೋಚನೆಗಳು ಅಗತ್ಯವಿರಲಿಲ್ಲ. ನನಗೆ ನಿನ್ನ ಬೆಂಬಲ ಬೇಕಿತ್ತು, ನನ್ನ ಪಕ್ಕದಲ್ಲಿ ನೀನು ಇರಬೇಕಿತ್ತು. ಮಲ್ಲಾ ಚಿಂತಿಸಬೇಡ, ನಾನು ನಿನ್ನ ಜೊತೆ ಇದ್ದೀನಿ, ಇಲ್ಲೇ ಇರುತ್ತೀನಿ ಎಂದು ಹೇಳಬೇಕಿತ್ತು. ಆದರೆ ನೀನು ನನ್ನ ಜೊತೆ ಇರಲಿಲ್ಲ, ನಿನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಗೋವಾಗೆ ಹೋದೆ' ಎಂದು ಹೇಳಿದ್ದಾರೆ. 

ಬ್ಲ್ಯಾಕ್ ಅಂಡ್ ವೈಟ್‌ನಲ್ಲಿ ಮಲೈಕಾ ಮಾದಕ ನೋಟ; ಫೋಟೋ ವೈರಲ್

ಮಲೈಕಾ ಅರೋರಾ ಅವರ ಮಾತುಗಳು ಸಹೋದರಿ ಅಮೃತಾ ಅರೋರಾ ಶಾಕ್ ಆದರು. ಮಲೈಕಾ ಇಷ್ಟು ವರ್ಷಗಳ ಕಾಲ ತನ್ನ ವಿರುದ್ಧ ಈ ದ್ವೇಷವನ್ನು ಹೊಂದಿದ್ದರು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರ. 'ನಾವು ಬಹುಶಃ ಬಹಳಷ್ಟು ಮಾತನಾಡಬೇಕಾಗಿದೆ' ಎಂದು ಹೇಳಿದರು. ತನ್ನ ಸಹೋದರಿ ಬಗ್ಗೆ ಅಸಮಾಧಾನ ಹೊರಹಾಕಿದ ಬಳಿಕ ಮಲೈಕಾ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ.  ಮಗಳು, ಸ್ನೇಹಿತೆ ಹಾಗೂ ಹೆಂಡತಿಯಾಗಿ ಅಮೃತಾ ಅದ್ಭುತ ಎಂದು ಮಲೈಕಾ ಹೇಳಿದರು. 

ಅದೇ ಶೋನಲ್ಲಿ ಮಲೈಕಾ, ಖಾನ್ ಕುಟುಂಬದ ಬಗ್ಗೆ ಮಾತನಾಡಿದ್ದರು. 'ಅವರ ಲಿಸ್ಟ್‌ನಲ್ಲಿ ನಾನು ನಂಬರ್ ಒನ್ ವ್ಯಕ್ತಿಯಾಗಿಲ್ಲದಿರಬಹುದು ಆದರೆ ಅರ್ಹಾನ್ ಇರುವುದರಿಂದ ಅವರು ಎಲ್ಲವನ್ನೂ ಮಾಡುತ್ತಾರೆ' ಎಂದು ಹೇಳಿದ್ದರು.

ಖಾನ್ ಕುಟುಂಬಕ್ಕೆ ನಾನು ಮುಖ್ಯ ಅಲ್ಲ, ಮಗನಿಗಾಗಿ ಎಲ್ಲಾ ಮಾಡ್ತಾರೆ; ನಟಿ ಮಲೈಕಾ ಅರೋರಾ

1998ರಲ್ಲಿ ಮದುವೆ 2017ರಲ್ಲಿ ವಿಚ್ಛೇದನ 

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದಿರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ಮಲೈಕಾ ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಮತ್ತೊಂದೆಡೆ ಅರ್ಬಾಜ್ ಖಾನ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಬಾಜ್ ಆಗಲಿ ಅಧಿಕೃತವಾಗಿ ಎಲ್ಲಿಯೂ ಕೇಳಿಕೊಂಡಿಲ್ಲ. 
 

Follow Us:
Download App:
  • android
  • ios