ಖಾನ್ ಕುಟುಂಬಕ್ಕೆ ನಾನು ಮುಖ್ಯ ಅಲ್ಲ, ಮಗನಿಗಾಗಿ ಎಲ್ಲಾ ಮಾಡ್ತಾರೆ; ನಟಿ ಮಲೈಕಾ ಅರೋರಾ

ಮಾಜಿ ಪತಿ ಅರ್ಬಾಜ್ ಖಾನ್ ಕುಟುಂಬಕ್ಕೆ ನಾನು ನಂಬರ್ 1 ವ್ಯಕ್ತಿ ಅಲ್ಲ ಎಂದು ಮಲೈಕಾ ಅರೋರಾ ಹೇಳಿದ್ದಾರೆ. 

Malaika Arora says she is not number one for Arbaaz Khan's family sgk

ಬಾಲಿವುಡ್ ಹಾಟ್ ನಟಿ, ಡಾನ್ಸರ್ ಮಲೈಕಾ ಅರೋರಾ ಹೊಸ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.  'ಮೂವಿಂಗ್ ಇನ್ ವಿತ್ ಮಲೈಕಾ' ಶೋ ಮೂಲಕ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ ಅರ್ಬಾಜ್ ಖಾನ್ ಮಾಜಿ ಪತ್ನಿ. ಈ ಶೋ ಮೂಲಕ ಮಲೈಕಾ ಅನೇಕ ವಿಚಾಗಳನ್ನು ಬಹಿರಂದ ಪಡಿಸಿದ್ದಾರೆ. ಮಾದಲ ಪತಿ ಅರ್ಬಾಜ್ ಖಾನ್ ಜೊತೆಗಿನ ವಿಚ್ಛೇದನ, ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಲೈಕಾ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕವೂ ಅರ್ಬಾಜ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದಾಗಿ ಹೇಳಿರುವ ಮಲೈಕಾ ಇದೀಗ ಅವರು ಮಗನಿಗಾಗಿ ಎಲ್ಲಾ ಮಾಡ್ತಿದ್ದಾರೆ ಎಂದು ಎಂದಿದ್ದಾರೆ. ಕರಣ್ ಜೋಹರ್ ಜೊತೆ ನಡೆಸಿದ ಸಂವಾದದಲ್ಲಿ ಮಲೈಕಾ, 'ಅರ್ಬಾಜ್ ಕುಟುಂಬಕ್ಕೆ ನಾನು ಮುಖ್ಯ ಅಲ್ಲದೆ ಇರಬಹುದು ಅದರೆ ಅವರು ಮಗನಿಗಾಗಿ ಎಲ್ಲಾ ಮಾಡ್ತಿದ್ದಾರೆ' ಎಂದು ಹೇಳಿದ್ದಾರೆ. 

ಮಲೈಕಾ ಶೋಗೆ ಬಂದಿದ್ದ ಕರಣ್ ಜೋಹರ್ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದರು. ಇತ್ತೀಚಿಗಷ್ಟೆ ಅಕ್ಸಿಡೆಂಟ್ ಮಾಡಿಕೊಂಡಿದ್ದ ಬಗ್ಗೆ ಮಲೈಕಾಗೆ ಪ್ರಶ್ನೆ ಮಾಡಿದರು ಕರಣ್. 'ನಿಮ್ಮ ಅಪಘಾತದ ನಂತರ ಇಡೀ ಕುಟುಂಬವನ್ನು ನಾನು ನೋಡಿದೆ. ಅಂದರೆ ಅವರೂ (ಅರ್ಬಾಜ್) ಕೂಡ ಅಲ್ಲಿದ್ದರು. ಕೆಲವು ಬೇರುಗಳು ಶಾಶ್ವತವಾಗಿವೆ' ಎಂದು ಹೇಳಿದರು. ಕರಣ್ ಮಾತಿಗೆ ಪ್ರತಿಕ್ರಿಯೆ ನೀಡಿದ ಮಲೈಕಾ ಅವರ ಕುಟುಂಬದಲ್ಲಿ ನನಗೆ ಹೆಚ್ಚು ಪ್ರಮುಖ್ಯತೆ ಇಲ್ಲ ಎನ್ನುವ ಹಾಗೆ ಮಾತನಾಡಿದರು. 

ನಾನು ತುಂಬಾ ರೊಮ್ಯಾಂಟಿಕ್; ಅರ್ಜುನ್ ಕಪೂರ್ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮಲೈಕಾ

'ಅವರ ಲಿಸ್ಟ್‌ನಲ್ಲಿ ನಾನು ನಂಬರ್ ಒನ್ ವ್ಯಕ್ತಿಯಾಗಿಲ್ಲದಿರಬಹುದು ಆದರೆ ಅರ್ಹಾನ್ ಇರುವುದರಿಂದ ಅವರು ಎಲ್ಲವನ್ನೂ ಮಾಡುತ್ತಾರೆ' ಎಂದು ಹೇಳಿದರು. ಈ ವರ್ಷ ಏಪ್ರಿಲ್ ‌ನಲ್ಲಿ ಮಲೈಕಾ ಕಾರು ಅಪಘಾತಕ್ಕಿಡಾಗಿತ್ತು. ಪುಣೆಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿತ್ತು. ಪ್ರಾಣಪಾಯದಿಂದ ಪಾರಾಗಿದ್ದ ಮಲೈಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ವೇಳೆ ಇದ್ದಂದ ಕೆಲವು ವ್ಯಕ್ತಿಗಳಲ್ಲಿ ಮಾಜಿ ಪತಿ ಅರ್ಬಾಜ್ ಕೂಡ ಇದ್ದರೂ ಎಂದು ಮಲೈಕಾ ಹೇಳಿದ್ದರು. 

ನಾನು ವಾಹನದ ಚಕ್ರದಿಂದ ಹೊರಬಂದಾಗ ನೋಡಿದ ಮೊದಲ ಮುಖಗಳಲ್ಲಿ ಅರ್ಬಾಜ್ ಕೂಡ ಒಬ್ಬರು. ಆ ಕ್ಷಣ ಅವನು ನನ್ನನ್ನು ಕೇಳುತ್ತಲೇ ಇದ್ದರು ನಿನಗೆ ನೋಡಲು ಆಗುತ್ತಾ? ಎಷ್ಟು ಸಂಖ್ಯೆಗಳು? ಎಷ್ಟು ಬೆರಳುಗಳು?' ಎಂದು. ನಾನು ಅವರು ಯಾಕೆ ಇದನ್ನೆಲ್ಲಾ ಕೇಳುತ್ತಿದ್ದಾರೆ? ಅಂತ ತುಂಬಾ ಅಚ್ಚರಿ ಪಟ್ಟಿದ್ದೆ. ಒಂದು ಸೆಕೆಂಡ್‌ಗೆ ನಾನು 'ನಾನು ಹಿಂದೆ ಹೋಗಿದ್ದೆ? ಏನೇ ಆದರು ಅವರು ಜೊತೆಯಲ್ಲೇ ಇರುತ್ತಾರೆ ಎಂದು ಹೇಳಿದರು' ಎಂದು ಮಲೈಕಾ ಹಳೆಯ ಘಟನೆ ನೆನಪಿಸಿಕೊಂಡಿದ್ದರು. 

ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ಮಲೈಕಾ

1998ರಲ್ಲಿ ಮದುವೆ 2017ರಲ್ಲಿ ವಿಚ್ಛೇದನ 

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದಿರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ಮಲೈಕಾ ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಮತ್ತೊಂದೆಡೆ ಅರ್ಬಾಜ್ ಖಾನ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಬಾಜ್ ಆಗಲಿ ಅಧಿಕೃತವಾಗಿ ಎಲ್ಲಿಯೂ ಕೇಳಿಕೊಂಡಿಲ್ಲ. 

 

Latest Videos
Follow Us:
Download App:
  • android
  • ios