ಬ್ಲ್ಯಾಕ್ ಅಂಡ್ ವೈಟ್ನಲ್ಲಿ ಮಲೈಕಾ ಮಾದಕ ನೋಟ; ಫೋಟೋ ವೈರಲ್
ಬಾಲಿವುಡ್ ನಟಿ, ಹಾಟ್ ಬ್ಯೂಟಿ ಮಲೈಕಾ ಅರೋರಾ ಬ್ಲ್ಯಾಕ್ ಅಂಡ್ ವೈಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಸದ್ಯ ಒಟಿಟಿಯಲ್ಲಿ ಬ್ಯುಸಿಯಾಗಿದ್ದಾರೆ. ಮೂವಿಂಗ್ ಇನ್ ವಿತ್ ಮಲೈಕಾ' ಶೋ ಮೂಲಕ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋ ಮೂಲಕ ಅನೇಕ ವಿಚಾರಗಳನ್ನು ಮಲೈಕಾ ರಿವೀಲ್ ಮಾಡಿದ್ದಾರೆ. ವಿಚ್ಛೇದನ, ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಸೇರಿದಂತೆ ಮಲೈಕಾ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು.
ಕಳೆದ ಕೆಲವು ದಿನಗಳಿಂದ ಮಲೈಕಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ ಮಲೈಕಾ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಜ ಮೂಲಕ ಸುದ್ದಿಯಲ್ಲಿರುತ್ತಾರೆ. ತರಹೇವಾರಿ ಫೋಟೋಸೂಟ್ ಮೂಲಕ ಮಿಂಚುತ್ತಿರುತ್ತಾರೆ.
ಮಲೈಕಾ ಸದ್ಯ ಶೇರ್ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಸಿವೆ. ಅಂದಹಾಗೆ ಮಲೈಕಾ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ನಲ್ಲಿ ಮಾದಕತೆ ಹೆಚ್ಚಿಸಿರುವ ಮಲೈಕಾ ಫೋಟೋಗಳು ಪಡ್ಡೆ ಯುವಕರ ನಿದ್ದೆಗೆಡಿಸಿವೆ.
ಮಿನಿ ಡ್ರೆಸ್ ಧರಿಸಿರುವ ಮಲೈಕಾ ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ್ದಾರೆ. ಮಲೈಕಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. ಮಲೈಕಾ ಫೋಟೋಗಳನ್ನು ಶೇರ್ ಮಾಡಿ, ಬ್ಲ್ಯಾಕ್ ಅಂಡ್ ವೈಟ್ ಯಾವಾಗಲೂ ಕಲರ್ಫಲ್ ಅಲ್ಲ ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೆ ಮಲೈಕಾ ಧರಿಸಿದ್ದ ಬಟ್ಟೆಯ ಬಗ್ಗೆ ಮಗ ಅರ್ಹಾನ್ ಟ್ರೋಲ್ ಮಾಡಿದ್ದರು. ಮಲೈಕಾ ಅರೋರಾ ಅವರ 20 ವರ್ಷದ ಮಗ ಅರ್ಹಾನ್ ಖಾನ್ ಇತ್ತೀಚೆಗೆ ತನ್ನ ತಾಯಿಯ ವೆಬ್ ಶೋ 'ಮೂವಿಂಗ್ ಇನ್ ವಿತ್ ಮಲೈಕಾ'ದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ತಾಯಿಯ ಡ್ರೆಸ್ ಅನ್ನು ಗೇಲಿ ಮಾಡಿದ್ದರು.
ಸಂಚಿಕೆಯಲ್ಲಿ, ಮಲೈಕಾ ಕಪ್ಪು ಮತ್ತು ಬಿಳಿ ಪಟ್ಟೆಯುಳ್ಳ ತೋಳುಗಳಿಲ್ಲದ ಮತ್ತು ಬೀಜ್ ಪ್ಯಾಂಟ್ನೊಂದಿಗೆ ಕ್ರಾಪ್ ಟಾಪ್ ಅನ್ನು ತೊಟ್ಟಿದ್ದರು. ಮಲೈಕಾ ಅವರ ಮಗ ಅರ್ಹಾನ್ ಅವರ ಟಾಪ್ ಅನ್ನು ಸಾರ್ವಜನಿಕವಾಗಿ ಗೇಲಿ ಮಾಡಿದರು. ಟೇಬಲ್ ನ್ಯಾಪ್ಕಿನ್ಗೆ ಹೋಲಿಸಿದ್ದರು.