ಅರ್ಜುನ್​ ಕಪೂರ್​ ಬ್ರೇಕಪ್​ ಸುದ್ದಿ ಬೆನ್ನಲ್ಲೇ ಮಾಜಿ ಪತಿಯ ಲವ್​ ಸ್ಟೋರಿ ನೆನಪಿಸಿಕೊಂಡ ಮಲೈಕಾ! ​

ಅರ್ಜುನ್​ ಕಪೂರ್​ ಜೊತೆ ಮಲೈಕಾ ಅರೋರಾ ಬ್ರೇಕಪ್​ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಮಾಜಿ ಪತಿ ಅರ್ಬಾಜ್ ಖಾನ್​ ಅವರ ಪ್ರೇಮ ನಿವೇದನೆಯನ್ನು ನೆನಪಿಸಿಕೊಂಡಿದ್ದಾರೆ ಮಲೈಕಾ! ​

Malaika Arora Revealed Arbaaz Khan Proposed With Huge Diamond Ring suc

ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್​ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್​ಕೇರ್​ ಎನ್ನದೇ  ಜೀವನ ನಡೆಸುತ್ತಿದ್ದಾರೆ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್​ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ  ಟ್ರಿಪ್​ಗೆ ಹೋಗುತ್ತಿದ್ದ ಅರ್ಜುನ್​ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿದೆ. 

ಇದು ನಿಜನೋ ಸುಳ್ಳೋ ಗೊತ್ತಿಲ್ಲ. ಆದರೆ ಈ ಸುದ್ದಿಯ ಬೆನ್ನಲ್ಲೇ, ಇದೀಗ ಮಲೈಕಾ, ತಮ್ಮ ವಿಚ್ಛೇದಿತ ಪತಿ ಅರ್ಬಾಜ್‌ ಖಾನ್‌, ಪ್ರೇಮ ನಿವೇದನೆ ಮಾಡಿಕೊಂಡ ದಿನಗಳ ಕುರಿತು ಮಾತನಾಡಿದ್ದಾರೆ. ತಾವು ಅರ್ಬಾಜ್‌ ಅವರ ಪ್ರೇಮದಲ್ಲಿ ಹೇಗೆ ಸಿಲುಕಿದ್ದು ಎನ್ನುವ ಕುರಿತು ತಿಳಿಸಿದ್ದಾರೆ. ಅರ್ಬಾಜ್‌ ಖಾನ್‌ ತಮ್ಮ ಹುಟ್ಟುಹಬ್ಬದ ದಿನವೇ  ವಜ್ರದ ಉಂಗುರ ಹಾಕಿ ಪ್ರಪೋಸ್‌ ಮಾಡಿದ ಕ್ಷಣ ಇಂದಿಗೂ ಕಣ್ಣಮುಂದೆಯೇ ಇದೆ ಎಂದಿದ್ದಾರೆ. ಕುತೂಹಲದ ವಿಷಯವೆಂದರೆ, ಹೀಗೆ ಪ್ರಪೋಸ್‌ ಮಾಡಿದ ಸಂದರ್ಭದಲ್ಲಿ ಅರ್ಬಾಜ್‌ ಖಾನ್‌ (Arbaz Khan) ವಿಪರೀತ ಜ್ವರದಿಂದ ಬಳಲುತ್ತಿದ್ದಂತೆ. ಈ ಕುರಿತು ಹೇಳಿಕೊಂಡಿರುವ ಮಲೈಕಾ, "ನನ್ನ ಮತ್ತು ಅರ್ಬಾಜ್‌ ನಡುವೆ ಪ್ರೇಮಾಂಕುರವಾದದ್ದು ಕಾಫಿ ಬ್ರಾಂಡ್‌ ಶೂಟಿಂಗ್‌ ವೇಳೆ. ಅಲ್ಲಿಂದಲೇ ಅನ್ಯೋನ್ಯತೆ ಶುರುವಾಗಿತ್ತು.  ನಾವಿಬ್ಬರೂ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು,  ಫೋನ್‌ ಕಾಲ್‌ನಲ್ಲಿಯೂ  ಮಾತನಾಡುತ್ತಿದ್ದೆವು. ನಿಧಾನಕ್ಕೆ ಇಬ್ಬರಲ್ಲೂ ಒಂದು ಹೊಸ ಭಾವ ಮೂಡಲಾರಂಭಿಸಿತು ಎಂದಿದ್ದಾರೆ ಮಲೈಕಾ.

ಮಲೈಕಾ- ಅರ್ಜುನ್​ ನೈಟ್​ ಔಟ್​: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!

ತಮ್ಮ ಹುಟ್ಟುಹಬ್ಬದ ದಿನ  ಅರ್ಬಾಜ್‌ ಮನೆಗೆ ಹೋಗಿದ್ದನ್ನು ನೆನಪಿಸಿಕೊಂಡ ಅವರು, ಅಂದು ಅರ್ಬಾಜ್‌ಗೆ ವಿಪರೀತ ಜ್ವರ ಬಂದು ಹಾಸಿಗೆ ಹಿಡಿದಿದ್ದ. ಆ ಜ್ವರದಲ್ಲಿಯೇ (High Fever) ನನಗೆ ಹುಟ್ಟುಹಬ್ಬದ ವಿಷ್‌ ಮಾಡಿದ. ಕೈ ಹಿಡಿದಾಗ ತಾಪ ವಿಪರೀತಕ್ಕೆ ಏರಿತ್ತು. ಇದರ ನಡುವೆಯೇ  ನನ್ನ ಕೈ ಬೆರಳು ಹಿಡಿದು, ವಜ್ರದ ಉಂಗುರು ತೊಡಿಸಿ ಮದುವೆ ಆಗುವೆಯಾ ಎಂದು ಪ್ರಪೋಸ್‌ ಮಾಡಿದ್ದ. ಆ ಕ್ಷಣ ನನ್ನ ಪಾಲಿಗೆ ತುಂಬ ವಿಶೇಷವಾಗಿತ್ತು. ಇಂದಿಗೂ ನಾನು ಆ ಕ್ಷಣವನ್ನು ಮೆಲುಕು ಹಾಕುತ್ತಿರುತ್ತೇನೆ ಎಂದಿದ್ದಾರೆ. 

ಅಂದಹಾಗೆ,  ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಒಟ್ಟಿಗೇ ಮೊದಲಿಗೆ ನಟಿಸಿದ್ದ  ಕಾಫಿ ಬ್ರಾಂಡ್ ಜಾಹೀರಾತು ಸಾಕಷ್ಟು ಬೋಲ್ಡ್ ಆಗಿತ್ತು. ಆದ್ದರಿಂದ ಜಾಹೀರಾತು  ವಿವಾದಕ್ಕೀಡಾಗಿತ್ತು. ಆದರೆ, ಈ ಜೋಡಿ ಪ್ರೀತಿಯಲ್ಲಿ ಬಿದ್ದವು. ಇದಾದ ನಂತರ ಇಬ್ಬರೂ ಜೊತೆಯಾಗಿ ಹಲವು ಪ್ರಾಜೆಕ್ಟ್ ಗಳನ್ನು (project) ಮಾಡಿದ್ದು,  5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಪ್ರೇಮ ನಿವೇದನೆ ಎಲ್ಲಾ ಆದ ಬಳಿಕ  1998 ರಲ್ಲಿ ಮದುವೆಯಾಗಿದ್ದು, ಅವರಿಗೆ ಮಗ ಕೂಡ ಇದ್ದಾನೆ. ಈಗ ಅರ್ಜುನ್‌ ಕಪೂರ್‌ ಜೊತೆ ಲಿವ್‌ ಇನ್‌ ಸಂಬಂಧದಲ್ಲಿದ್ದಾರೆ ಮಲೈಕಾ.

ಮಲೈಕಾ ಅರೋರಾ ಜೊತೆ ಮದುವೆ ಮುರಿದುಕೊಂಡಿದ್ಯಾಕೆ, ಅರ್ಬಾಜ್​ ಖಾನ್​ ಹೇಳಿದ್ದಿಷ್ಟು!

Latest Videos
Follow Us:
Download App:
  • android
  • ios