ಮಲೈಕಾ- ಅರ್ಜುನ್​ ನೈಟ್​ ಔಟ್​: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!

 ಮಲೈಕಾ ಅರೋರಾ  ಮತ್ತು ಅರ್ಜುನ್ ಕಪೂರ್ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ಬಾರಿಯೂ ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ಈ ಜೋಡಿ ನೋಡಿ ನೆಟ್ಟಿಗರು ಹೇಳಿದ್ದೇನು?
 

Malaika Arora and Arjun Kapoor nightout trolled by netizens suc

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಫೇರ್ ಎಲ್ಲರಿಗೂ ತಿಳಿದದ್ದೇ. ಮಲೈಕಾಗೆ 49 ವರ್ಷ ವಯಸ್ಸಾಗಿದ್ದರೆ, ಅರ್ಜುನ್​ ಅವರಿಗಿಂತ 12 ವರ್ಷ ಚಿಕ್ಕವರು. ವಯಸ್ಸು 49 ಆದರೂ ಫಿಟ್​ನೆಸ್​ (Fitness) ಕಾಪಾಡಿಕೊಂಡಿರುವ ನಟಿ ಮಲೈಕಾ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ.  ಅದರಿಂದಲೇ  ಇನ್ನಷ್ಟು ಫೇಮಸ್​ ಆಗುತ್ತಿರುವವರು ನಟಿ ಮಲೈಕಾ. ವಯಸ್ಸಾದರೂ  ದೇಹವನ್ನು ಫಿಟ್​ ಆಗಿಟ್ಟುಕೊಂಡು ಯುವತಿಯಂತೆಯೇ ಮಿಂಚುತ್ತಿದ್ದಾರೆ ಮಲೈಕಾ.  ಸಿನಿ ತಾರೆಯರು ಸದಾ ವ್ಯಾಯಾಮ, ಯೋಗ, ಡಯೆಟ್​ (Diet) ಎನ್ನುತ್ತಾ ತಮ್ಮ ದೇಹವನ್ನು ಸುಂದರವಾಗಿಟ್ಟುಕೊಳ್ಳುವುದು ಹೊಸ ವಿಷಯವಲ್ಲ. ಅದರಂತೆಯೇ ಮಲೈಕಾ ಕೂಡ  ದೇಹಕ್ಕೆ ಅಗತ್ಯವಾಗಿ ಬೇಕಾದ ಯೋಗ, ವ್ಯಾಯಾಮ ಮಾಡುತ್ತಾ ಶರೀರವನ್ನು ಫಿಟ್​ ಆಗಿ ಇರಿಸಿಕೊಳ್ಳುತ್ತಾರೆ.  ಡಯೆಟ್​ ಆಹಾರದ ಜೊತೆ ನಿಯಮಿತ ವ್ಯಾಯಾಮ ಮತ್ತು ಯೋಗ (Yoga) ಮಾಡುವ ಮೂಲಕ ಮಲೈಕಾ  ಅಷ್ಟೊಂದು ವಯಸ್ಸಾದಂತೆ ಕಾಣುತ್ತಿಲ್ಲ.  ಇದೀಗ ಅರ್ಧ ಸೆಂಚುರಿ ಹತ್ತಿರ ವಯಸ್ಸಾಗಿದ್ದರೂ ಇದೇ ಕಾರಣಕ್ಕೆ ಇದೀಗ ಮದುಮಗಳಾಗಲು ಈಕೆ ರೆಡಿಯಾಗಿದ್ದಾರೆ ಎನ್ನಲಾಗಿತ್ತು. 

ಅರ್ಬಾಜ್​ ಖಾನ್​ ಅವರಿಗೆ ಡಿವೋರ್ಸ್​ ಕೊಟ್ಟು ನಟ ಅರ್ಜುನ್​ ಕಪೂರ್​ ಜೊತೆ ಬಹಳ ವರ್ಷಗಳಿಂದ ಡೇಟಿಂಗ್​ನಲ್ಲಿದ್ದಾರೆ ಮಲೈಕಾ (Malaika Arora). ಇವರಿಬ್ಬರ ಡೇಟಿಂಗ್​ ವಿಷಯ ಬಿಗ್​-ಟೌನ್​ನಲ್ಲಿ ಬಹಳ ಹಳತಾಗಿದ್ದಾಗಿದೆ. ಮಾಜಿ ಪತಿಯ ಜೊತೆ ಮಧುರ ಸ್ನೇಹವನ್ನು ಇಟ್ಟುಕೊಂಡು, ನಟ ಅರ್ಜುನ್​ ಕಪೂರ್​ ಜೊತೆ ಬಹಳ ವರ್ಷಗಳಿಂದ ಡೇಟಿಂಗ್​ನಲ್ಲಿರುವ ನಟಿ ಮಲೈಕಾ ತಮ್ಮಿಬ್ಬರ ಸಂಬಂಧದ ಕುರಿತು  ಕೆಲ ದಿನಗಳ ಹಿಂದೆ  ಮುಕ್ತವಾಗಿ ಮಾತನಾಡಿದ್ದರು. ನಾವು ಮದುವೆಯಾಗದಿದ್ದರೇನು,  ಪ್ರೀ ಹನಿಮೂನ್ ಹಂತವನ್ನು ಅನಭವಿಸುತ್ತಿದ್ದೇವೆ ಎಂದಿದ್ದರು. ಅರ್ಜುನ್​ ಕಪೂರ್​ ಜೊತೆ ಮದುವೆ ಆಗುವುದಿಲ್ಲವೆ ಎಂದು ಕೇಳಿದಾಗ, ಮದುವೆ ಯಾಕೆ? ಪ್ರೀ ಹನಿಮೂನ್​ ಆನಂದ ಅನುಭವಿಸುತ್ತಿದ್ದೇವೆ.  ಮದುವೆ ಎನ್ನುವುದು ಇಬ್ಬರ ನಡುವೆ ಚರ್ಚೆಯಾಗುವ ವಿಷಯ. ನಮಗೆ ಅನಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ, ಆದರೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದಿದ್ದರು. 

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ-ಅಮ್ಮ ಆಗ್ತಿದ್ದಾರಾ? ನಟ ಹೇಳಿದ್ದೇನು?

ಇದೀಗ ಈ ಜೋಡಿ ಮತ್ತೆ ಕಾಣಿಸಿಕೊಂಡು ಮತ್ತೆ ಟ್ರೋಲ್​ಗೆ ಒಳಗಾಗಿದೆ. ರಾತ್ರಿಯ ವೇಳೆ ಹೊರಗಡೆ ಹೋಗಿರೋ ಈ ಜೋಡಿ ಪಾಪರಾಜಿಗಳ ಕೈಗೆ ಸಿಕ್ಕಿಬಿದ್ದಿವೆ. ಇವರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ಇದರಲ್ಲಿ ಅರ್ಜುನ್​ ಕಪೂರ್​  (Arjun Kapoor)   ಗ್ಲಾಸ್​ ಧರಿಸಿದ್ದು ಕೂಡ ಸಾಕಷ್ಟು ಟ್ರೋಲ್​ಗೆ ಕಾರಣವಾಗಿದೆ. ಜೊತೆಗೆ ಮಲೈಕಾ ಜೊತೆ ಅರ್ಜುನ್​ ಜೋಡಿ ಮ್ಯಾಚ್​ ಆಗ್ತಿಲ್ಲ ಎಂದು ಹಲವರು ನೆಗೆಟಿವ್​ ಕಮೆಂಟ್​ ಹಾಕುತ್ತಿದ್ದಾರೆ. ಬುಡ್ಡಿ ಜೊತೆ ಯುವಕ ಎಂದು ಹಲವರು ಹೇಳುತ್ತಿದ್ದರೆ, ಇವಳಿಗೆ ಇಷ್ಟು ಚಿಕ್ಕ ವಯಸ್ಸಿನವನ ಜೊತೆ ಡೇಟಿಂಗ್​  ಮಾಡಲು ನಾಚಿಕೆ ಆಗಲ್ವಾ ಎಂದು ಕೆಲವರು ಏಕವಚನದಲ್ಲಿಯೇ ಪ್ರಶ್ನಿಸಿದ್ದಾರೆ. ಕೆಲವರಂತೂ ಮಲೈಕಾ ಅವರಿಗೆ ಮುದಿ ಕುದುರೆ ಎಂದು ಹೇಳುತ್ತಿದ್ದರೆ, ಅದಕ್ಕೆ ರಿಪ್ಲೈ ಮಾಡಲಾಗಿದ್ದು, ಮುದಿ ಕುದುರೆಗೆ ಯುವ ಜಾಕಿ ಎಂದಿದ್ದಾರೆ. ಇಂಥ ಜೋಡಿ ನೋಡಲು ಅಸಹ್ಯ ಆಗುತ್ತಿದೆ, ಥೂ ಎಂದು ಮತ್ತೆ ಕೆಲವರು ಕಮೆಂಟ್​ ಹಾಕುತ್ತಿದ್ದಾರೆ. ಆಂಟಿಯನ್ನು ನೋಡಲು ಸಾಧ್ಯವಾಗದೇ ರಾತ್ರಿ ವೇಳೆ ಅರ್ಜುನ್​ ಗ್ಲಾಸ್​ ಹಾಕಿಕೊಂಡಂತಿದೆ ಎಂದೂ ಕಮೆಂಟ್​ ಹಾಕಿದ್ದಾರೆ. 

ಆದರೆ ಮಲೈಕಾ ಫ್ಯಾನ್ಸ್​ ಆಕೆಯ ಫಿಗರ್​ಗೆ ಫಿದಾ ಆಗಿದ್ದಾರೆ. ಇಷ್ಟು ವಯಸ್ಸಾದರೂ ದೇಹವನ್ನು ಎಷ್ಟು ಫಿಟ್​ ಆಗಿ ಇಟ್ಟುಕೊಂಡಿದ್ದಾರೆ ಎಂದು ಕಮೆಂಟ್ಸ್​ನಲ್ಲಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಆಕೆಗಿಂತ ಅರ್ಜುನ್​ 12 ವರ್ಷ ಚಿಕ್ಕವರಾದರೂ ಜೊತೆಯಾಗಿದ್ದಾರೆ ಅರ್ಜುನ್​ ಅವರೇ ದೊಡ್ಡವರು ಎನಿಸುತ್ತಾರೆ ಎಂದೂ ಕೆಲವರು ಅನಿಸಿಕೆ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಈ ಜೋಡಿ ಕುರಿತು  ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಶುರುವಾಗಿತ್ತು.  ಅದೇನೆಂದರೆ ಮಲೈಕಾ ಅರೋರಾ ಗರ್ಭಿಣಿಯಾಗಿದ್ದಾರೆ ಎನ್ನುವುದು. ಮಲೈಕಾ ಅರೋರಾ ಅರ್ಜುನ್‌ ಕಪೂರ್‌ ಜತೆ ಮದುವೆ ಆಗದೇ, ಗರ್ಭಿಣಿ ಆಗಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಮತ್ತೆ ಹಲ್‌ಚಲ್‌ ಸೃಷ್ಟಿಸಿತ್ತು. ಇದನ್ನು ಕೇಳಿ  ಗರಂ ಆಗಿದ್ದ ಅರ್ಜುನ್​ ಕಪೂರ್​,  'ನಮ್ಮ ವೈಯಕ್ತಿಕ ಬದುಕಿನೊಂದಿಗೆ ಆಟವಾಡುವ ಧೈರ್ಯ ಬೇಡ. ಸೆಲೆಬ್ರಿಟಿಗಳೂ (Celebrity) ಮನುಷ್ಯರು ಎಂಬುದನ್ನು ಜನರು ಮರೆತಂತಿದೆ.  ನೆಗೆಟಿವಿಟಿ ಹರಡುವುದು ಬಹಳ ಸುಲಭ. ನಾವು ಕಲಾವಿದರು. ನಮಗೂ ಒಂದು ವೈಯಕ್ತಿಕ ಜೀವನವಿದೆ. ಈಗಾಗಲೇ ನಮ್ಮ ಜೀವನದಲ್ಲಿ ನೀವೂ ಎಂಟ್ರಿ ಆಗಿದ್ದೀರಿ. ಹಾಗಾಗಿ ಏನೂ ವಿಚಾರ ಹೊರಹಾಕಬೇಕಿದ್ದರೂ ಸತ್ಯಾಸತ್ಯತೆ ಗಮನದಲ್ಲಿರಲಿ. ಊಹೆ ಮಾಡಿ ಬರೆಯುವುದಲ್ಲ. ಏಕೆಂದರೆ ನಾವೂ ಮನುಷ್ಯರೇ. ಏನಾದರೂ ಸುದ್ದಿಯನ್ನು ಹರಡುವ ಮುನ್ನ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಿ' ಎಂದು ಖಾರವಾಗಿ ಪ್ರತಿಕ್ರಿಯೆ  ನೀಡಿದ್ದರು. 

Arjun Kapoor ಜತೆಗಿನ ಪ್ರೀ ಹನಿಮೂನ್​ ಅನುಭವ ಹಂಚಿಕೊಂಡ ನಟಿ ಮಲೈಕಾ!

Latest Videos
Follow Us:
Download App:
  • android
  • ios